ಪೆರಿಫೆರಲ್ ರಿಂಗ್ ರಸ್ತೆ, ನಿಖರ ಮಾಹಿತಿ ಸಲ್ಲಿಸಲು ಸುಪ್ರೀಂ ಆದೇಶ

ಬೆಂಗಳೂರು, ಮಾರ್ಚ್ 16: ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ನೀಡಿದ್ದ ಪರಿಸರ ಅನುಮತಿ ಪತ್ರಕ್ಕೆ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿ ಸಲ್ಲಿಸುವಂತೆ ಬಿಡಿಎಗೆ ಸುಪ್ರೀಂ ಸೂಚನೆ ನೀಡಿದೆ.

ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಮಾ.29ರಂದು ಹೆಚ್ಚುವರಿ ಮಾಹಿತಿಯುಳ್ಳ ಪ್ರಮಾಣಪತ್ರವನ್ನು ದಾಖಲಿಸಲು ರಾಜ್ಯ ಸರ್ಕಾರ ಹಾಗೂ ಬಿಡಿಎಗೆ ಸೂಚಿಸಿದೆ. ಈ ಆದೇಶ ಪ್ರಕಟಿಸಿದ ಬಳಿಕ ಪ್ರಕರಣವನ್ನು ಮುಂದಿನ ವಿಚಾರಣೆಗೆ ಮುಂದೂಡಲಾಗಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಪೆರಿಫರಲ್ ರಿಂಗ್ ರೋಡ್ ಯೋಜನೆ ನಿರ್ಮಾನ ಕುರಿತು ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಪರಿಸರ ಪ್ರಮಾಣಪತ್ರ ಪಡೆದು ನಾಲ್ಕು ವರ್ಷ ಕಳೆದರೂ ಕಾಮಗಾರಿ ಆರಂಭಿಸಿರಲಿಲ್ಲ. ಈ ಅವಧಿಯಲ್ಲು ಹಲವು ಬದಲಾವಣೆಗಳೂ ಕೂಡ ಆಗಿದೆ.

Supreme Court sought information on peripheral ring road project

ಜೊತೆಗೆ ಪಿಆರ್‌ಆರ್‌ ಮಾರ್ಗ ಹಾದುಹೋಗುವ ಸ್ಥಳದಲ್ಲಿರುವ ಮರಗಳ ಕುರಿತು ನಿಖರ ಮಾಹಿತಿಯನ್ನು ಮರೆ ಮಾಚಲಾಗಿದೆ ಎಂದು ಎನ್ಜಿಟಿಗೆ ದೂರು ನೀಡಲಾಗಿತ್ತು.

ಪಿಆರ್‌ಆರ್ ತುಮಕೂರು ರಸ್ತೆಯಿಂದ ಆರಂಭಗೊಳ್ಳಲಿದ್ದು, ಆ ಭಾಗದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶ ಹಾಗೂ ಅರಣ್ಯ ಭೂಮಿಗೆ ಧಕ್ಕೆ ಉಂಟಾಗಲಿದೆ ಇದು ಪರಿಸರ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಎಂಬುದಾಗಿ ಅರ್ಜಿದಾರ ಸುಧಾಕರ್ ಹೆಗಡೆ ಎನ್‌ಜಿಟಿ ಮುಂದೆ ಪ್ರತಿಪಾದಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+