ದೇಶದ ಮೊದಲ ರೈಲ್ವೆ ಅಪಘಾತ ನಿರ್ವಹಣಾ ಕೇಂದ್ರ ಬೆಂಗಳೂರಲ್ಲಿ

ಬೆಂಗಳೂರು, ಆಗಸ್ಟ್ 14: ಬೆಂಗಳೂರು ಹೊರವಲಯದ ಹೆಜ್ಜಾಲದಲ್ಲಿ ರೈಲು ಅಪಘಾತ ನಿರ್ವಹಣೆ ಕೇಂದ್ರದ ನಿರ್ಮಾಣ ಕಾಮಗಾರಿಯು ಅಂತಿಮ ಹಂತ ತಲುಪಿದ್ದು ಸೆಪ್ಟೆಂಬರ್‌ ಅಂತ್ಯದೊಳಗೆ ಕಾಮಗಾರಿ ಮುಗಿಯಲಿದೆ.

ರೈಲು ಅಪಘಾತಕ್ಕೀಡಾಗದಂತೆ ತಡೆಯುವ ಈ ಕೇಂದ್ರವು 44.42 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ರೈಲಿನ ಬೋಗಿಯೊಂದನ್ನು ಚಲಾಯಿಸಿ ಕೃತಕವಾಗಿ ಅಪಘಾತ ಮಾಡಿ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸುವ ವಿಧಾನದ ತರಬೇತಿ ನೀಡುವ ಸೌಲಭ್ಯ ಈ ಕೇಂದ್ರದಲ್ಲಿದೆ.

ಕೇಂದ್ರದ ಕಾಮಗಾರಿಗಳು ಮುಗಿಯುತ್ತಾ ಬಂದಿದ್ದು, ಸೆಪ್ಟೆಂಬರ್‌ನಲ್ಲೇ ತರಬೇತಿ ಆರಂಭಿಸಬಹುದಾಗಿದೆ. ಈ ಕೇಂದ್ರ ನಗರದಿಂದ 25 ಕಿ.ಮೀ ದೂರದಲ್ಲಿದೆ. ಇದು ಭಾರತೀಯ ರೈಲ್ವೆ ಇಲಾಖೆಯ ಮೊದಲ ಅಪಘಾತ ನಿರ್ವಹಣೆ ಕೇಂದ್ರವಾಗಿದೆ. ಇತ್ತೀಚೆಗೆ ರೈಲು ಅಪಘಾತಗಳು ಹೆಚ್ಚುತ್ತಿರುವುದರಿಂದ ಸಿಬ್ಬಂದಿ೮ಗೆ ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡಲಾಗುತ್ತಿದೆ.

SWR to install nations first railway accident management center in Bengaluru

ರೈಲ್ವೆ ಇಲಾಖೆಯ ದೇಶದ ಎಲ್ಲಾ ಭಾಗಗಳ ಸಿಬ್ಬಂದಿಯನ್ನು ತಂಡವಾಗಿ ರಚಿಸಿ ಇಲ್ಲಿಗೆ ಕಳುಹಿಸಲಾಗುತ್ತದೆ. ರೈಲು ಅಪಘಾತವಾಗಲು ಕಾರಣಗಳು, ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತರಬೇತಿ ನೀಡಲಾಗುತ್ತದೆ. ಅಪಘಾತವಾದಾಗ ಅಥವಾ ಬೆಂಕಿ ಅಬಘಡ ಸಂಭವಿಸಿದಾಗ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮ, ವೈದ್ಯಕೀಯ ಚಿಕಿತ್ಸೆ, ಜನರಿಗೆ ನೀಡುವ ಎಚ್ಚರಿಕೆ ಮೊದಲಾದವುಗಳ ಬಗ್ಗೆತರಗತಿಯಲ್ಲಿ ಪಾಠ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+