ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರಿಗೆ ಕಡಿತ ವಿವಾದ: ಮೊಬೈಲ್ ಕಂಪನಿ ಪರ ಹೈ ತೀರ್ಪು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 10: ಮೊಬೈಲ್ ವಿತರಕರಿಗೆ ದೊಡ್ಡ ಸಂಖ್ಯೆಯಲ್ಲಿ ಪ್ರಿ ಪೇಡ್ ಕಾರ್ಡ್, ಸಂಬಂಧಿತ ಸ್ಟಾರ್ಟರ್ ಕಿಟ್ ಹಾಗೂ ರಿಚಾರ್ಚ್ ವೋಚರ್‌ಗಳನ್ನು ಕಡಿಮೆ ದರದಲ್ಲಿ ಪೂರೈಸಿದ ಸಂದರ್ಭದಲ್ಲಿ ತೆರಿಗೆ ಕಡಿತ ಮಾಡಿಕೊಳ್ಳುವುದು ಇನ್ನು ಮುಂದೆ ಕಂಪನಿಯ ಜವಾಬ್ದಾರಿಯಲ್ಲ.

ಹೀಗೆಂದು ರಾಜ್ಯ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ. ಏರ್‌ಟೆಲ್, ವೊಡಾಫೋನ್ ಮತ್ತು ಟಾಟಾ ಟೆಲಿ ಸರ್ವೀಸಸ್ ಲಿ. ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾ. ಎನ್. ಕುಮಾರ್ ಮತ್ತು ನ್ಯಾ. ಬಿ. ಮನೋಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. [ನೋಕಿಯಾ ಬಂದ್, ತಿರುಗಿಬಿದ್ದ ಉದ್ಯೋಗಿಗಳು]

high

ಮೇಲೆ ಹೇಳಿದ ಸಂದರ್ಭದಲ್ಲಿ ತೆರಿಗೆ ಕಡಿತಗೊಳಿಸದ ಕಂಪನಿಗಳ ಕ್ರಮಕ್ಕೆ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಿತ್ತು. ದಂಡದ ಮೊತ್ತವನ್ನು ತೆರಿಗೆ ಜೊತೆ ತುಂಬುವಂತೆ ಮೊಬೈಲ್ ಕಂಪನಿಗಳಿಗೆ ಸೂಚಿಸಿತ್ತು. ಮೊಬೈಲ್ ವಿತರಕರು ಮತ್ತು ಕಂಪನಿಯ ಸಂಬಂಧವನ್ನು 'ಮಾಲೀಕ ಹಾಗೂ ಏಜೆಂಟ್' ಎಂದು ತೆರಿಗೆ ಇಲಾಖೆ ವಿಶ್ಲೇಷಿಸಿತ್ತು. ಇದನ್ನು ಪ್ರಸ್ನಿಸಿ ಕಂಪನಿಗಳು ಮನವಿ ಸಲ್ಲಿಸಿದ್ದವು. [ಭದ್ರತಾ ವೈಫಲ್ಯ, ಚೀನಾ ಮೊಬೈಲ್ ಸಂಸ್ಥೆ ವಾದವೇನು]

ಮನವಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ತೆರಿಗೆ ಇಲಾಖೆಯ ಮಾಲೀಕ ಮತ್ತು ಏಜೆಂಟ್ ವಾದವನ್ನು ತಳ್ಳಿಹಾಕಿ, ಇದು ವ್ಯಾಪಾರದಲ್ಲಿ ಸಾಮಾನ್ಯವಾಗಿ ನೀಡುವ ವಿನಾಯಿತಿ ಅಷ್ಟೇ ಎಂದು ಸ್ಪಷ್ಟಪಡಿಸಿತು.

English summary
High Court of Karnataka has ruled that mobile companies are not liable to deduct tax at source on the discount given to distributors. The mobile companies had questioned the demand made by the Income-Tax Department for payment of tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X