• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಮ್ಮ ಕಾಳಜಿ ಮೆಚ್ಚುವಂತದ್ದು: ದತ್ತಾಗೆ ಶಿಕ್ಷಣ ಸಚಿವರ ಚಪ್ಪಾಳೆ

|

ಬೆಂಗಳೂರು, ಮೇ 15: ಮಾಜಿ ಶಾಸಕ ವೈಎಸ್‌ವಿ ದತ್ತಾ ಇತ್ತೀಚಿಗಷ್ಟೆ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪಾಠ ಮಾಡುವ ಕಾರ್ಯಕ್ರಮವನ್ನು ಶುರು ಮಾಡಿದ್ದರು. ಈ ಕಾರ್ಯಕ್ರಮ ರಾಜ್ಯಾದಂತ್ಯ ದೊಡ್ಡ ಮಟ್ಟದ ಮೆಚ್ಚುಗೆಗಳಿಸಿತ್ತು.

ಇದೀಗ ದತ್ತ ಅವರ ಈ ಕಾರ್ಯಕ್ರಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಪತ್ರದ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ''ಇತ್ತೀಚೆಗೆ ನೀವು ಆನ್‌ಲೈನ್ ಮೂಲಕ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮನೆ ಪಾಠ ಮಾಡುತ್ತಾ ಮತ್ತೊಮ್ಮೆ ಮಕ್ಕಳ 'ದತ್ತಾ ಮೇಷ್ಟ್ರು' ಆಗಿರುವುದನ್ನು ಪತ್ರಿಕೆಗಳಲ್ಲಿ ಓದಿ ಅತ್ಯಂತ ಸಂತೋಷವಾಯಿತು'' ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

10ನೇ ಕ್ಲಾಸ್‌ ಮಕ್ಕಳಿಗಾಗಿ ಶಿಕ್ಷಕರಾದ ಮಾಜಿ ಶಾಸಕ ವೈಎಸ್‌ವಿ ದತ್ತ

''ತಮ್ಮ ವಿದ್ಯಾಭ್ಯಾಸದ ನಂತರ ನಿಮ್ಮೂರಿನಿಂದ ಬೆಂಗಳೂರಿಗೆ ಬಂದು ಟ್ಯೂಷನ್ ಮಾಡುವುದನ್ನೇ ಹವ್ಯಾಸವಾಗಿಸಿಕೊಂಡಿದ್ದ ತಾವು ರಾಜಧಾನಿಯ ಮೂಲೆಮೂಲೆಗಳ ವಿದ್ಯಾರ್ಥಿಗಳನ್ನು ಚುಂಬಕದಂತೆ ಆಕರ್ಷಿಸಿದವರು. ಹಾಗೇಯೇ ಈ ಮೂಲಕವೇ ಟ್ಯೂಷನ್‌ಗೆ ಒಂದು ಹೊಸ ಆಯಾಮವನ್ನು ನೀಡಿದ ಹೆಗ್ಗಳಿಗೆ ನಿಮ್ಮದು ಎಂದು ಹೇಳಲು ನಿಜಕ್ಕೂ ಸಂತೋಷ.'' ಎಂದು ಸುರೇಶ್ ಕುಮಾರ್ ಪತ್ರದ ಮೂಲಕ ತಿಳಿಸಿದ್ದಾರೆ.

ದತ್ತ ಮಕ್ಕಳಿಗೆ ಪುನರ್ಮನನ ತರಗತಿ ಮಾಡಲು ಸುರೇಶ್ ಕುಮಾರ್‌ ಒಂದು ರೀತಿಯಲ್ಲಿ ಕಾರಣ. ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಸುರೇಶ್ ಕುಮಾರ್‌ರೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಾತನಾಡಿದ ದತ್ತಾ, ಆ ಬಳಿಕ ಪುನರ್ಮನನ ತರಗತಿ ನಡೆಸಲು ನಿರ್ಧಾರ ಮಾಡಿದರು.

English summary
Minister Suresh Kumar write a letter to YSV Datta about his sslc class tuition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X