LIVE: ಸುನೀಲ್ ಕೊಲ್ಲಲು ಸುಪಾರಿ ಕೇಸ್ : ಪತ್ರಕರ್ತ ರವಿ ಬೆಳಗೆರೆಗೆ ಜೈಲು
Recommended Video

ಬೆಂಗಳೂರು, ಡಿಸೆಂಬರ್ 11 : ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರ ಪೊಲೀಸ್ ಕಸ್ಟಡಿ ಸೋಮವಾರದಂದು ಅಂತ್ಯವಾಗಲಿದೆ. ಲೈವ್ ಅಪ್ಡೇಟ್ಸ್ ಇಲ್ಲಿದೆ:
* 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆ
* ಪರಪ್ಪನ ಅಗ್ರಹಾರ ಜೈಲಿನಲ್ಲಿ ವೈದ್ಯಕೀಯ ವ್ಯವಸ್ಥೆ ನೀಡುವಂತೆ ಆದೇಶ
* 1ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್ ಅವರಿಂದ ಆದೇಶ
* ಬುಧವಾರ(ಡಿಸೆಂಬರ್ 23)ದಂದು ಜಾಮೀನು ಅರ್ಜಿ ಸಲ್ಲಿಕೆ: ವಕೀಲ ಕೆ ದಿವಾಕರ್.
* ಸುನೀಲ್ ಕೊಲ್ಲಲು ಸುಪಾರಿ ಕೇಸ್ : ಪತ್ರಕರ್ತ ರವಿ ಬೆಳಗೆರೆಗೆ ಜೈಲು, ಕೋರ್ಟಿನತ್ತ ಪರಪ್ಪನ ಅಗ್ರಹಾರದತ್ತ ಕರೆದೊಯ್ಯುತ್ತಿರುವ ಪೊಲೀಸರು.
* ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ರವಿ ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ ಆರಂಭ.
* ನ್ಯಾಯಾಧೀಶ ಜಗದೀಶ್ ಅವರ ಮುಂದೆ ಪತ್ರಕರ್ತ ರವಿ
* ಪತ್ರಕರ್ತ ಸುನಿಲ್ ಕೊಲ್ಲಲು ರವಿ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ರವಿ ಬೆಳಗೆರೆ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತಿದೆ.
* ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರವಿ ಬೆಳಗೆರೆಗೆ ಚಿಕಿತ್ಸೆ ನೀಡಿ, ಆರೋಗ್ಯ ತಪಾಸಣೆ ಮಾಡಿ ಪ್ರಮಾಣ ಪತ್ರ ಪಡೆದ ಸಿಸಿಬಿ ಪೊಲೀಸರು.
* 1ನೇ ಎಸಿಎಂಎಂ ಕೋರ್ಟಿನತ್ತ ರವಿ ಬೆಳಗೆರೆಯನ್ನು ಕರೆದೊಯ್ಯುತ್ತಿರುವ ಸಿಸಿಬಿ ಪೊಲೀಸರು.
ಈ ಹಿನ್ನೆಲೆಯಲ್ಲಿ ಸೋಮವಾರ ರವಿ ಬೆಳಗೆರೆ ಅವರನ್ನು 1ನೇ ಎಸಿಎಂಎಂ ನ್ಯಾಯಾಲಯ ಮುಂದೆ ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ. ಇದೇ ವೇಳೆ ಬೆಳಗೆರೆ ಪರ ವಕೀಲ ದಿವಾಕರ್ ಅವರು ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಪೊಲೀಸ್ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೋಮವಾರ ರವಿ ಬೆಳಗೆರೆ ಯನ್ನು ಕೋರ್ಟ್ ಮುಂದೆ ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ. ಮತ್ತೊಂದೆಡೆ ಬೆಳಗೆರೆ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಜ್ಯೋತಿಷ್ಯ: ರವಿಯನ್ನು ಬಿಟ್ಟೂಬಿಡದೆ ಕಾಡಲಿದೆ ಗುರುಚಾಂಡಾಲ ಯೋಗ
ಅನಾರೋಗ್ಯದ ಕಾರಣ: ಮಧುಮೇಹದಿಂದ ಬಳಲುತ್ತಿರುವ ರವಿ ಬೆಳಗೆರೆಗೆ ಸೂಕ್ತ ಚಿಕಿತ್ಸೆಯ ನೆರವಿನ ಅಗತ್ಯವಿದೆ ಹೀಗಾಗಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಈ ನಡುವೆ ಸಿಸಿಬಿ ಕಚೇರಿಯಲ್ಲಿದ್ದ ರವಿ ಬೆಳೆಗೆರೆ ಅವರಿಗೆಮಲಗಲು ವಿಶೇಷ ಕೊಠಡಿ ಸೌಲಭ್ಯ ಕಲ್ಪಿಸಲಾಗಿತ್ತು. ಮಗ ಕರ್ಣ ಮತ್ತು ಪುತ್ರಿ ಚೇತನಾ ಬೆಳಗೆರೆ ಅವರು ಮನೆಯಿಂದ ಊಟ, ಉಪಾಹಾರ ತಂದುಕೊಡುತ್ತಿದ್ದರು.
ರವಿ ಬೆಳಗೆರೆ ಅವರ ಫ್ಯಾಮಿಲಿ ಡಾಕ್ಟರ್ ಅವರು ಬಂದು ಚೆಕ್ ಅಪ್ ಮಾಡಲು ಕೂಡಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವಾಗ ಕಾಲಿನ ಹೆಬ್ಬರಳಿಗೆ ಗಾಯಗೊಂಡ ರವಿ ಬೆಳಗೆರೆ ಅವರು ಈ ಬಗ್ಗೆ ಖಾಸಗಿ ವಾಹಿನಿಯ ವರದಿಗಾರರೊಬ್ಬರ ಬಳಿ ನೋವು ತೋಡಿಕೊಂಡಿದ್ದರು.












Click it and Unblock the Notifications