ಬೆಂಗಳೂರು: ತೆಲುಗು ಠಾಗೂರ್​ ಸಿನಿಮಾ ಸ್ಟೈಲ್​ನಲ್ಲಿ ಸಬ್ ರಿಜಿಸ್ಟ್ರಾರ್ ಕಿಡ್ನಾಪ್​!

ಬೆಂಗಳೂರು, ಜುಲೈ.15: ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಸಬ್ ರಿಜಿಸ್ಟರ್ ಆಫೀಸರ್ ಒಬ್ಬರನ್ನು ತೆಲುಗಿನ ಠಾಗೂರ್ ಸಿನಿಮಾ ರೀತಿಯಲ್ಲಿ ಕಿಡ್ನಾಪ್ ಮಾಡಿದ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬ್ಯುಸಿ ರಸ್ತೆಯಲ್ಲಿ ಹೋಗುತ್ತಿದ್ದ ರಂಗಸ್ವಾಮಿ ಎನ್ನುವ ಸಬ್ ರಿಜಿಸ್ಟರ್ ಆಫೀಸರ್ ಅನ್ನು 10 ಜನರ ಗ್ಯಾಂಗ್ ವೊಂದು ಕಾರಿನಲ್ಲಿ ಕಿಡ್ನಾಪ್​ ಮಾಡಿದೆ.

ಜನರಿಗೆ ಕಾಟ ಕೊಡುತ್ತಿದ್ದ ಈ ಸರ್ಕಾರಿ ಅಧಿಕಾರಿಗೆ ಪಾಠ ಕಲಿಸುವ ಉದ್ದೇಶದಿಂದ ಶಾಂತಿನಗರದ ಸಬ್ ರಿಜಿಸ್ಟರ್ ಕಚೇರಿ ಯಿಂದ ಕಿಡ್ನಾಪ್​ ಮಾಡಿ, ಕಾರ್​ನಲ್ಲಿ ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಕಿಡ್ನಾಪ್ ಮಾಡುವಾಗ ರಂಗಸ್ವಾಮಿ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ್ದಾರೆ.

Sub-register officer was kidnapped by a strangers in cinema style

ಅಲ್ಲದೇ, ಕಾರಿನಲ್ಲಿ ಜೋರಾಗಿ ಮ್ಯೂಸಿಕ್​ ಹಾಕಿ ಅವರನ್ನು ಕರೆದೊಯ್ದಿದ್ದಾರೆ. ಸಂಜೆ 5 ರಿಂದ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿದ್ದಲ್ಲದೆ ಹಲ್ಲೆ ಮಾಡಿದ್ದಾರೆ.

ಬೆಂಗಳೂರಿನ ಕೆಎಚ್​ ರಸ್ತೆಯ ಫುಟ್​ಪಾತ್​ನಿಂದ ಈ ಹಿರಿಯ ಸಬ್ ರಿಜಿಸ್ಟರ್ ಆಪೀಸರ್ ಅನ್ನು ಕಿಡ್ನಾಪ್​ ಮಾಡಿದ್ದಾರೆ. ಈ ಘಟನೆ ಇದೇ ಜುಲೈ 5 ರಂದು ನಡೆದಿದ್ದು, ಜುಲೈ 6 ರಂದು ರಂಗಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಾತ್ರಿಯಿಡೀ ಸುತ್ತಾಡಿಸಿದ ಅವರು ಜುಲೈ 6ರ ಬೆಳಗಿನ ಜಾವ ಕನಕಪುರ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ. ಕಿಡ್ನಾಪ್ ಮಾಡಿದ ಗ್ಯಾಂಗ್ ನವರು 20-25 ವರ್ಷದೊಳಗಿನ ಆಸಾಮಿಗಳಾಗಿದ್ದು, ಈ ಕುರಿತು ವಿಲ್ಸನ್​ಗಾರ್ಡನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+