"ನಟ ದರ್ಶನ್‌ ಹುಡುಗರು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಬಗ್ಗೆ ಆ ರೀತಿ ಕೆಟ್ಟ ಕಮೆಂಟ್ ಮಾಡಿದ್ದು ಸರಿಯೇ?"

ಬೆಂಗಳೂರು, ಜುಲೈ, 03: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ & ಇವರ ಪಟಾಲಂ ಗ್ಯಾಂಗ್‌ ಸೇರಿದ್ದು, ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಮತ್ತೊಂದೆಡೆ ಈ ಬಗ್ಗೆ ಈಗಾಗಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಟಿಯೊಬ್ಬರು ಆಶ್ಚರ್ಯದ ಹೇಳಿಕೆಯೊಂದನ್ನು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನವಾದಾಗಿನಿಂದ, ದರ್ಶನ್‌ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿವೆ. ಹಾಗೆಯೇ ಇದೀಗ ಸುಷ್ಮಾ ವೀರ್ ಜೈನ್‌ ದರ್ಶನ್‌ ಅಂಧಾಭಿಮಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Sushma Veer reaction on Actor Darshan boys bad comments about Ashwini Puneeth Rajkumar

2024ನೇ ಸಾಲಿನ ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲಲು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೇ ಕಾರಣ, ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಅವರನ್ನು ಕರೆಸಿದ್ದಕ್ಕೇ ತಂಡ ಸೋಲನುಭವಿಸಿತು ಎಂದು ಗಜಪಡೆ ಹೆಸರಿನ ಟ್ವಿಟರ್‌ ಖಾತೆಯಿಂದ ಕೀಳು ಮಟ್ಟದ ಪೋಸ್ಟ್‌ವೊಂದನ್ನು ಮಾಡಿದ್ದರು. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ, ದರ್ಶನ್‌ ಅಭಿಮಾನಿಗಳ ಬಗ್ಗೆ ವ್ಯಾಪಕ ಟೀಕೆಗಲು ಸಹ ಕೇಳಿಬಂದಿದ್ದು, ಆಗ ಕೆಲವರು ಸ್ವತಃ ನಟ ದರ್ಶನ್‌ ವಿರುದ್ಧವೇ ಧ್ವನಿ ಎತ್ತಿ, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬಾರದೇ ಎಂದು ಹೇಳಿದ್ದರು.

ಸುಷ್ಮಾ ವೀರ್‌ ಮಾತನಾಡಿದ್ದು, ಕಾನೂನು ಮೂಲಕ ಕ್ರಮ ಕೈಗೊಂಡಿದ್ದರೆ, ಎಲ್ಲರಿಗೂ ಇದೊಂದು ನಿದರ್ಶನ ಆಗುತ್ತಿತ್ತು. ಕೊಲೆ ಮಾಡುವ ಹಂತಕ್ಕೆ ಇಳಿಯಬಾರದಿತ್ತು ಎಂದು ನಟ ದರ್ಶನ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

"ನಟ ದರ್ಶನ್‌ ಅವರ ಕೆಲವು ಹುಡುಗರು ಆರ್‌ಸಿಬಿ ಸೋಲನ್ನು ಇಟ್ಟುಕೊಂಡು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಸರೀನಾ? ಅವರು ಕೂಡ ಹೆಣ್ಣಲ್ಲವಾ? ಬೇರೆ ಹೆಣ್ಣುಮಕ್ಕಳು ಹೆಣ್ಮಕ್ಕಳಲ್ಲ, ನಿಮಗೆ ಇಷ್ಟ ಆದವರಷ್ಟೇ ಹೆಣ್ಣುಮಕ್ಕಳಾ? ದರ್ಶನ್‌ ಬಗ್ಗೆ ಪ್ರೀತಿ ಕಡಿಮೆಯಾಗಿಲ್ಲ, ಆದರೆ ನಿಮ್ಮ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ನಿಮ್ಮನ್ನು ನೀವೆ ಹಾಳು ಮಾಡಿಕೊಳ್ಳುತ್ತಿದ್ದೀರ. ಇನ್ನೂ ಇನ್ನಾದರೂ ಸುಧಾರಿಸಿಕೊಂಡರೆ ಒಳ್ಳೆಯದು. ಅದು ನಿಮ್ಮ ಕೈಯಲ್ಲಿದೆ", ಎಂದು ಬುದ್ಧಿವಾದ ಹೇಳಿದ್ಧಾರೆ.

ಇನ್ನು "ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಆ ದಿವೇ ಅದೇ ವಿಚಾರವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಬಹುದಾಗಿತ್ತು. ಆ ಸಾಮರ್ಥ್ಯ ಅವರಲ್ಲಿತ್ತು. ಆದರೆ, ಅವರು ಹಾಗೆ ಮಾಡದೇ, ದೊಡ್ಡ ತನವನ್ನು ತೋರಿದ್ದರು ಎಂದರು. "ನಟ ದರ್ಶನ್‌ ಕೂಡ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡೊದಾದ್ರೆ, ನೀವು ನನ್ನ ಅಭಿಮಾನಿಗಳೇ ಅಲ್ಲ," ಎಂದು ಹೇಳಿ ಬುದ್ಧಿವಾದ ಹೇಳಬೇಕಿತ್ತು ಎಂದರು.

ಮತ್ತೊಂದೆಡೆ "ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿಯದ್ದು ತಪ್ಪು. ಹಾಗಂತ ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಸರಿಯಲ್ಲ. ಅದರಲ್ಲೂ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದು ದೊಡ್ಡ ತಪ್ಪು. ಕೊಲೆ ಮಾಡುವ ಹಂತಕ್ಕೆ ಇಳಿಯದೇ, ಕಾನೂನು ಮೂಲಕವೇ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು," ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+