ತಮಿಳುನಾಡು ರೌಡಿಯನ್ನು ಮುಗಿಸಲು ಬಂದವರು ಬೆಂಗಳೂರಿನಲ್ಲಿ ಜೈಲುಪಾಲು
ಬೆಂಗಳೂರು, ಸೆಪ್ಟೆಂಬರ್ 12: ಸಿಲಿಕಾನ್ ಸಿಟಿ ಬೆಂಗಳೂರಿನ ಬಾಣಸವಾಡಿಯಲ್ಲಿ ಇತ್ತೀಚಿಗೆ ನಟೋರಿಯಸ್ ರೌಡಿ ಶೀಟರ್ ಗುರುಸ್ವಾಮಿ ಮೇಲೆ ಹೊಂಚು ಹಾಕಿ ಸಂಚು ರೂಪಿಸಿ ದಾಳಿ ನಡೆದಿತ್ತು. ಸದ್ಯ ಈ ಘಟನೆ ಸಂಬಂಧ ಆರೋಪಿಗಳಿಗೆ ಬಲೆ ಬೀಸುವಲ್ಲಿ ಪೊಲೀಸರು ಯಶಸ್ಸಿ ಆಗಿದ್ದಾರೆ.
ಬಾಣಸವಾಡಿಯಲ್ಲಿ ತಮಿಳುನಾಡು ರೌಡಿಶೀಟರ್ ಗುರುಸ್ವಾಮಿ ಮೇಲೆ ಅಟ್ಯಾಕ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಘಟನೆ ಯಾಕಾಯಿತು? ಏನಿದರ ಹಿನ್ನಲೆ..? ಬಾಣಸವಾಡಿಯಲ್ಲಿ ಅಟ್ಯಾಕ್ ಆಗಲು ಕಾರಣ ಏನು..? ಆ ಅಟ್ಯಾಕ್ ಕಹಾನಿಯೇ ರೋಚಕವಾಗಿದೆ.

ಈ ಪ್ರಕರಣ ಯಶಸ್ವಿಯಾಗಿ ಭೇದಿಸಿರುವ ಪೊಲೀಸರು ಪ್ರಕರಣ ಸಂಬಂಧ ಮೂವರನ್ನು ಬಾಣಸವಾಡಿ ಪೊಲೀಸರು ಜೈಲು ಸೇರಿಸಿದ್ದಾರೆ. ಇನ್ನೂ ಪ್ರಮುಖ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಗುರುಸ್ವಾಮಿ ಆಂಡ್ ರಾಜಾ ಪಾಂಡಿಯನ್ ಗ್ಯಾಂಗ್ ತಮಿಳುನಾಡಿನ ರೌಡಿಗಳ ಲೋಕದಲ್ಲಿ ಹವಾ ಸೃಷ್ಟಿ ಮಾಡಿದವರು. ಆದರೆ ಈ ಇಬ್ಬರು ಬದ್ಧ ವೈರಿಗಳು. ಈ ಪರಮ ವೈರಿಗಳ ತಿಕ್ಕಾಟ ತಾರಕಕ್ಕೆ ಏರುತ್ತಲೇ ಇತ್ತು. ನಟೋರಿಯಸ್ ರೌಡಿಗಳಾಗಿದ್ದ ಗುರುಸ್ವಾಮಿ ಹಾಗೂ ರಾಜಪಾಂಡಿಯನ್ ಟೀಮ್ ಎರಡು ತಂಡಗಳ ನಡುವೆ ಮಧುರೈನಲ್ಲಿ ಆಗಾಗ ಕೊಲೆ, ಸೂಲಿಗೆ ನಡಿತಾನೇ ಇತ್ತು.
ಇನ್ನೂ ಗುರುಸ್ವಾಮಿ ಮೇಲೆ ಸಿಟ್ಟಿಗೆ ಇತ್ತೀಚೆಗೆ ಅವನ ಮೇಲೆ ಅಟ್ಯಾಕ್ ಆಗುತ್ತದೆ ಆದರೆ ಈ ವೇಳೆ ರಾಜಾ ಪಾಂಡಿಯನ್ ಜೈಲಿನಲ್ಲೇ ಇರುತ್ತಾನೆ. ಈ ಮಧ್ಯೆಯೇ ಗುರುಸ್ವಾಮಿ ಮೇಲೆ ಅಟ್ಯಾಕ್ ಆಗುತ್ತದೆ. ಅಟ್ಯಾಕ್ ಮಾಡಿದವರು ಬೇರೆ ಯಾರೋ ಅಲ್ಲ, ರಾಜಪಾಂಡಿಯನ್ ಅಣ್ಣನ ಮಗ ಕಾಳಿಮುತ್ತು ಗುರುಸ್ವಾಮಿ ಮೇಲೆ ಅಟ್ಯಾಕ್ ಮಾಡಿಸುತ್ತಾನೆ.

ಮಧುರೈ ಜೈಲಿನಲ್ಲಿದ್ದ ಕಾಳಿಮುತ್ತು, ಜೈಲಿನಲ್ಲಿ ಇದ್ದುಕೊಂಡೇ ಗುರುಸ್ವಾಮಿ ಕೊಲೆಗೆ ತಂಡ ರಚನೆ ಮಾಡಿದ್ದಾರೆ. ಐದು ಜನರ ತಂಡ ರಚನೆ ಮಾಡಿ, ಗುರುಸ್ವಾಮಿ ಕೊಲೆಗೆ ಕಾಳಿಮುತ್ತು ಸುಪಾರಿ ನೀಡಿರುತ್ತಾನೆ. ಕಾಳಿಮುತ್ತು ಗುರು ಸ್ವಾಮಿ ಕೊಲೆ ಮಾಡಲು ಪ್ಲಾನ್ ಮಾಡುತ್ತಿದ್ದ.
ಜೀವ ಭಯದಿಂದ ರಾಜಸ್ಥಾನದಲ್ಲಿ ಗುರುಸ್ವಾಮಿ ತಲೆ ಮರಸಿಕೊಳ್ತಾನೆ. ಆದರೆ ವೈರಿಯ ಜಾಗವನ್ನು ಪತ್ತೆ ಹಚ್ಚುವ ಕೆಲಸ ಕಾಳಿ ಮುತ್ತು ಮಾಡುತ್ತಾನೆ. ಇತ್ತೀಚಿಗೆ ಬೆಂಗಳೂರಿಗೆ ಗುರುಸ್ವಾಮಿ ಬಂದಿರುತ್ತಾನೆ. ಬೆಂಗಳೂರಿನ ಸೇನಾ ವಿಹಾರ ಅಪಾರ್ಟ್ಮೆಂಟ್‌ನಲ್ಲಿ ಪ್ಲಾಟ್ ಖರೀದಿಗೆ ಅಂತ ಬಂದಿರುತ್ತಾನೆ. ಫ್ಲ್ಯಾಟ್ ಖರೀದಿಗೆ ಬಂದವನು ವಾಪಾಸ್ ಹೋಗಬಾರದು ಅನ್ನೋ ಸ್ಕೆಚ್ ಕಾಳಿ ರೂಪಿಸುತ್ತಾನೆ.
ಅದರಂತೆ ಬೆಂಗಳೂರಿಗೆ ಬಂದಿದ್ದ ಗುರುಸ್ವಾಮಿಯನ್ನು ಸ್ಕೆಚ್ ಹಾಕಿ ಕಾಳಿ ದಾಳಿ ಮಾಡುತ್ತಾನೆ. ಗುರುಸ್ವಾಮಿ ಬೆಂಗಳೂರಿಗೆ ಬರೋದನ್ನು ಖಾತ್ರಿ ಮಾಡಿಕೊಂಡು ಖಚಿತ ಮಾಹಿತಿ ಆಧಾರದ ಮೇಲೆ ಕಾಳಿ ಮುತ್ತು ತಂಡದಿಂದ ದಾಳಿ ಮಾಡುತ್ತಾನೆ. ನವೀನ್ ಹಾಗೂ ತುಪಾಕಿ ವಿಜಯ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಅದೃಷ್ಟವಶಾತ್ ಗುರುಸ್ವಾಮಿ ಬದುಕುಳಿಯುತ್ತಾನೆ. ಈ ಪ್ರಕರಣವನ್ನು ಸಾಕಷ್ಟು ಶ್ರಮ ಪಟ್ಟು ಬೆಂಗಳೂರು ಪೊಲೀಸರು ಭೇದಿಸಿದ್ದು ಗುರುಸ್ವಾಮಿ ಅಟ್ಯಾಕ್ ಪ್ರಕರಣ ಭೇದಿಸಿದ್ದಾರೆ.











Click it and Unblock the Notifications