ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಗೆ 921 ಎಲೆಕ್ಟ್ರಿಕ್ ಬಸ್ ಪೂರೈಸಲು ಒಪ್ಪಂದ ಮಾಡಿಕೊಂಡ ಟಾಟಾ ಮೋಟಾರ್ಸ್

|
Google Oneindia Kannada News

ಬೆಂಗಳೂರು, ಆಗಸ್ಟ್ 19: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (ಬಿಎಂಟಿಸಿ) 921 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲು ಆರ್ಡರ್ ಪಡೆದಿರುವುದಾಗಿ ಟಾಟಾ ಮೋಟಾರ್ಸ್ ಪ್ರಕಟಿಸಿದೆ. ಕಂಪನಿಯು ಒಪ್ಪಂದದ ಪ್ರಕಾರ 12 ವರ್ಷಗಳವರೆಗೆ 12 ಮೀಟರ್ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಕೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಮಾತನಾಡಿ, "ಟಾಟಾ ಮೋಟಾರ್ಸ್‌ಗೆ 921 ಎಲೆಕ್ಟ್ರಿಕ್ ಬಸ್‌ಗಳ ಆದೇಶ ನೀಡಲಾಗಿದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ಸ್ವಚ್ಛ, ಸುಸ್ಥಿರ ನಗರ ಬೆಂಗಳೂರಿನ ಹೆಚ್ಚುತ್ತಿರುವ ಸಾರಿಗೆ ಅಗತ್ಯಕ್ಕೆ ಈ ಆದೇಶವು ಸಹಕಾರಿಯಾಗಿದೆ" ಎಂದು ಹೇಳಿದರು.

ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆಗಾಗಿ ಗರಿಷ್ಠ ಪ್ರಯಾಣಿಕರನ್ನು ಆಕರ್ಷಿಸುವ ಆಧುನಿಕ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿ ಸಂತೋಷಪಡುತ್ತದೆ ಎಂದು ಸತ್ಯವತಿ ಹೇಳಿದರು.

Tata Motors Will Supply 921 EV Buses To BMTC: Bengaluru Will Get More E Buses

ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹುವಾ ಆಚಾರ್ಯ ಪ್ರತಿಕ್ರಿಯೆ ನೀಡಿ, "ಬಿಎಂಟಿಸಿಯು ಸಿಇಎಸ್‌ಎಲ್‌ನ ಗ್ರ್ಯಾಂಡ್ ಚಾಲೆಂಜ್ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗಾಗಿ ತನ್ನ ಆದೇಶವನ್ನು ನೀಡಿದೆ. ಇದು ನಾವು ನಡೆಸುತ್ತಿರುವ ಎಲೆಕ್ಟ್ರಿಕ್ ಬಸ್ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು." ಎಂದು ಹೇಳಿದ್ದಾರೆ.

ದೇಶಾದ್ಯಂತ 715 ಬಸ್ ಪೂರೈಸಿರುವ ಟಾಟಾ ಮೋಟಾರ್ಸ್

ಕಳೆದ ಒಂದು ತಿಂಗಳಲ್ಲಿ ಟಾಟಾ ಮೋಟಾರ್ಸ್ ಈಗಾಗಲೇ ದೆಹಲಿ ಸಾರಿಗೆ ನಿಗಮದಿಂದ (ಡಿಟಿಸಿ) 1,500 ಎಲೆಕ್ಟ್ರಿಕ್ ಬಸ್‌ಗಳಿಗೆ ಮತ್ತು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಯಿಂದ (ಡಬ್ಲ್ಯೂಬಿಟಿಸಿ) 1,180 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲು ಆರ್ಡರ್ ಪಡೆದಿದೆ.

Tata Motors Will Supply 921 EV Buses To BMTC: Bengaluru Will Get More E Buses

ಇಲ್ಲಿಯವರೆಗೆ, ಟಾಟಾ ಮೋಟಾರ್ಸ್ ದೇಶಾದ್ಯಂತ 715ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಿದೆ, ಇದು ಒಟ್ಟು 40 ಮಿಲಿಯನ್ ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಪ್ರಯಾಣಿಸಿವೆ.

ಬೆಂಗಳೂರಿಗೆ ಪ್ರಯೋಜನವಾಗುವ ವಿಶ್ವಾಸ

ಟಾಟಾ ಮೋಟಾರ್ಸ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಬ್ಯಾಟರಿ-ಎಲೆಕ್ಟ್ರಿಕ್, ಹೈಬ್ರಿಡ್, ಸಿಎನ್‌ಜಿ, ಎಲ್‌ಎನ್‌ಜಿ ಮತ್ತು ಹೈಡ್ರೋಜನ್ ಫ್ಯೂಯೆಲ್ ಸೆಲ್ ತಂತ್ರಜ್ಞಾನ ಸೇರಿದಂತೆ ಪರ್ಯಾಯ ಇಂಧನ ತಂತ್ರಜ್ಞಾನದಿಂದ ಚಾಲಿತವಾದ ನವೀನ ಚಲನಶೀಲತೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಕಷ್ಟು ಕೆಲಸ ಮಾಡಿದೆ.

Recommended Video

ಬಡವರ ಪಾಲಿನ ಭಾಗ್ಯದಾತ ಡಿ.ದೇವರಾಜ ಅರಸು ಜನ್ಮದಿನ | OneIndia Kannada

ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ನಿವಾಸಿಗಳಿಗೆ ಪ್ರಯೋಜನಕಾರಿಯಾಗಲಿವೆ ಎಂಬ ವಿಶ್ವಾಸವಿದೆ ಎಂದು ಟಾಟಾ ಮೋಟಾರ್ಸ್‌ನ ಪ್ರಾಡಕ್ಟ್ ಲೈನ್ - ಬಸ್‌ಗಳ ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ ಅಭಿಪ್ರಾಯ ಪಟ್ಟಿದ್ದಾರೆ.

English summary
Tata Motors has won an order of 921 electric buses from Bengaluru Metropolitan Transport Corporation (BMTC). The company announced theat, company will supply, operate and maintain 12-metre electric buses for 12 years, as per the contract.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X