ಆರ್‌ಸಿಬಿಯನ್ನು ಟ್ರೋಲ್ ಮಾಡಿದ ಸ್ವಿಗ್ಗಿ, ಟ್ವೀಟ್ ಪೋಸ್ಟ್ ವೈರಲ್-ಇದರಲ್ಲೇನಿದೆ?
ಬೆಂಗಳೂರು, ಏಪ್ರಿಲ್, 07: 2024ನೇ ಋತುವಿನಲ್ಲಿ ಇದುವರೆಗೂ ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿದೆ. ನಿನ್ನೆ (ಏಪ್ರಿಲ್ 07) ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 5ನೇ ಪಂದ್ಯವನ್ನಾಡಿದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 20 ಓವರ್‌ಗಳಿಗೆ 183 ರನ್ ಕಲೆಹಾಕಿತು. ಇನ್ನು ಈ ರನ್‌ಗಳನ್ನು ಬೆನ್ನತ್ತಿದ ಆರ್‌ಆರ್ ತಂಡ 19.1 ಓವರ್‌ಗಳಲ್ಲಿ 189 ರನ್ ಗಳಿಸುವ ಮೂಲಕ ಗೆಲುವಿನ ನಗೆಯನ್ನು ಬೀರಿದ್ದು, ಆರ್‌ಸಿಬಿ ಅಭಿಮಾನಿಗಳು ಪ್ರಾಂಚೈಸಿ ವಿರುದ್ಧ ಕೆಂಡಕಾರುತ್ತಿದ್ದಾರೆ.
ಆರ್‌ಸಿಬಿ ತಂಡ ಇದುವರೆಗೂ ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದಿದ್ದು, ಇನ್ನೂ ನಾಲ್ಕರಲ್ಲೂ ಸೋಲನುಭವಿಸಿದೆ. ಈ ಬಗ್ಗೆ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದು, ಸೂಕ್ತ ಆಟಗಾರರನ್ನು ಕೈಬಿಟ್ಟು ಯಾರ್ಯಾರನ್ನೋ ಆಡಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಪ್ರಾಂಚೈಸಿಗಳು ಎಂದು ಟೀಂ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೀಗೆ ಪ್ರಾಂಚೈಸಿಗಳು ಮಾಡಿದ ಮಾಡಿದ ತಪ್ಪಿಗೆ ಕೆಲ ಕಿಡಿಗೇಡಿಗಳು ಮತ್ಯಾರೋ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅಂತಲೂ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದೇ ಆರ್‌ಸಿಬಿ ತಂಡ ಆಗಿದ್ದು, ಆದರೆ ಇದುವರೆಗೂ ಒಂದೇ ಒಂದು ಕಪ್ ಎತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಪ್ರಾಂಚೈಸಿಗಳು ಸೂಕ್ತ ಆಟಗಾರರನ್ನು ತೆಗೆದುಕೊಳ್ಳದಿರುವುದು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದರ ನಡುವೆ ಸ್ವಿಗ್ಗಿ ಟ್ವೀಟರ್‌ನ ಪೋಸ್ಟರ್‌ವೊಂದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಮೊದಲ ಚಿತ್ರದಲ್ಲಿ ಬೆಂಗಳೂರು ಬಣ್ಣೆದೋಸೆ, ಎರಡರಲ್ಲಿ ಬೆಂಗಳೂರು ಮೇಘನಾ ಬಿರಿಯಾನಿ, ಮೂರನೇಯದು ಬೆಂಗಳೂರು ಐಪಿಎಲ್ ಟೀಂ ಅಂತಾ.
ಬೆಂಗಳೂರು ದೋಸೆ ಎಂದರೆ ಸಾಕಾಗಿದೆ ಎನ್ನುವಷ್ಟರ ಮಟ್ಟಿಗೆ ಗುರಾಯಿಸಿ ಕಣ್ಣು ಬಿಟ್ಟಿರುವುದು, ಬೆಂಗಳೂರು ಮೇಘನಾ ಬಿರಿಯಾನಿ ಎಂದರೆ ಸ್ವಲ್ಪ ಮಟ್ಟಗೆ ಉತ್ತಮ ಎನ್ನುವಂತೆ ನೋಡಿರುವುದು, ಇನ್ನು ಬೆಂಗಳೂರು ಐಪಿಎಲ್ ಟೀಂ ಎಂದರೆ ಚಪ್ಪರಿಸಿಕೊಂಡು ತಿನ್ನುವಂತೆ ರಿಯಾಕ್ಷನ್ ಇದೆ. ಅಂದರೆ ಇದರ ಅರ್ಥ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ವಿರುದ್ಧ ಬೇರೆ ಎಲ್ಲಾ ತಂಡಗಳು ಸುಲಭವಾಗಿ ಗೆಲ್ಲಬಹುದು ಎಂಬರ್ಥದಲ್ಲಿ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿದಂತಿದೆ.












Click it and Unblock the Notifications