ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುನೈಟೆಡ್ ವೇ ಬೆಂಗಳೂರಿನ ಸ್ವಚ್ಛ ಶಾಲೆ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಜುಬಿಲಿಯಂಟ್ ಫುಡ್ ವರ್ಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಯುನೈಟೆಡ್ ವೇ ಮುಂಬೈ ಹಾಗೂ ಯುನೈಟೆಡ್ ವೇ ಬೆಂಗಳೂರು ಸೇರಿ ಸ್ವಚ್ಛ ಶಾಲೆ ಪ್ರಶಸ್ತಿ ಅಭಿಯಾನ ಆಯೋಜಿಸಿವೆ. ಸ್ವಚ್ಛ ಭಾರತ್ ಅಭಿಯಾನವನ್ನು ಬೆಂಬಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುವುದು, ಸ್ವಚ್ಛತೆಗೆ ಉತ್ತೇಜನ ನೀಡುವುದು, ವಾತಾವರಣ ಉತ್ತಮಗೊಳಿಸುವುದು ಈ ಪ್ರಶಸ್ತಿ ನೀಡುವುದರ ಉದ್ದೇಶವಾಗಿದೆ. ಮುಂಬೈ, ದೆಹಲಿ ಹಾಗೂ ಬೆಂಗಳೂರಿನ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸ್ವಚ್ಛತೆ, ಚರಂಡಿ ವ್ಯವಸ್ಥೆ ಹಾಗೂ ನೈರ್ಮಲ್ಯ ಕಾಪಾಡಲು ಪ್ರೋತ್ಸಾಹ ನೀಡಲು ಸಹ ಉದ್ದೇಶಿಸಲಾಗಿದೆ.

Swachh School Awards Campaign by United Way Bengaluru

ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ಶಾಲೆಗಳು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 14, 2017ರಿಂದ ಏಪ್ರಿಲ್ 30ರೊಳಗೆ ಅರ್ಜಿ ಸಲ್ಲಿಸಬಹುದು. ಶಾಲೆಗಳ ಪಟ್ಟಿ ಸಿದ್ಧವಾದ ನಂತರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಗುವುದು.

ವಿಜೇತರಾದವರಿಗೆ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 3 ಲಕ್ಷ ರುಪಾಯಿ, 1.5 ಲಕ್ಷ ರುಪಾಯಿ, 75 ಸಾವಿರ ರುಪಾಯಿ ನೀಡಲಾಗುವುದು. ಎರಡು ಶಾಲೆಗಳಿಗೆ ಸಮಾಧಾನಕರ ಬಹುಮಾನವಾಗಿ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

English summary
Jubilant FoodWorks Limited in association with United Way Mumbai & United Way Bengaluru has launched Swachh School Awards Campaign in support of Swachh Bharat Abhiyan. It is an initiative to recognize and award Schools which have undertaken successful interventions for maintenance and promotion of cleanliness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X