Get Updates
Get notified of breaking news, exclusive insights, and must-see stories!

Hosur Airport: ಬೆಂಗಳೂರಿಗೆ ಶಾಕ್‌, ಹೊಸೂರು ಏರ್‌ಪೋರ್ಟ್‌ ವಿಚಾರದಲ್ಲಿ ಮಹತ್ವದ ಹೆಜ್ಜೆ

ಬೆಂಗಳೂರಿಗೆ ಸಮೀಪದಲ್ಲೇ ಇರುವ ಹೊಸೂರಿನಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಿಸಲು ತಮಿಳು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಚಾರ ಸದ್ಯಕ್ಕೆ ಸೈಲೆಂಟ್‌ ಆಗಿದ್ದು, ಅತ್ತ ಹೊಸೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭರ್ಜರಿ ತಯಾರಿ ನಡೆದಿದೆ. ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣಕ್ಕಾಗಿ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಈ ಭಾಗದಲ್ಲೇ ಏರ್‌ಪೋರ್ಟ್‌ ನಿರ್ಮಾಣ ಫಿಕ್ಸ್‌ ಎಂದು ಹೇಳಲಾಗುತ್ತಿದೆ.

ಹೊಸೂರು ಮಾತ್ರವಲ್ಲದೆ ಪ್ರಸ್ತಾವಿತ ಪರಂದೂರು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಲ್ಲಿಯೂ ವಿರೋಧ ಎದುರಾಗಿದೆ. ಇದರ ನಡುವೆಯೂ ಹೊಸರಿನಲ್ಲಿ ಏರ್‌ಪೋರ್ಟ್‌ ನಿರ್ಮಾಣಕ್ಕೆ ಬೆಳಗೊಂಡಪಲ್ಲಿ ಮತ್ತು ಶೂಲಗಿರಿಯಲ್ಲಿರುವ ತನೇಜಾ ಏವಿಯೇಷನ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಬಳಿ ಇರುವ ಜಾಗಗಳನ್ನು ಅಂತಿಮಗೊಳಿಸಿದೆ. ಈ ಜಾಗಗಳು ಸುಮಾರು 2,000 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿದ್ದು, ವಾರ್ಷಿಕವಾಗಿ 30 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

Tamil Nadu Shortlists Land Near Bengaluru For Hosur Airport Project

ಇದರ ಮುಂದಿನ ಹಂತವಾಗಿ ವಾಯುಪ್ರದೇಶದ ಅನುಮತಿಗೆ ಅಗತ್ಯವಾದ ಅಡಚಣೆ ಮಿತಿ ಮೇಲ್ಮೈ ಸಮೀಕ್ಷೆಯನ್ನು ಕೈಗೊಳ್ಳಲು ಸಲಹೆಗಾರರನ್ನು ಕೂಡ ತಮಿಳುನಾಡು ಅಂತಿಮಗೊಳಿಸಿದೆ. ಆದರೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಜಾಗಗಳು ಹತ್ತಿರದಲ್ಲೇ ಇರುವುದರಿಂದ ಈ ಯೋಜನೆಯು ವಿಳಂಬವಾಗಬಹುದು. ಏಕೆಂದರೆ 2033ರವರೆಗೆ ಕೆಂಪೇಗೌಡ ಏರ್‌ಪೋರ್ಟ್‌ ಹತ್ತಿರದಲ್ಲಿ ಬೇರೊಂದು ಏರ್‌ಪೋರ್ಟ್‌ ನಿರ್ಮಾಣ ಮಾಡುವಂತಿಲ್ಲ ಎಂಬ ಷರತ್ತನ್ನು ಹೊಂದಿದೆ.

Take a Poll

ಮತ್ತೊಂದೆಡೆ ತಮಿಳುನಾಡು 2030ರ ವೇಳೆಗೆ 100 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಉದ್ದೇಶದಿಂದ 200 ಶತಕೋಟಿ ರೂಪಾಯಿ ವೆಚ್ಚದ ಪರಂದೂರು ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಕೈಹಾಕಿದೆ. ಈ ಪ್ರಸ್ತಾವನೆಯು ಭೂಸ್ವಾಧೀನ ಮತ್ತು ಪರಿಸರದ ಮೇಲಿನ ಪರಿಣಾಮದ ಬಗ್ಗೆ ಟೀಕೆಗಳನ್ನು ಎದುರಿಸುತ್ತಲೇ ಇದೆ. ಇದು ಕೂಡ 4,791 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಅದರಲ್ಲಿ 2,605 ಎಕರೆಗಳು ಜೌಗು ಪ್ರದೇಶದ ಜೊತೆ 13 ಹಳ್ಳಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

Tamil Nadu Shortlists Land Near Bengaluru For Hosur Airport Project

ಪರಂದೂರು ಏರ್‌ಪೋರ್ಟ್‌ ನಿರ್ಮಾಣದ ವಿರುದ್ಧ ಪ್ರತಿಭಟನೆಗಳು 2022ರಿಂದಲೂ ನಡೆಯುತ್ತಿವೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಚೆನ್ನೈ ಮೆಟ್ರೋದ ನಾಲ್ಕನೇ ಹಂತವನ್ನು ಬೆಂಬಲಿಸುವುದನ್ನು ಮರುಪರಿಶೀಲಿಸುವಂತೆ ನಿವಾಸಿಗಳು ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌ಗೆ ಮನವಿಯೂ ಮಾಡಿದ್ದಾರೆ. ಸದ್ಯ ಈಗ ಹೊಸೂರು, ಪರಂದೂರು ಸೇರಿ ಎರಡು ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ತಮಿಳುನಾಡಿನ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಸೇರಿವೆ.

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೆಸರುವಾಸಿಯಾದ ತಮಿಳುನಾಡು, ಚೆನ್ನೈ, ಕೊಯಮತ್ತೂರು, ಮಧುರೈ ಮತ್ತು ತಿರುಚಿರಾಪಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ. ತಮಿಳುನಾಡು ಸರ್ಕಾರವು ಹೊಸೂರು ವಿಮಾನ ನಿಲ್ದಾಣವನ್ನು ಧರ್ಮಪುರಿ ಮತ್ತು ಸೇಲಂ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ಧಿಗಾಗಿ ನಿರ್ಮಾಣ ಮಾಡಲು ಮುಂದಾಗಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಕರಡು ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿದ್ದು, ರಾಜ್ಯ ಸರ್ಕಾರವು ಈಗ ಆಯ್ಕೆ ಮಾಡಲಾದ ಎರಡು ಸ್ಥಳಗಳ ವಿವರವಾದ ಅಧ್ಯಯನಕ್ಕೆ ಮುಂದಾಗಿದೆ. ಈ ಪ್ರಸ್ತಾವಿತ ವಿಮಾನ ನಿಲ್ದಾಣವು ಹೊಸೂರಿನ ಕೈಗಾರಿಕಾ ಕೇಂದ್ರದ ಸ್ಥಾನಮಾನವನ್ನು ಹೆಚ್ಚಿಸುವ ಗುರಿ ಹೊಂದಿದೆ. ಬೆಂಗಳೂರಿಗೆ ಸಮೀಪದಲ್ಲೇ ಈ ಏರ್‌ಪೋರ್ಟ್‌ ನಿರ್ಮಾಣವು ಸಿಲಿಕಾನ್‌ ಸಿಟಿ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣಕ್ಕೂ ಕೂಡ ಎಲ್ಲೆಡೆ ವಿರೋಧ ಎದುರಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+