ಬೆಂಗಳೂರು ಸಬರ್ಬನ್ ರೈಲಿನ ಕರಡು ಡಿಪಿಆರ್ ಮಾಸಾಂತ್ಯಕ್ಕೆ ಸಿದ್ಧ

ಬೆಂಗಳೂರು, ನವೆಂಬರ್ 14: ಬೆಂಗಳೂರಿನ ಜನದಟ್ಟಣೆಯನ್ನು ಸ್ವಲ್ಪ ಮಟ್ಟಗೆ ಕಡಿಮೆ ಮಾಡಲು ಆಯೋಜಿಸಲಾದ ಉಪನಗರ ರೈಲು ಯೋಜನೆಗೆ ಮತ್ತೆ ಜೀವ ಬಂದಿದೆ.

ಸಬ್‌ಅರ್ಬನ್ ರೈಲುಸೌಲಭ್ಯಕ್ಕೆ ವಿಸ್ತೃತ ಯೋಜನಾ ವರದಿ ಮುಂದಿನ ಜನವರಿ ಅಂತ್ಯದೊಳಗೆ ಸಿದ್ಧಗೊಳ್ಳಲಿದೆ.ಈಗಾಗಲೇ ಈ ಯೋಜನೆಗೆ ಅನುಮತಿ ದೊರೆತಿದೆ.

ಇದನ್ನಾಧರಿಸಿ ರೈಟ್ಸ್ ಸಂಸ್ಥೆ ಕರಡು ಡಿಪಿಆರ್ ಅನ್ನು ನವೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸಲಿದೆ. ಆ ಬಳಿಕ ಇದರ ಸಾಧಕಬಾಧಕ ಆಧರಿಸಿ ಅಂತಿಮ ವರದಿಯು ಸರ್ಕಾರದ ಅಂಗೀಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ಒಟ್ಟು 161 ಕಿ.ಮೀ ಉದ್ದದ ಅಬ್ ಅರ್ಬನ್ ರೈಲು ಯೋಜನೆಯಲ್ಲಿ 99 ಕಿ.ಮೀ ಎತ್ತರಿಸಿದ ಮಾರ್ಗವೂ ಇರಲಿದೆ. ಇದಕ್ಕೆ ಅಧಿಕ ಹಣ ಖರ್ಚಾಗುವುದರಿಂದ ಯೋಜನಾ ವೆಚ್ಚ 17 ಸಾವಿರ ಕೋಟಿ ರೂ ಗೆ ಹೆಚ್ಚಿದೆ.

Suburban rail project DPR draft may ready soon

ಈ ಹಿಂದೆಯೂ ಡಿಪಿಆರ್ ಸಿದ್ಧಪಡಿಸಿದ್ದರೂ ಸರ್ಕಾರ ಒಪ್ಪಿಗೆ ನೀಡಿ ಯೋಜನೆ ಜಾರಿಯಾಗಿರಲಿಲ್ಲ, ಯೋಜನೆಯಲ್ಲಿ ಪದೇ ಪದೆ ಬದಲಾವಣೆಯಾಗುತ್ತಿರುವುದರಿಂದ ಅನುಷ್ಠಾನದ ಕುರಿತು ನಿಖರತೆ ವ್ಯಕ್ತವಾಗುತ್ತಿಲ್ಲ. ಇದಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ವಿಚಾರ ಮಾಡಿದ್ದರೂ ಇದುವರೆಗೂ ಅದೂ ಕೂಡ ಅನುಷ್ಠಾನವಾಗಿಲ್ಲ, ಈ ಕುರಿತು ಸರ್ಕಾರ ಸ್ಪಷ್ಟ ಹೆಜ್ಜೆ ಇರಿಸಿದರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+