ತಮಿಳುನಾಡು ಸಚಿವರ ಮಗಳು ಬೆಂಗಳೂರಿನಲ್ಲಿ ರಕ್ಷಣೆಗೆ ಮನವಿ
ಬೆಂಗಳೂರು ಮಾರ್ಚ್ 09: ತಮಿಳುನಾಡಿನ ಸಚಿವ ಸಚಿವ ಶೇಖರ್ ಬಾಬು ಅವರ ನವವಿವಾಹಿತ ಪುತ್ರಿ ಬೆಂಗಳೂರಿನಲ್ಲಿ ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ತಮಿಳುನಾಡು ಮುಜರಾಯಿ ಖಾತೆ ಸಚಿವ ಪಿ.ಕೆ.ಶೇಕರ್ ಬಾಬು ಅವರ ಪುತ್ರಿ ಹಾಗೂ ವೈದ್ಯೆ ಜಯಕಲ್ಯಾಣಿ ಅವರು ಭದ್ರತೆಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮುಂದೆ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದ ಕಾರಣ ಸತೀಶ್ ಕುಮಾರ್ ಅವರನ್ನು ಮದುವೆಯಾಗಿದ್ದೇನೆ. ತನಗೆ ಮತ್ತು ತನ್ನ ಪತಿಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ. ತಮ್ಮ ವಿವಾಹ ಬಂಧನಕ್ಕೆ ಮನೆಯವರು ಒಪ್ಪಿಗೆ ನೀಡದ ಕಾರಣ ಪ್ರೇಮಿಗಳು ಕರ್ನಾಟಕದ ರಾಯಚೂರು ಜಿಲ್ಲಾ ಕೇಂದ್ರ ಪಟ್ಟಣದ ಹಾಲಸ್ವಾಮಿ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ತಮ್ಮ ಮಗಳು ನಾಪತ್ತೆಯಾಗಿದ್ದು, ಆಕೆಯನ್ನು ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ ಸಚಿವರು ಪೊಲೀಸ್ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಸಚಿವ ಶೇಖರ್ ಬಾಬು ಅವರ ಮಗಳು ಜಯ ಕಲ್ಯಾಣಿ ಕಳೆದ ವರ್ಷ ತಮಿಳುನಾಡಿನಿಂದ ನಾಪತ್ತೆಯಾಗಿದ್ದರು.ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಯುವಕನನ್ನು ಪ್ರೀತಿಸಿದ್ದ ಜಯಕಲ್ಯಾಣಿ (Jaya Kalyani) ತನ್ನ ಪ್ರಿಯಕರನನ್ನು ಮದುವೆಯಾಗಿ, ತನ್ನ ತಂದೆಯಿಂದ ತನಗೆ ರಕ್ಷಣೆ ಕೊಡಿಸಬೇಕೆಂದುಮಗಳ ಪ್ರೇಮ ಪುರಾಣ ಬೆಂಗಳೂರಿನ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮಿಳುನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಮಗಳು ಜಯಕಲ್ಯಾಣಿ 2021ರ ಸೆಪ್ಟೆಂಬರ್ನಲ್ಲಿ ಚೆನ್ನೈನಿಂದ ನಾಪತ್ತೆಯಾಗಿದ್ದರು. ಚೆನ್ನೈನಲ್ಲಿ ಜಯಕಲ್ಯಾಣಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಸತೀಶ್ ಕುಮಾರ್ನನ್ನು ಜಯಕಲ್ಯಾಣಿ ಮದುವೆಯಾಗಿದ್ದಾರೆ. ತಮ್ಮ ಪ್ರೀತಿಗೆ ತಂದೆಯ ವಿರೋಧ ಉಂಟಾದ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಅವರು ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಕಳೆದ ಆರು ವರ್ಷಗಳ ನಮ್ಮ ಪ್ರೀತಿ ವಿಷಯ ಮನೆಯಲ್ಲಿ ತಿಳಿದು ಸಾಕಷ್ಟು ವಿರೋಧ ವ್ಯಕ್ತವಾಯಿತು. ಈ ವೇಳೆ ಯೂ ಟ್ಯೂಬ್ನಲ್ಲಿ ಕನ್ನಡ ಸಂಘಟನೆ ಸಂಪರ್ಕವನ್ನು ಪಡೆದೆವು. ಭಾರತಿ ಶೆಟ್ಟಿ ಅವರ ಸಂಪರ್ಕ ಪಡೆದೆವು ಎಂದು ತಿಳಿಸಿದ್ದಾರೆ.
ಇನ್ನು ಘಟನೆ ಕುರಿತು ಮಾತನಾಡಿರುವ ಕನ್ನಡ ಸಂಘಟನೆ ಕಾರ್ಯಕರ್ತ ಭಾರತೀ ಶೆಟ್ಟಿ, ಜಯಾ ಕಲ್ಯಾಣಿ ಅವರು ನಮ್ಮ ಸಂಪರ್ಕ ಬೆಳೆಸಿದ್ದರು.












Click it and Unblock the Notifications