ವಿವೇಕಾನಂದರ ನೆನಪಲ್ಲಿ ಜ.12ರಂದು ಮಲ್ಲೇಶ್ವರದಲ್ಲಿ ರಾಷ್ಟ್ರೀಯ ಯುವದಿನ

ಬೆಂಗಳೂರು, ಜನವರಿ 08: ಸ್ವಾಮಿ ವಿವೇಕಾನಂದರ ನೆನಪಲ್ಲಿ ಜನವರಿ 12 ರಂದು ಮಲ್ಲೇಶ್ವರದಲ್ಲಿ ರಾಷ್ಟ್ರೀಯ ಯುವದಿನ ಪ್ರಯುಕ್ತ 'ಯೂತ್‌ ಎಡ್ಜ್‌ 2019' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಾ.ಅಶ್ವಥ್‌ನಾರಾಯಣ ಫೌಂಡೇಶನ್, ನಮ್ಮ ಮಲ್ಲೇಶ್ವರ, ಡಿಸ್ಕವರಿ ವಿಲೇಜ್ ಸೇರಿ ಆಯೋಜಿಸುತ್ತಿರುವ ಈ ಕಾರ್ಯಕ್ರಮವು ಮಲ್ಲೇಶ್ವರದ ಚೌಡಯ್ಯ ಮೆಮೊರಿಯಲ್ ಹಾಲ್‌ನಲ್ಲಿ ಜರುಗಲಿದೆ.

ಎರಡು ಬ್ಯಾಚ್‌ಗಳಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಮೊದಲ ಬ್ಯಾಚ್‌ಗೆ 9:30 ರಿಂದ 1 ಹಾಗೂ ಎರಡನೇಯ ಬ್ಯಾಚ್‌ಗೆ 1 ರಿಂದ ಸಂಜೆ ಐದು ಗಂಟೆ ವರೆಗೆ ನಾಯಕತ್ವ ಗುಣ ಬೆಳವಣಿಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪೂರ್ಣ ಉಪನ್ಯಾಸಗಳು, ಪ್ರಾಯೋಗಿಕ ಪಾಠಗಳು ಇರಲಿವೆ.

Swamy Vivekananda National youth day youth edge 2019 Malleshwaram

ಕಾರ್ಯಕ್ರಮದಲ್ಲಿ ಪ್ರಸಿದ್ಧ ವ್ಯಕ್ತಿತ್ವ ವಿಕಸನ ಭಾಷಣಕರರಾದ ಇಯಾನ್ ಫಾರಿಯಾ, ಬಿ.ಎಸ್.ಶಾಂತಾರಾಜು, ಪ್ಯಾರಾ ಅಥ್ಲೀಟ್ ಮಾಲತಿ.ಕೆ.ಹೊಳ್ಳ, ಚೇತನ್ ವೇಣುಗೋಪಾಲ್ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಲ್ಲೇಶ್ವರ ಶಾಸಕ ಅಶ್ವಥ್‌ನಾರಾಯಣ್ ಇರಲಿದ್ದಾರೆ.

ಉಪನ್ಯಾಸ ಕಾರ್ಯಕರ್ಮದಲ್ಲಿ ಶಿಬಿರಾರ್ಥಿಯಾಗಲು ಆನ್‌ಲೈನ್ ಮೂಲಕ ನೊಂದಾವಣಿ ಆಗಬೇಕಿದೆ. ಹೆಚ್ಚಿನ ಮಾಹಿತಿಗಳು ಮಲ್ಲೇಶ್ವರ ಬಿಜೆಪಿ ಶಾಸಕ ಡಾ.ಅಶ್ವಥ್‌ನಾರಾಯಣ ಅವರ ಫೇಸ್‌ಬುಕ್‌ ಪುಟದಲ್ಲಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+