Bengaluru International Airport: ಹೊಸ ದಂಡ ನಿಯಮಕ್ಕೆ ಟ್ಯಾಕ್ಸಿ ಚಾಲಕರ ವಿರೋಧ, ಪ್ರಯಾಣಿಕರಿಗೆ ಸಂಕಷ್ಟ ನಿರೀಕ್ಷೆ
Bengaluru International Airport: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳುವ ಮತ್ತು ಅಲ್ಲಿಂದ ನಗರದತ್ತ ಬರುವ ಪ್ರಯಾಣಿರಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಏರ್ಪೋರ್ಟ್ನಲ್ಲಿ ಕ್ಯಾಬ್ ನಿಲುಗಡೆಗೆ ಸಮಯಾವಕಾಶ ಮಿತಿ ಹೇರಿರುವುದು ಮತ್ತು ದಂಡ ನಿಯಮ ಜಾರಿಗೆ ತಂದಿರುವುದು. ಹೊಸ ನಿಯಮ ವಿರುದ್ಧ ಕನ್ನಡಪರ ಹೋರಾಟಗಾರರ ಸಹಕಾರದಲ್ಲಿ ಟ್ಯಾಕ್ಸಿ ಚಾಲಕರು ಪ್ರತಿಭಟಿಸಿದ್ದಾರೆ.
ಏರ್ಪೊರ್ಟ್ ಸಂಪರ್ಕಿಸುವ ಹೆದ್ದಾರಿ ರಸ್ತೆ ಸಾದನಹಳ್ಳಿ ಟೋಲ್ ಬಳಿ ಟ್ಯಾಕ್ಸಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ಇದರಿಂದ ಏರ್ಪೋರ್ಟ್ಗೆ ತೆರಳುವ ದೈನಂದಿನ ಸಾವಿರಾರು ಜನರಿಗೆ ತೊಂದರೆ ಉಂಟಾಯಿತು. ಈ ಹೋರಾಟ ಮುಂದುವರಿದರೆ, ಏರ್ಪೋರ್ಟ್ನಲ್ಲಿ ಟ್ಯಾಕ್ಸಿ ಸೇವೆಗೆ ಅಡಚಣೆ ಉಂಟಾಗಲಿದೆ. ಸಾದನಹಳ್ಳಿ ಟೋಲ್ ಬಳಿ ದಟ್ಟಣೆ ನಿರ್ಮಾಣವಾಗಲಿದೆ. ಏರ್ಪೋರ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚಾರ ನಿಧಾನಗೊಳ್ಳುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಟ್ಯಾಕ್ಸಿ ಚಾಲಕರ ಒಕ್ಕೂಟಗಳು ಹೊಸ ದಂಡ ನಿಯಮ ಟ್ಯಾಕ್ಸಿ ಚಾಲಕರಿಗೆ ಹೊರೆ ಉಂಟು ಮಾಡಲಿದೆ ಎಂದು ಆರೋಪಿಸಿವೆ. ಈ ನಿಯಮ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟಿವೆ. ಹೋರಾಟಗಾರರ ಈ ಬೇಡಿಕೆ ಈಡೇರದಿದ್ದರೆ ಏರ್ಪೋರ್ಟ್ಗೆ ನಿತ್ಯ ಓಡಾಡುವ ಸಾವಿರಾರು ಪ್ರಯಾಣಿಕರು ಹಾಗೂ ಇತರ ಜಿಲ್ಲೆಗಳ ಜನರಿಗೆ ತೊಂದರೆ ಆಗಬಹುದು. ವಿಮಾನ ನಿಲ್ದಾಣಗಳಲ್ಲಿ ಪಿಕ್ ಅಪ್ ಸೇವೆ ನಿಲ್ಲಿಸಿಬಿಡಬಹುದು. ಏರ್ಪೋರ್ಟ್ ಸಂಪರ್ಕ ಸಾಧಿಸುವ ಇತರ ವಾಹನಗಳಿಗೂ ತೊಂದರೆ ಆಗಬಹುದು.
ಏರ್ಪೋರ್ಟ್ ಹೊಸ ನಿಯಮಗಳೇನು?
ಹೊಸ ನಿಯಮಗಳ ಪ್ರಕಾರ, ಬೆಂಗಳೂರು ಏರ್ಪೋರ್ಟ್ ಆವರಣದಲ್ಲಿ ಹಳದಿ ಬೋರ್ಡ್ ಹೊಂದಿರುವ ವಾಣಿಜ್ಯ ವಾಹನಗಳು (ಟ್ಯಾಕ್ಸಿ, ಕ್ಯಾಬ್) ಗಳು ಎಂಟು ನಿಮಿಷಗಳವರೆಗೆ ಉಚಿತವಾಗಿ ಪಿಕ್ಅಪ್ ಮತ್ತು ಡ್ರಾಪ್ ವೇಳೆ ಕಾಯಬಹುದು. 8 ನಿಮಿಷಗಳ ನಂತರ 13 ನಿಮಿಷಗಳವರೆಗೆ ನಿಂತರೆ ಆಗ 150 ರೂ. ದಂಡ ಪಾವತಿಸಬೇಕಾಗುತ್ತದೆ. 13 ರಿಂದ 18 ನಿಮಿಷಗಳವರೆಗೆ ಟ್ಯಾಕ್ಸಿಗಳು ನಿಂತರೆ 300 ರೂ. ದಂಡ ಹೇರಲಾಗುತ್ತದೆ. ಈ ಪಾರ್ಕಿಂಗ್ ನಿಯಮ ಉಲ್ಲಂಘನೆ ಆದರೆ, ವಾಹನಗಳನ್ನು ಟೊಯಿಂಗ್ ಸಹ ಮಾಡಬಹುದೆಂದು ನಿಯಮ ರೂಪಿಸಲಾಗಿದೆ. ಇದು ಏರ್ಪೋರ್ಟ್ ಟರ್ಮಿನಲ್ 1, 2ಕ್ಕೆ ಅನ್ವಯವಾಗಲಿದೆ.
ಈ ಟ್ಯಾಕ್ಸಿ ಚಾಲಕರು ಸಮಯ ಮಿತಿಗಳು ನಿಯಗಳು ಅವಾಸ್ತವಿಕವಾಗಿವೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಪೀಕ್ ಸಮಯದಲ್ಲಿ ಹೆಚ್ಚು ಹೊತ್ತು ನಿಲ್ಲಬೇಕಾಗುತ್ತದೆ. ದಟ್ಟಣೆ ವೇಳೆ ಹೀಗೆ ದಂಡ ವಿಧಿಸಿದರೆ ಸಮಸ್ಯೆ ಆಗುತ್ತದೆ ಎಂದು ಟ್ಯಾಕ್ಸಿ ಚಾಲಕರ ಒಕ್ಕೂಟಗಳು ವಿರೋಧಿಸಿ ಪ್ರತಿಭಟಿಸಿವೆ. ಸದ್ಯ ಈ ಬಗ್ಗೆ ಕೆಐಎಎಲ್ಗೆ ಮನವಿ ಮಾಡಲಾಗಿದೆ.
ಪ್ರಯಾಣಿಕರಿಗೆ ಪರ್ಯಾಯ ಆಯ್ಕೆಗಳು ಏನು?
ಬೆಂಗಳೂರು ಏರ್ಪೋರ್ಟ್ನಿಂದ ಬರುವ ಪ್ರಯಾಣಿಕರಿಗೆ ಟ್ಯಾಕ್ಸಿ ಸಿಗದಿದ್ದ ಪಕ್ಷದಲ್ಲಿ ಅವರು, BMTC ವಾಯು ವಜ್ರ ಮೂಲಕ ಬೆಂಗಳೂರಿನ ಯಲಹಂಕ, ವಿಜಯನಗರ, ಹೆಬ್ಬಾಳ, ಮೆಜೆಸ್ಟಿಕ್ ಸೇರಿದಂತೆ ಇತರ ಮಾರ್ಗಗಳಲ್ಲಿ ಸಂಚರಿಸಬಹುದಾಗಿದೆ. ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗದರೆ ಬಿಎಂಟಿಸಿ ಸಾರಿಗೆ ಅವಲಂಬನೆ ಅತ್ಯುತ್ತಮ ಆಯ್ಕೆ ಆಗಿದೆ. ಮುಂದಿನ ಬೆಳವಣಿಗೆ ನೋಡಿಕೊಂಡು ಪ್ರಯಾಣಿಕರು ತಮ್ಮ ಏರ್ಪೋರ್ಟ್ ಪ್ರಯಾಣವನ್ನು ಸೂಕ್ತ ರೀತಿಯಲ್ಲಿ ಯೋಜಿಸಿಕೊಳ್ಳಬೇಕಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications