ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಶಿವಕುಮಾರ್ ಗೌಡ, ಐ.ಎಸ್.ತೇಜಸ್ವಿ ಸೇರ್ಪಡೆ
ಬೆಂಗಳೂರು, ಜೂನ್ 4: ಕರ್ನಾಟಕದಲ್ಲೂ ಆಮ್ ಆದ್ಮಿ ಪಕ್ಷವು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ದೆಹಲಿ ಮತ್ತು ಪಂಜಾಬ್ ನಂತರದಲ್ಲಿ ಇತರೆ ರಾಜ್ಯಗಳಲ್ಲೂ ತನ್ನ ಅಸ್ತಿತ್ವ ಬೆಳೆಸುವುದಕ್ಕೆ ಆಮ್ ಆದ್ಮಿ ಪಕ್ಷವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಬೆಂಗಳೂರಿನಲ್ಲೂ ಆಪ್ ಕಡೆಗೆ ಮುಖ ಮಾಡುತ್ತಿರುವ ನಾಯಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಇಬ್ಬರು ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿಗಳು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕರ್ನಾಟಕದಲ್ಲಿ ಎಎಪಿ ಸಿದ್ದಾಂತಗಳನ್ನು ಮೆಚ್ಚಿ ಅನೇಕರು ಪಕ್ಷ ಸೇರುತ್ತಿದ್ದಾರೆ. ಅದೇ ರೀತಿ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ದೆಹಲಿ ಶಾಸಕ ದಿಲಿಪ್ ಪಾಂಡೆ ಸಮ್ಮುಖದಲ್ಲಿ ಇಬ್ಬರು ನಾಯಕರು ಪಕ್ಷಕ್ಕೆ ಸೇರ್ಪಡೆಗೊಂಡರು.

ಆಪ್ ಸೇರಿದ ಸುಪ್ರೀಂಕೋರ್ಟ್ ನ್ಯಾಯವಾದಿ ಶಿವಕುಮಾರ್:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಹಾಗೂ ಸುಪ್ರೀಂಕೋರ್ಟ್ ನ್ಯಾಯವಾದಿ ಶಿವಕುಮಾರ್ ಗೌಡ ಆಮ್ ಆದ್ಮಿಗೆ ಸೇರಿದ್ದಾರೆ. ಕಳೆದ 14 ವರ್ಷಗಳಿಂದ ಕರ್ನಾಟಕ ಮತ್ತು ದೆಹಲಿ ಹೈಕೋರ್ಟ್ ಗಳಲ್ಲೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟೂರಿನಲ್ಲಿ TES ಪ್ರತಿಷ್ಠಾನವನ್ನು ಸ್ಥಾಪಿಸಿ, ಜನರಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಹಾಯ ಮಾಡಿಕೊಂಡು ಬಂದಿದ್ದಾರೆ. ಇವರ ತಾಯಿ ಮಲೆಮಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಶಾಸಕರ ಪುತ್ರ ಆಪ್ ಸೇರ್ಪಡೆ:
Recommended Video
ಚಿಕ್ಕಮಗಳೂರಿನ ಮಾಜಿ ಶಾಸಕ ಐ.ಬಿ. ಶಂಕರ್ ಪುತ್ರ ಹಾಗೂ ಪ್ರಖ್ಯಾತ ವಕೀಲರೂ ಎನಿಸಿರುವ ಐ.ಎಸ್.ತೇಜಸ್ವಿ ಕೂಡ ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು. ಆಪ್ ಈ ಇಬ್ಬರು ನಾಯಕರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತಿಸಿತು.












Click it and Unblock the Notifications