SWR: ಬೆಂಗಳೂರಿನಿಂದ ಈ ಭಾಗಕ್ಕೆ ವಿಶೇಷ ರೈಲು ಕಾರ್ಯಾಚರಣೆ, ವೇಳಾಪಟ್ಟಿ ವಿವರ

South Western Railways: ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಆಚರಣೆಗಳ ಅಂಗವಾಗಿ ದಕ್ಷಿಣ ಪಶ್ಚಿಮ ರೈಲು (South Western Railway) ಬೆಂಗಳೂರಿನಿಂದ ಕೆಲವು ಮಾರ್ಗಗಳಲ್ಲಿ ರೈಲು ಸೇವೆ ಘೋಷಿಸಿತ್ತು. ಅದೇ ಹಬ್ಬದ ಪ್ರಯುಕ್ತ ಬೆಂಗಳೂರು SMVT-ತಿರುವನಂತಪುರಂ ಉತ್ತರ ಮಧ್ಯವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಒದಗಿಸುತ್ತಿದೆ. ಈ ರೈಲಿನ ಸಮಯ, ನಿಲುಗಡೆ ನಿಲ್ದಾಣ ವೇಳಾಪಟ್ಟಿ ವಿವರ ಇಲ್ಲಿದೆ.

SMVT ಬೆಂಗಳೂರು-ತಿರುವನಂತಪುರಂ ಕಡೆಗೆ ಹೋಗವ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು ಗುಡ್ ನ್ಯೂಸ್ ನೀಡಿದ್ದಾರೆ. ಒಂದೇ ಟ್ರಿಪ್ ಕಾರ್ಯಾಚರಣೆ ಮಾಡಲಿದೆ. ಭಕ್ತರ ಅನುಕೂಲಕ್ಕಾಗಿ ಏರ್ಪಡಿಸಿರುವ ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದೆ. ಈ ಮೂಲಕ ಜನರ ಸುಗಮ ಪ್ರಯಾಣವನ್ನು ರೈಲ್ವೆ ವಲಯ ಖಚಿತಪಡಿಸಿಕೊಳ್ಳುತ್ತಿದೆ.

SWR Arranged Bengaluru SMVT to Thiruvananthapuram North Special Train Time Table

ನವೆಂಬರ್ 22ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ SMVT ಬೆಂಗಳೂರು-ತಿರುವನಂತಪುರಂ ನಾರ್ತ್ ವಿಶೇಷ ರೈಲು (06549) ಬೆಂಗಳೂರಿನಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 6.40ಕ್ಕೆ ತಿರುವನಂತಪುರಂ ಉತ್ತರ ತಲುಪಲಿದೆ. ಇದೇ ರೀತಿಯಾಗಿ ತಿರುವನಂತಪುರಂ ನಾರ್ತ್-SMVT ಬೆಂಗಳೂರು ವಿಶೇಷ ರೈಲು (06550) ಮರಳಿ ಅಲ್ಲಿಂದ ನವೆಂಬರ್ 23ರಂದು ಭಾನುವಾರ ಬೆಳಗ್ಗೆ 9.30ಕ್ಕೆ ತಿರುವನಂತಪುರಂನಿಂದ ಹೊರಡುತ್ತದೆ. ಸೋಮವಾರ ಬೆಳಗ್ಗೆ 3.30ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ.

ವಿಶೇಷ ರೈಲಿನ ನಿಲುಗಡೆ ನಿಲ್ದಾಣಗಳು

ಈ ವಿಶೇಷ ರೈಲುಗಳು ಕೃಷ್ಣರಾಜಪುರ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊಳಚ್ಚಿ, ಪಾಳಕ್ಕಾಡ್, ತ್ರಿಶೂರ್, ಅಳುವಾ, ಎರ್ನಾಕುಳಂ ಟೌನ್, ಕೋಟಾಯಂ, ಚಂಗನಸೆರಿ, ತಿರುವಲ್ಲಾ, ಚೆಂಗಣ್ಣೂರು, ಕಾಯಂಕಂ, ಕೊಲ್ಲಂ ಮತ್ತು ವಾರ್ಕಲ ಶಿವಗಿರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಎರಡೂ ದಿಕ್ಕುಗಳಲ್ಲಿ ಇದೇ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲಲಿವೆ. ಈ ರೈಲು ಸೇವೆ 22 ಬೋಗಿಗಳನ್ನು ಒಳಗೊಂಡಿರಲಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರು ವೇಳಾಪಟ್ಟಿ ಹಾಗೂ ಇತರೆ ಮಾಹಿತಿಗಳನ್ನು ಇಂಡಿಯನ್ ರೈಲ್ವೇಸ್‌ನ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬೇಕು. ಜೊತೆಗೆ NTES ಆಪ್ ಅಥವಾ 139 ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು ಎಂದು ರೈಲು ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+