ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಿಂದ ರಾಜಸ್ಥಾನ, ಗುಜರಾತ್‌ಗೆ ರೈಲಲ್ಲಿ ಹೊರಟ ಟ್ರ್ಯಾಕ್ಟರ್‌

|
Google Oneindia Kannada News

ಬೆಂಗಳೂರು, ಮೇ 01 : ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತಗಳ ಸರಬರಾಜು ಮಾಡಲು ಭಾರತೀಯ ರೈಲ್ವೆ ಗೂಡ್ಸ್ ಮತ್ತು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಮೊದಲ ಬಾರಿಗೆ ನೈಋತ್ಯ ರೈಲ್ವೆ ರೈತರಿಗಾಗಿ ಟ್ರ್ಯಾಕ್ಟರ್‌ಗಳನ್ನು ಕರ್ನಾಟಕದಿಂದ ರೈಲಿನಲ್ಲಿ ಸಾಗಣೆ ಮಾಡಿದೆ.

ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರ ರೈಲು ನಿಲ್ದಾಣದಿಂದ ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯಗಳಿಗೆ ಟ್ರ್ಯಾಕ್ಟರ್‌ಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗಲಾಗಿದೆ. ಟ್ಯ್ರಾಕ್ಟರ್‌ಗಳಿಗೆ ಭಾರೀ ಬೇಡಿಕೆ ಇತ್ತು. ಆದರೆ, ಲಾರಿಗಳ ಸಂಚಾರ ಸ್ಥಗಿತವಾಗಿದ್ದು, ರೈಲಿನಲ್ಲಿ ಅವುಗಳನ್ನು ಕಳಿಸಲಾಗಿದೆ.

1,000 ಕಾರ್ಮಿಕರನ್ನು ಹೊತ್ತ ಚುಕುಬುಕು ರೈಲು ಹೊರಟಿದ್ದೆಲ್ಲಿಗೆ? 1,000 ಕಾರ್ಮಿಕರನ್ನು ಹೊತ್ತ ಚುಕುಬುಕು ರೈಲು ಹೊರಟಿದ್ದೆಲ್ಲಿಗೆ?

ಏಪ್ರಿಲ್ 29ರಂದು 175 ಟ್ರ್ಯಾಕ್ಟರ್ ರಾಜಸ್ಥಾನಕ್ಕೆ ಹೋಗಿದೆ. ಒಟ್ಟು ಎರಡು ಹಂತಗಳಲ್ಲಿ 350 ಟ್ರ್ಯಾಕ್ಟರ್‌ಗಳನ್ನು ಕರ್ನಾಟದಿಂದ ಗುಜರಾತ್ ಮತ್ತು ರಾಜಸ್ಥಾನಕ್ಕೆ ಕಳಿಸಲಾಗಿದೆ. ಈ ಮೂಲಕ ಆಟೋ ಮೊಬೈಲ್ ಕ್ಷೇತ್ರದ ಸರಕು ಸಾಗಣೆಗೂ ರೈಲ್ವೆ ಕಾಲಿಟ್ಟಿದೆ. ಒಂದು ವ್ಯಾಗನ್‌ನಲ್ಲಿ 175 ಟ್ರ್ಯಾಕ್ಟರ್ ಇಟ್ಟು ನಿಗದಿತ ಸ್ಥಳಗಳಿಗೆ ಕಳಿಸಲಾಗಿದೆ.

ತಕ್ಷಣ ರೈಲು ಸೇವೆ ಆರಂಭ; ಕೇಂದ್ರ ಸರ್ಕಾರ ಹೇಳುವುದೇನು? ತಕ್ಷಣ ರೈಲು ಸೇವೆ ಆರಂಭ; ಕೇಂದ್ರ ಸರ್ಕಾರ ಹೇಳುವುದೇನು?

ದೇಶದಲ್ಲಿ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಪ್ರಯಾಣಿಕ ರೈಲು ಸಂಚಾರವನ್ನು ಭಾರತೀಯ ರೈಲ್ವೆ ಪೂರ್ಣವಾಗಿ ನಿಲ್ಲಿಸಿದೆ. ಗೂಡ್ಸ್‌ ರೈಲುಗಳು ಸಂಚಾರ ನಡೆಸುತ್ತಿವೆ. ವಿಶೇಷ ಸರಕು ಸಾಗಣೆ ರೈಲುಗಳನ್ನು ಸಹ ರೈಲ್ವೆ ಈ ಸಂದರ್ಭದಲ್ಲಿ ಓಡಿಸುತ್ತಿದೆ.

ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ

2158 ಕಿ. ಮೀ. ಪ್ರಯಾಣ

2158 ಕಿ. ಮೀ. ಪ್ರಯಾಣ

ಟ್ರ್ಯಾಕ್ಟರ್‌ಗಳನ್ನು ಹೊತ್ತ ರೈಲು ದೊಡ್ಡಬಳ್ಳಾಪುರದಿಂದ ಹೊರಟಿದ್ದು 2158 ಕಿ. ಮೀ. ಸಂಚಾರ ನಡೆಸಿ ರಾಜಸ್ಥಾನ ತಲುಪಲಿದೆ. ರೈಲುಗಳಿಗೆ ಟ್ರ್ಯಾಕ್ಟರ್‌ಗಳನ್ನು ಲೋಡ್ ಮಾಡುವ ಚಿತ್ರಗಳನ್ನು ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ.

ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ

ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ

ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಈಗ ಟ್ರ್ಯಾಕ್ಟರ್‌ಗಳಿಗೆ ಭಾರೀ ಬೇಡಿಕೆ ಇದೆ. ಒಂದು ಕಡೆ ಲಾಕ್ ಡೌನ್ ಕಾರಣ ಕಾರ್ಮಿಕರು ಸಿಗುತ್ತಿಲ್ಲ. ಲಾರಿಗಳ ಸಂಚಾರವೂ ಬಂದ್ ಆಗಿರುವುದರಿಂದ ರೈಲಿನ ಮೂಲಕ ಅವುಗಳನ್ನು ಕಳಿಸಲಾಗಿದೆ.

ಸರಕು ಸಾಗಣೆಗೆ ವಿಶೇಷ ರೈಲು

ಸರಕು ಸಾಗಣೆಗೆ ವಿಶೇಷ ರೈಲು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಡಿಕೆಯಂತೆ ಸರಕುಗಳನ್ನು ಸಾಗಣೆ ಮಾಡಲು ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಔಷಧೀಯ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ತುರ್ತು ಸಂದರ್ಭದಲ್ಲಿ ತಲುಪಿಸುತ್ತಿದೆ.

ಮಾಸ್ಕ್, ಪಿಪಿಇ ಕಿಟ್ ತಯಾರಿ

ಮಾಸ್ಕ್, ಪಿಪಿಇ ಕಿಟ್ ತಯಾರಿ

ಕೊರೊನಾ ವಿರುದ್ಧದ ಹೋರಾಟಕ್ಕೆ ರೈಲ್ವೆ ಸಹ ಕೈ ಜೋಡಿಸಿದೆ. ರೈಲ್ವೆ ವರ್ಕ್ ಶಾಪ್‌ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ತಯಾರು ಮಾಡಲಾಗುತ್ತಿದೆ. ಪ್ರಯಾಣಿಕ ರೈಲು ಸಂಚಾರ ಆರಂಭವಾಗುವ ದಿನಾಂಕ ಇನ್ನೂ ಖಚಿತವಾಗಿಲ್ಲ.

English summary
From transporting tractors Bengaluru Division of SWR achieved a milestone. Tractors sent to Rajasthan and Gujarat from Dodballapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X