Get Updates
Get notified of breaking news, exclusive insights, and must-see stories!

Swachh Survekshan: ಬೆಂಗಳೂರಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ, ಇದರ ಹಿನ್ನೆಲೆ ಏನು

Swachh Survekshan: ಬೆಂಗಳೂರಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ ಚುರುಕುಪಡೆದುಕೊಂಡಿದೆ. ಸ್ವಚ್ಛ ಸರ್ವೇಕ್ಷಣ ಎನ್ನುವುದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ರಾಷ್ಟ್ರೀಯ ಮಟ್ಟದ ಸ್ವಚ್ಛತಾ ಸಮೀಕ್ಷೆ ಆಗಿದೆ. ಈ ಅಭಿಯಾನದ ಮೂಲಕ ದೇಶದ ನಗರಗಳು ಮತ್ತು ಪಟ್ಟಣಗಳಲ್ಲಿ ಸ್ವಚ್ಛತೆ, ಕಸದ ನಿರ್ವಹಣೆ, ಸಾರ್ವಜನಿಕ ಸೌಲಭ್ಯಗಳು ಹಾಗೂ ನಾಗರಿಕರ ಭಾಗವಹಿಸುವಿಕೆ ಇತ್ಯಾದಿಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತಿವರ್ಷ ಉತ್ತಮ ಸ್ವಚ್ಛ ನಗರಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ.

ಇನ್ನು 2025-26ನೇ ಸಾಲಿನ ಸ್ವಚ್ಛ ಸರ್ವೇಕ್ಷಣದ ಭಾಗವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ಬೃಹತ್ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ 2025-26ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಹಿನ್ನೆಲೆಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ಪಾಲಿಕೆಯ ವಿವಿಧ ವಿಭಾಗಗಳ 44 ವಾರ್ಡ್‌ಗಳಲ್ಲಿ ದಿನಾಂಕ 01-03-2026 ರಿಂದ 06-03-2026 ರವರೆಗೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ವ್ಯಾಪಕವಾಗಿ ನಡೆಸಲಾಗುತ್ತದೆ. ನಗರದ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಸ್ವಚ್ಚತಾ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Swachh Survekshan Why Bengaluru s Cleanliness Drive Matters Swachh Survekshan in Bengaluru What is Swachh Survekshan

ಈ ಅಭಿಯಾನದಡಿ ಖಾಲಿ ನಿವೇಶನಗಳ ಸ್ವಚ್ಚತೆ, ಕೆರೆ ಹಾಗೂ ಮಳೆ ನೀರುಗಾವಲು ಮೋರಿ ಸುತ್ತಮುತ್ತ ಸ್ವಚ್ಛತೆ, ಪಾದಚಾರಿ ಮಾರ್ಗಗಳ ಸ್ವಚ್ಛತೆ, ಕಪ್ಪು ಚುಕ್ಕೆಗಳ (Black Spots) ನಿರ್ಮೂಲನೆ, ಜಿವಿಪಿ (GVP) ನಿವಾರಣೆ, ಎಲೆ ತ್ಯಾಜ್ಯ ತೆರವು ಹಾಗೂ ಸಾರ್ವಜನಿಕ ಸ್ಥಳಗಳ ಸುಂದರೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಗಳು ಹಾಗೂ ಶಾಲಾ ಮಟ್ಟದ IEC ಚಟುವಟಿಕೆಗಳನ್ನು ಸಹ ಆಯೋಜಿಸಲಾಗುತ್ತಿದೆ.

ಕಾಂಪೋಸ್ಟ್‌ ಸಂತೆ ಕಾರ್ಯಕ್ರಮ

ದಿನಾಂಕ 07-03-2026 ರಂದು ಪುಲಿಕೇಶಿನಗರ ವಿಭಾಗದ ರಿಚರ್ಡ್ ಪಾರ್ಕ್‌ನಲ್ಲಿ "ಕಾಂಪೋಸ್ಟ್ ಸಂತೆ" ಕಾರ್ಯಕ್ರಮವನ್ನು ನಡೆಸಲಾಗುವುದು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಾಕ್‌ಥಾನ್ ಕಾರ್ಯಕ್ರಮ

ಅದೇ ರೀತಿ, ದಿನಾಂಕ 08-03-2026 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಯಲಹಂಕ ಕೆರೆಯ ಸುತ್ತ "ವಾಕ್‌ಥಾನ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ನಿವಾಸಿ ಕಲ್ಯಾಣ ಸಂಘಗಳು (RWA's) ಈ ಪಾದಚಾರಿ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ.

ಬ್ಯಾಟರಾಯನಪುರ, ಪುಲಿಕೇಶಿನಗರ, ಸರ್ವಜ್ಞನಗರ, ದಾಸರಹಳ್ಳಿ, ಹೆಬ್ಬಾಳ, ರಾಜರಾಜೇಶ್ವರಿ ನಗರ ಹಾಗೂ ಯಲಹಂಕ ವಿಭಾಗಗಳಲ್ಲಿ ಬ್ಯೂಟಿಫಿಕೇಷನ್ /ಪ್ಲಾಗಿಂಗ್, ಕೆರೆ-ನಾಳಗಳ ಸ್ವಚ್ಛತೆ, ಜಿವಿಪಿ ನಿರ್ಮೂಲನೆ, ಶಾಲಾ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸ್ವಚ್ಛತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

"Respect Public Places", "A Source of Life and Beauty", "Stop Dumping - Start Caring", "Clean Habits - Green Future" ಮತ್ತು "Green City - Clean City" ಎಂಬ ಘೋಷವಾಕ್ಯಗಳೊಂದಿಗೆ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ವಿವರಗಳೊಂದಿಗೆ ಗೂಗಲ್ ನೋಂದಣಿ ಲಿಂಕ್ ಅನ್ನು ಸೃಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹದು ಹಾಗೂ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಪಡೆಯಬಹುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೋಂದಣಿ ಲಿಂಕ್:
https://docs.google.com/forms/d/e/1FAIpQLSfJCFS_PTIqoH7gAg8qPQ9iGsvX0PxVRclxgEhwQu8Yq_TG5g/viewform?usp=publish-editor

ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ನಗರ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+