ಯಜಮಾನ ಸಿನೆಮಾದ ಹಾಡಿಗೆ ಈಗ ವಿಚಿತ್ರ ಅರ್ಥ ಕಲ್ಪಿಸಿ ಹಾಡಿದ ತಮಿಳು ಹುಡುಗರು: ವಿಡಿಯೊ ಫುಲ್ ವೈರಲ್
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಚಾರದ (ಕಾಮಿಡಿ, ಪ್ರೀತಿ, ಪ್ರೇಮ ಕಥೆಗಳು, ವಿಚಿತ್ರ ರೀಲ್ಸ್) ಬಗ್ಗೆ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಚಾಮರಾಜನಗರ ಜಿಲ್ಲೆಯ ತಾತಾನೋರ್ವ ಇರೋವಾರ್ಗೂ ಎಂಜಾಯ್ ಮಾಡಬೇಕು. ಸತ್ತ ಮೇಲೆ ಏನು ಮಾಡೋದಿಕ್ಕೆ ಆಗೋದಿಲ್ಲ ಎನ್ನುವ ಮಾತು ಭಾರೀ ವೈರಲ್ ಆಗಿತ್ತು. ಇದೀಗ ತಮಿಳು ಹುಡುಗರು ಹಾಡಿದ ಆ ವಿಭಿನ್ನವಾಗಿ ಹಾಡೊಂದರ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿಷ್ಣುವರ್ಧನ್ ನಟನೆಯ ಯಜಮಾನ ಸಿನೆಮಾ 2000ನೇ ಇಸವಿಯಲ್ಲಿ ಬಂದಿದ್ದು, ಇಲ್ಲಿಗೆ 23 ವರ್ಷ ಆಗಿದೆ. ಇನ್ನು ಆಗಿನ ಕಾಲದಲ್ಲೇ ಏನು ತಂತ್ರಜ್ಞಾನದ ಅಭಿವೃದ್ಧಿ ಇಲ್ಲದಿದ್ದಾಗಲೇ ಭಾರೀ ಸದ್ದು ಮಾಡಿದ್ದ ಸಿನೆಮಾ ಅದು. ಈಗಲೂ ಕೂಡ ಮನೆಯಲ್ಲಿ ಟಿವಿಯಲ್ಲಿ ಈ ಸಿನೆಮಾ ಹಾಕಿದರೆ ಕುಟುಂಬದವರೆಲ್ಲ ಒಟ್ಟಿಗೆ ಕುಳಿತುಕೊಂಡು ನೋಡುತ್ತಾರೆ. ಇದೇ ಸಿನಿಮಾದ "ನಮ್ಮ ಮನೆಯಲಿ ದಿನವು ದಿನವು ಚೈತ್ರವೆ" ಎಂಬ ಹಾಡಿನ ರೀತಿಯೇ ಇದೀಗ ತಮಿಳು ಹುಡುಗರು ವಿಭಿನ್ನ ಅರ್ಥ ಕಲ್ಪಿಸಿ ಹಾಡಿರುವುದು ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

"ನಮ್ಮ ಮಮ್ಮಿಗೂ ಎದುರುಮನೆ ಆಂಟಿಗೂ ಜಗಳವೇ, ಪ್ರತಿದಿನ ನಡೆಯುವ ಜಗಳವ ತಡೆಯಲು ಸಾಧ್ಯವೇ. ಮಮ್ಮಿಗೂ.. ಆ ಆಂಟಿಗೂ.. ಒಂದೇ ಅನುಮಾನ, ನಮ್ಮಪ್ಪ ಯಾರಿಗೆ ಯಜಮಾನ," ಎಂದು ತಬಲ ಬಾರಿಸುವ ಮೂಲಕ ತಮಿಳು ಹುಡುಗರು ವಿಭಿನ್ನವಾಗಿ ಹಾಡಿದ್ದಾರೆ. ಆಗ ಫೇಮಸ್ ಆಗಿದ್ದ "ನಮ್ಮ ಮನೆಯಲಿ ದಿನವು ದಿನವು ಚೈತ್ರವೆ" ಎಂಬ ಯಜಮಾನ ಸಿನಿಮಾದ ಹಾಡಿಗೆ ಇದೀಗ ಹೀಗೆ ಬೇರೆ ಅರ್ಥ ಕಲ್ಪಿಸಿ ಹಾಡಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗೆಯೇ ಇದಕ್ಕೆ ಪ್ರತಿಕ್ರಿಯೆಗಳು ಕೂಡ ವಿಚಿತ್ರವಾಗಿ ಬರುತ್ತಿವೆ.
ತಮಿಳು ಹುಡುಗರು ಹಾಡಿರುವ ಈ ಹಾಡು ಇದೀಗ ಭಾರೀ ಫೇಮಸ್ ಆಗಿದ್ದು, ನೋಡುಗರು, ಕೇಳುಗರನ್ನು ರಂಜಿಸುವಂತಿದೆ. ಹಳೇ ಕಾಲದ ಸಿನೆಮಾಗಳ ಹಾಡುಗಳು ಎಲ್ಲೋ ಒಂದು ಕಡೆ ಮರೆಯಾಗುತ್ತಿದ್ದವು. ಆದರೆ ಈ ರೀತಿಯ ರೀಲ್ಸ್‌ಗಳಿಂದಾದರೂ ಹೊರಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಇಂತಹ ರೀಲ್ಸ್ ಹಾಡುಗಳಿಗೆ ನೋಡುಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ.
ಅಷ್ಟೇ ಅಲ್ಲದೆ ತಮಿಳಿಗರು ಇಷ್ಟು ಚಂದವಾಗಿ ಕನ್ನಡದಲ್ಲಿ ಹಾಡುಗಳನ್ನು ಹಾಡುತ್ತರಲ್ಲ ಅದೇ ಒಂದೆಡೆ ಖಷಿಯ ವಿಚಾರವಾಗಿದೆ. ಇದು ಕೇಳುಗರ ಕಿಮಿಗೆ ಕಟ್ಟ ಅರ್ಥ ಕಲ್ಪಿಸಬಹುದು. ಆದರೆ ನೀವು ಇನ್ನೊಂದು ರೀತಿಯಲ್ಲೂ ಯೋಚನೆ ಮಾಡಬಹುದಾಗಿದೆ. ಮನರಂಜನೆ ದೃಷ್ಟಿಯಿಂದ ಕಾಣುವುದು ಹಾಗೂ ನಮ್ಮ ಭಾಷೆಯಲ್ಲಿ ಬೇರೆ ಭಾಷಿಗರು ಹಾಡುಗಳನ್ನು ಸೃಷ್ಟಿ ಮಾಡುತ್ತಿರುವುದಾಗಿರಬಹುದು. ಹೀಗೆ ಧನಾತ್ಮಕವಾಗಿಯೂ ಆಲೋಚನೆ ಮಾಡಬೇಕಾಗುತ್ತದೆ.












Click it and Unblock the Notifications