ಸಾಡೇಸಾತಿ ಶನಿಯಿಂದ ಸುಖ ಕಾಣದಂತಾಗ್ತಾರೆ ರವಿ ಬೆಳಗೆರೆ
Recommended Video

ಡಿಯರ್ friends, ಇವತ್ತು ನಾನು ವಿಶೇಷ ವ್ಯಕ್ತಿಯೊಬ್ಬರ ಜಾತಕವನ್ನು ವಿಮರ್ಶೆ ಮಾಡಲಿಕ್ಕೆ ಹೊರಟಿದ್ದೀನಿ. ಅವರ ಜಾತಕವನ್ನು ಇವತ್ತಿನ ತನಕ ಯಾವ ಜ್ಯೋತಿಷಿಯೂ ವಿಮರ್ಶಿಸಿಲ್ಲ ಅಂತ ಅಂದುಕೊಂಡಿದ್ದೀನಿ. ಯಾರಿಗೂ ಅರ್ಥ ಆಗದ ವಿಶೇಷ, ವಿಚಿತ್ರ ವ್ಯಕ್ತಿ ಮಿಸ್ಟರ್ ರವಿ ಬೆಳೆಗೆರೆ! ಇನ್ನೆರಡು ವರ್ಷ ಈಗಿನ ಆರೋಪವೂ ಸೇರಿದಂತೆ ಇನ್ನಷ್ಟು ಕೇಸುಗಳು ಅವರ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆಗಳಿವೆ.
ಅಂದಹಾಗೆ, ಈ ಹೆಸರು ಕೆಳಿದ ತಕ್ಷಣ ನಿಮಗೆ ಅನಿಸೋದು, ನಿಮಗೆ ಬೇರೆ ಕೆಲಸ ಇಲ್ವಾ? ಬೇರೆ ಯಾರಾದಾದರೂ ಜಾತಕ ನೋಡಬಹುದಿತ್ತು. ಈ ಯಪ್ಪನ ಜಾತಕ ಯಾಕೆ ಸ್ವಾಮಿ? ಹೌದು, ಆದರೆ ಹಾಗೆ ನಿಮಗೆ ಅವರಲ್ಲಿ ವಿಭಿನ್ನ ಅಭಿಪ್ರಾಯ ಹುಟ್ಟಲು ಕಾರಣ ಸಹ ಅವರ ಜಾತಕ ಅಂದರೆ ನೀವು ನಂಬಲೇಬೇಕು.
ಅವರ ಜಾತಕದಂತೆ ನಡವಳಿಕೆ, ವ್ಯಕ್ತಿತ್ವ, ಯೋಚನಾ ಲಹರಿ ಹಾಗೂ ಕಾರ್ಯ ಚಟುವಟಿಕೆಗಳು ಇವೆ. ಇವುಗಳೆಲ್ಲಾ ಸೇರಿ ಒಬ್ಬೊಬ್ಬರಿಗೆ ಅವರ ಬಗ್ಗೆ ಒಂದೊಂದು ವಿಭಿನ್ನ ಅಭಿಪ್ರಾಯ ಬರುವಂತೆ ಮಾಡಿದೆ ಎಂದರೆ ಈಗಲಾದರೂ ನಂಬುತ್ತೀರಾ?
ಇನ್ನು ಜನ್ಮ ಮಾಹಿತಿ ಪ್ರಕಾರ ರವಿ ಬೆಳಗೆರೆ ಅವರದ್ದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ. ಜನ್ಮ ಸಮಯ ನನ್ನ ಬಳಿ ಇಲ್ಲದ ಕಾರಣ ಜಾತಕದಲ್ಲಿ ಲಗ್ನ ಹುಡುಕುವುದು ಅಸಾಧ್ಯ ಆಯಿತು ಅಷ್ಟೆ. ಆದರೆ ಈ ವಯ್ಯನ ಜಾತಕದಲ್ಲಿ ಕುಜ ಗ್ರಹ ಪರಮೋಚ್ಚ ಸ್ಥಿತಿಯಲ್ಲಿ ಇರುವುದರಿಂದ ಆ ಗ್ರಹದ ಪ್ರಭಾವ ಯಾವ ವಿಚಾರವನ್ನೂ serious ಆಗಿ ತೆಗೆದುಕೊಳ್ಳದೆ, ತಾನು ಮಾಡಿದ್ದೇ ಸರಿ- ನಾನು ಹೇಳಿದ್ದೇ ಸರಿ ಅನ್ನುವಂಥ ಗುಣವನ್ನು ಕಾಣಬಹುದು.

ಉಚ್ಚ ಶುಕ್ರನ ಅನುಗ್ರಹ
ಪತ್ರಿಕೆಯೊಂದನ್ನು ಯಶಸ್ವಿಯಾಗಿ ನಡೆಸಿದಾಗ ಮಾಡಿಕೊಳ್ಳಬಹುದಾದ ಎಲ್ಲಾ ವಿಧದ ಆರ್ಥಿಕ ಲಾಭವನ್ನು ರವಿ ಬೆಳಗೆರೆ ಮಾಡಿಕೊಂಡಿದ್ದಾರೆ. ಆ ಅಂಶ ಇವರ ಜಾತಕದಲ್ಲಿ ಉಚ್ಚ ಸ್ಥಿತಿಯಲ್ಲಿರುವ ಕುಜನ ಜೊತೆ ಇರುವ ಶುಕ್ರ ಸ್ಪಷ್ಟವಾಗಿ ತೋರಿಸುತ್ತಾನೆ. ಶುಕ್ರ ಕೇವಲ ಆರ್ಥಿಕ ಸ್ಥಿತಿಗತಿ ಅಷ್ಟೇ ಅಲ್ಲ, ಇನ್ನೂ ಬಹಳ ಹೆಚ್ಚಿನ ವಿಚಾರ, ಸವಲತ್ತನ್ನು ನೀಡುತ್ತಾನೆ. ನಿಮಗೆ ಇನ್ನೂ ಅರ್ಥ ಆಗುವಂತೆ ಬಿಡಿಸಿ ಹೇಳಬೇಕು ಎಂದರೆ ಸ್ತ್ರೀ ಸುಖ, ಪ್ರೀತಿ- ಪ್ರೇಮ ಇತ್ಯಾದಿ ಎಲ್ಲವೂ ಈ ಶುಕ್ರನ ಅಡಿಯಲ್ಲಿ ಬರುವ ವಿಚಾರಗಳು.

ನೀಚ ಬುಧನ ಪ್ರಭಾವ
ರವಿ ಯಾಕೆ ಯಾರಿಗೂ ಗೌರವ ನೀಡುತ್ತಿರಲಿಲ್ಲ ಅಥವಾ ನೀಡಿದಂತೆ ನಾಟಕ ಮಾಡುತ್ತಿದ್ದರು? ಮಾತನಾಡುವಾಗ ಉದುರಿಸುತ್ತಿದ್ದ ನುಡಿ ಮುತ್ತುಗಳು ಯಾಕೆ ಅಷ್ಟು ಗಲೀಜಾಗಿ ಇರುತ್ತಿತ್ತು ಅಂದರೆ ಅದಕ್ಕೆ ಕಾರಣ ಜಾತಕದಲ್ಲಿ ನೀಚ ಸ್ಥಿತಿಯಲ್ಲಿರುವ ಬುಧ ಗ್ರಹ. ಆ ಬುಧ ವಿದ್ಯಾ ಕಾರಕ. ಗುರು ಗ್ರಹ ಜ್ಞಾನ ಕಾರಕ. ಅಲ್ಲಿಗೆ ಯಾರ ಜಾತಕದಲ್ಲಿ ಬುಧ ನೀಚ ಸ್ಥಿತನಾಗಿರುತ್ತಾನೋ ಅವರಿಗೆ ಹೆಚ್ಚಿನ ವಿದ್ಯೆ ಇರುವುದಿಲ್ಲ. ಆದರೆ ಅದನ್ನು ಗುರು ಗ್ರಹ ನೀಡುವ ಜ್ಞಾನ ಬಳಸಿ, ಮುಚ್ಚಿ ಹಾಕುತ್ತಾರೆ. ಬುಧ ಇವರ ಜಾತಕದಲ್ಲಿ ನೀಚ ಸ್ಥಾನದಲ್ಲಿ ಇರುವುದರಿಂದಲೇ ಮಾತನಾಡುವಾಗ ಹಾಗೂ ಬರೆಯುವಾಗ ನೀಚ ಸಾಲುಗಳನ್ನು ಬಳಸುತ್ತಾರೆ.

ಗುರುಚಾಂಡಾಲ ಯೋಗ
ಇನ್ನು ರವಿ ಬೆಳೆಗೆರೆ ಜಾತಕದ ಇನ್ನೊಂದು ವಿಶೇಷವಾದ ಯೋಗದ ಬಗ್ಗೆ ಇಲ್ಲಿ ಹೇಳಲೇ ಬೇಕು. ಸಾಮಾನ್ಯವಾಗಿ ಆ ದೋಷದಿಂದ ಸಮಸ್ಯೆಗೆ ಒಳಗಾದವರೇ ಹೆಚ್ಚು. ಆದರೆ ಇಲ್ಲಿ ರವಿ ಜಾತಕದಲ್ಲಿ ಹಾಗೆ ಆಗಿಲ್ಲ. ಆ ದೋಷವನ್ನು ಇನ್ನು ಸಾಧ್ಯ ಇಲ್ಲ ಅನ್ನುವಷ್ಟು ಹೆಚ್ಚಾಗಿ ತನ್ನ ಸೌಕರ್ಯಕ್ಕೆ, ಲಾಭಕ್ಕೆ ಬಳಸಿಕೊಂಡಿದ್ದಾರೆ. ಆ ದೋಷಪೂರಿತ ಯೋಗವೇ "ಗುರುಚಾಂಡಾಲ ಯೋಗ" ! ಯಾರಿಗೆ ಈ ಯೋಗ ಇರುತ್ತದೆ ಅವರನ್ನು ಜನ ಅಪಾರ್ಥ ಮಾಡಿಕೊಳ್ಳುವುದು ಹೆಚ್ಚು. ಅವರು ಒಂದರ್ಥದಲ್ಲಿ ಹೇಳಿದರೆ, ಜನ ಇನ್ನೊಂದು ಅರ್ಥದಲ್ಲಿ ಸ್ವೀಕರಿಸುತ್ತಾರೆ. ಈ ಯೋಗ ಇರುವ ವ್ಯಕ್ತಿಗೆ ಬಹಳ ದೊಡ್ಡ ಶಕ್ತಿ ಇದೆ ಅನ್ನುವ ಭಾವನೆ ಇತರರಲ್ಲಿ ಇರುತ್ತದೆ. ಆದರೆ ವಾಸ್ತವದಲ್ಲಿ ಹಾಗೆ ಏನೂ ಇರುವುದಿಲ್ಲ.

ಯೋಗದ ಲಾಭವಾಗಿದೆ
ಇಲ್ಲಿ ರವಿಯ ಜಾತಕದಲ್ಲಿ ಆಗಿದ್ದೂ ಅದೇ. ಗುರುಚಾಂಡಾಲ ಯೋಗ ಇಷ್ಟು ಉತ್ತಮ ಲಾಭ ಆಗುವಂಥ ವಿಧಾನದಲ್ಲಿ ಬಳಕೆ ಆಗಿದ್ದು ಬಹಳ ಅಪರೂಪ. ಈ ವ್ಯಕ್ತಿಯಲ್ಲಿ ಏನೋ ಶಕ್ತಿ ಇದೆ, ಯಾರೋ ದೊಡ್ಡವರ ಸಾಥ್ ಇದೆ ಅಥವಾ ಈ ವ್ಯಕ್ತಿಯೇ ದೊಡ್ಡ ಶಕ್ತಿ ಇತ್ಯಾದಿ ಭ್ರಮೆಯನ್ನು ಸಮಾಜದಲ್ಲಿ ಬಿತ್ತಿ ಬೆಳೆಸಲು ಅನುವು ಆಯಿತು. ನೀವು ರವಿ ವಿಚಾರದಲ್ಲಿ ಎಷ್ಟು ತಪ್ಪಾಗಿ ಯೋಚಿಸುತ್ತೀರೋ ಅಷ್ಟು ರವಿಗೆ ಲಾಭ ! ಆದರೆ ಈ ದೋಷ ಇರುವ ಎಲ್ಲರಿಗೂ ಹಾಗೆ ಅಲ್ಲ, ಅದರಿಂದ ಅವರಿಗೆ ನಷ್ಟವೇ ಜಾಸ್ತಿ !

ಶನಿ ಮಹಾ ದಶೆ
ಈಗ ರವಿ ಬೆಳೆಗೆರೆ ಅವರ ಮೇಲೆ ಹತ್ಯೆ ಮಾಡಲು ಸುಪಾರಿ ಕೊಟ್ಟ ಆರೋಪ ಬಂದಿದೆ. ಅದರ ಪರಿಣಾಮ ಜೈಲು, ಪೊಲೀಸ್ ಹಾಗೂ ನ್ಯಾಯಾಲಯ ಇತ್ಯಾದಿ ಎದುರಿಸುತ್ತಿದ್ದಾರೆ. ಇದಕ್ಕೆ ಗ್ರಹ ಸ್ಥಿತಿಗಳೇ ಕಾರಣ. ರವಿ ಬೆಳೆಗೆರೆ ಜಾತಕದ ಪ್ರಕಾರ ಅವರಿಗೆ ಶನಿ ಮಹಾ ದಶೆ ಪ್ರಾರಂಭಗೊಂಡಿದೆ. ಅಷ್ಟೇ ಅಲ್ಲ ಅವರಿಗೆ ಈ ವರ್ಷದ ಆದಿಯಿಂದ ಸಾಡೇ ಸಾತ್ ಸಹ ಪ್ರಾರಂಭವಾಗಿದೆ. ಶನಿಗ್ರಹ ಇಷ್ಟು ದಿನ ವಕ್ರ ಗತಿಯಲ್ಲಿ ಇದ್ದಿದ್ದರಿಂದ ಅಷ್ಟಾಗಿ ಗೊತ್ತಾಗಲಿಲ್ಲ. ಕೇವಲ ಆರೋಗ್ಯ ಬಾಧೆ ಇತ್ಯಾದಿ ಅಷ್ಟನ್ನೇ ಅನುಭವಿಸದರು.

ಸಾಡೇ ಸಾತ್ ನ ಪ್ರಭಾವ
ಆದರೆ, ಈಗ ಸಂಪೂರ್ಣ ಸಾಡೇ ಸಾತ್ ನ ಪ್ರಭಾವ ಇದೆ. ಜೊತೆಗೆ ಶನಿ ಮಹಾ ದಶೆ ನಡೆಯುತ್ತಿದೆ. ಆ ಎಲ್ಲದರ ಪರಿಣಾಮ ಕೋರ್ಟು- ಕಚೇರಿ, ಜೈಲು ಇದೆಲ್ಲಾ ಆಗ್ತಾ ಇದೆ. ನೆನಪಿಡಿ, ಶನಿ ಕೇವಲ ಕಷ್ಟ ಕೊಡುವ ಗ್ರಹ ಅಲ್ಲ ! ಆದರೆ ನಾವು ಮಾಡಿದ ಎಲ್ಲ ಪಾಪ- ಪುಣ್ಯ ಕೆಲಸಗಳನ್ನು ಲೆಕ್ಕ ಹಾಕಿ ಅದರ ಫಲವನ್ನು ಸರಿಯಾಗಿ ಕೊಡುವ ನ್ಯಾಯ ದೇವರು. ಶನಿ ಗ್ರಹದ ಪ್ರಭಾವ ಹೆಚ್ಚು ಇದ್ದಾಗ ಮನುಷ್ಯ ಕಷ್ಟ ಅನುಭವಿಸುತ್ತಿದ್ದಾನೆ ಎಂದರೆ ಪೂರ್ವದಲ್ಲಿ ಅವರ ಕೃತ್ಯಗಳು ಹೇಗಿದ್ದವು ಎನ್ನುವುದನ್ನು ನಾವು ಊಹಿಸಬಹುದು.
ವಿಠ್ಠಲ ಭಟ್, ಸಂಪರ್ಕ ಸಂಖ್ಯೆ 9845682380.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications