ನೋಟಾ ಪರ ಪ್ರಚಾರ ಮಾಡುತ್ತಿಲ್ಲ ಎಂದ ತೇಜಸ್ವಿನಿ ಅನಂತ ಕುಮಾರ್

Recommended Video

      Lok Sabha Elections 2019:ಮತ್ತೆ ಟ್ವೀಟ್ ಮಾಡಿದ ತೇಜಸ್ವಿನಿ ಹೇಳಿದ್ದೇನು?

      ಬೆಂಗಳೂರು, ಏ.15: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ದಿವಂಗತ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಬದಲಿಗೆ ಯುವ ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದು ರಾಷ್ಟ್ರಮಟ್ಟದಲ್ಲೇ ಸುದ್ದಿಯಾಗಿತ್ತು.

      ಈಗ ಕ್ಷೇತ್ರದಲ್ಲಿ ನೋಟಾ ಪರ ಮತ ಚಲಾಯಿಸುವಂತೆ ತೇಜಸ್ವಿನಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಹರಡಿದೆ. ಈ ಕುರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

      Tejaswini ananth kumar rejects nota campaign allegation

      ಆದರೆ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಖುದ್ದು ಸ್ಪಷ್ಟನೆ ನೀಡಿರುವ ತೇಜಸ್ವಿನಿ ಅನಂತ ಕುಮಾರ್ , ನೋಟಾ ಪರವಾಗಿ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಕೆಲವರು ಸುಳ್ಳುಸಿದ್ದಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

      ಇದು ದುರುದ್ದೇಶಪೂರ್ವಕವಾಗಿದೆ. ನನಗೆ ಬಿಜೆಪಿಗೆ ಮತ ನೀಡಿ ದೇಶ ಮೊದಲು , ಮೋದಿ ಮತ್ತೊಮ್ಮೆ ಎನ್ನುವುದು ಮುಖ್ಯವಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

      ಈ ಹಿಂದೆ ತೇಜಸ್ವಿನಿ ತೇಜಸ್ವಿ ಸೂರ್ಯ ಪರ ಪ್ರಚಾರ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದವು. ಆದರೆ ಅಮಿತ್ ಶಾ, ರೋಡ್ ಶೋ ಹಾಗೂ ಇನ್ನಿತರೆ ಕಾರ್ಯಕ್ರಮಗಳಲ್ಲಿ ತೇಜಸ್ವಿನಿ ಭಾಗವಹಿಸಿ ಆ ಆರೋಪಗಳಿಗೆ ತೆರೆ ಎಳೆದಿದ್ದರು. ಈಗ ತೇಜಸ್ವಿನಿ ಅನಂತ ಕುಮಾರ್ ಹೆಸರಲ್ಲಿ ನೋಟಾ ಪರ ಮತ ಚಲಾಯಿಸುವಂತೆ ಮನವಿ ಮಾಡಿರುವ ಸಂದೇಶಗಳು ಹರಿದಾಡುತ್ತಿವೆ.

      ಬಿಜೆಪಿ ನಾಯಕರು ಈ ಸಂದೇಶದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+