'ಕರ್ನಾಟಕದ ಐಟಿ ಉದ್ಯೋಗಿಗಳು ಅಮೇರಿಕದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ'
ಬೆಂಗಳೂರು, ಏಪ್ರಿಲ್ 25: ಭಾರತೀಯ ಉದ್ಯೋಗಿಗಳ ಹಿತ ಕಾಪಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲವಾಗಿದ್ದಾರೆ.ಬಿಜೆಪಿ ಇದಕ್ಕೆ ಉತ್ತರ ಕೊಡಬೇಕಾಗಿದೆ ಒಂದೆಡೆ ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಮೋದಿ ಅವರಿಗೆ ಆಗುತ್ತಿಲ್ಲ ಎಂದು ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ರಂದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನ ಅಮೇರಿಕಾದಂತ ವಿದೇಶಗಳಲ್ಲಿ ವೀಸಾ ನೀತಿಯಿಂದ ಭಾರತೀಯರು ಉದ್ಯೋಗ ಕಳೆದುಕೊಳ್ಳುತ್ತಿದ್ದರು ಮೋದಿ ನೋಡಿಕೊಂಡು ಸುಮ್ಮನಿದ್ದಾರೆ ಎಂದು ಆರೋಪಿಸಿದರು.
ಡೊಕ್ಲಾಮ್ ನಲ್ಲಿ ನಮ್ಮ ಸೇನೆಯ ಚೀನಾ ಸೇನೆ ಕೆಣಕಿದೆ, 10 ಮೀಟರ್ ಅಂತರಕ್ಕೆ ಬಂದು ಕೆಣಕಿವೆ, ದೊಕ್ಲಾಮ್ ಬಳಿ ಚೈನಾ ರಸ್ತೆ ನಿರ್ಮಾಣ ಮಾಡುತ್ತಿದೆ, ಸಿಲಿಗುರಿ ಬಳಿಯೂ ರಸ್ತೆ ನಿರ್ಮಿಸುತ್ತಿದೆ, ನಮ್ಮ ಈಸ್ಟ್ರನ್ ರಾಜ್ಯಗಳ ಭಾಗದಲ್ಲಿ ನಿರ್ಮಾಣ ರಸ್ತೆ ನಿರ್ಮಿಸಿ ಆ ಭಾಗವನ್ನೇ ಬೇರೆಮಾಡಲು ಹವಣಿಸುತ್ತಿದೆ ಎಂದರು.

ಚೀನಾವು ನಮ್ಮ ಗಡಿ ಭಾಗವನ್ನ ಆಕ್ರಮಿಸಿಕೊಳ್ಳಲು ಮುಂದಾಗಿದೆ, ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆಂದು ಮೋದಿಹೇಳಿದ್ದರು. ಆದರೆ ಹೇಳಿದ ಮಾತು ಮೋದಿ ಮರೆತುಬಿಟ್ಟಿದ್ದಾರೆ ಎಂದು ಹೇಳಿದರು.
5 ವರ್ಷದಲ್ಲಿ 50 ಲಕ್ಷ ಉದ್ಯೋಗವನ್ನು ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಕಲ್ಪಿಸಿದೆ, ಬೆಂಗಳೂರು ಐಟಿ ಹಬ್ ಆಗಿದೆ ಇದಕ್ಕೆ ಕಾರಣ ರಾಜೀವ್ ಗಾಂಧಿಯವರ ದೂರದೃಷ್ಠಿಯ ಫಲ, ಆದರೆ ಉದ್ಯೋಗ ಸೃಷ್ಟಿಸಲು ಕೇಂದ್ರ ಮುಂದಾಗುತ್ತಿಲ್ಲ, ಹೋಗಲಿ ವಿದೇಶದಲ್ಲಿರುವ ಉದ್ಯೋಗಿಗಳ ಭದ್ರತೆಗೂ ಮುಂದಾಗಿಲ್ಲ. ದೇಶದ ಲಕ್ಷಾಂತರ ಉದ್ಯೋಗಿಗಳು ಅಮೆರಿಕಾದಲ್ಲಿದ್ದಾರೆ ಅವರ ಗತಿಯೇನು ಎಂದು ಪ್ರಶ್ನಿಸಿದರು.











Click it and Unblock the Notifications