ಸುಪಾರಿ ಕೇಸ್: ರವಿ ಬೆಳಗೆರೆ ಮಧ್ಯಂತರ ಜಾಮೀನು ವಿಸ್ತರಣೆ
ಬೆಂಗಳೂರು, ಡಿಸೆಂಬರ್ 16: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ವಿಸ್ತರಣೆ ಮಾಡಲಾಗಿದೆ.
ಅನಾರೋಗ್ಯ ಹಿನ್ನಲೆಯಲ್ಲಿ ರವಿ ಬೆಳಗೆರೆ ಅವರ ಮಧ್ಯಂತರ ಜಾಮೀನು ಸೋಮವಾರ ಅಂದರೆ ಡಿಸೆಂಬರ್ 18ರ ವರೆಗೆ ವಿಸ್ತರಣೆ ಮಾಡಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ್ ಶನಿವಾರ ಆದೇಶ ಹೊರಡಿಸಿದರು.

ಈ ಮೊದಲು ರವಿ ಬೆಳಗೆರೆ ಅವರಿಗೆ ಡಿಸೆಂಬರ್ 16ರ ವರೆಗೆ ಜಾಮೀನು ಮಂಜೂರು ಮಾಡಲಾಗಿತ್ತು. ಅದು ಇಂದಿಗೆ (ಶನಿವಾರ) ಅಂತ್ಯವಾಗಿದ್ದರಿಂದ ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮದುಸೂಧನ್ ಅವರು ಮಧ್ಯಂತರ ಜಾಮೀನು ವಿಸ್ತರಣೆ ಮಾಡಿ ಆದೇಶಿಸಿದರು.
ಇಬ್ಬರ ಶ್ಯೂರಿಟಿ, 1 ಲಕ್ಷ ರು ಬಾಂಡ್ ಸಲ್ಲಿಸಬೇಕು, ತನಿಖೆಗೆ ಸಹಕರಿಸಬೇಕು ಎಂದು ಷರತ್ತುಗಳನ್ನು ನ್ಯಾಯಾಧೀಶ ಮದುಸೂಧನ್ ವಿಧಿಸಿದ್ದಾರೆ. ಡಿಸೆಂಬರ್ 18ರ ತನಕ ಜಾಮೀನು ವಿಸ್ತರಣೆಯಾಗಿದೆ.












Click it and Unblock the Notifications