ಅತ್ಯಾಚಾರದ ವಿರುದ್ಧ ಬೀದಿಗಿಳಿದ ವಾಸವಿ ವಿದ್ಯಾರ್ಥಿಗಳು

ಬೆಂಗಳೂರು, ಜು.28 : ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಅತ್ಯಾಚಾರದ ಪ್ರಕರಣಗಳನ್ನು ಖಂಡಿಸಿ ಜೆಪಿ ನಗರದ ವಾಸವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ‌ಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಾಸವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ‌ ಶ್ರೀರಾಮುಲು, ಪ್ರಾಂಶುಪಾಲಾ ನಿರ್ದೇಶಕಿ ಪಾರ್ವತಿ, ವಾಸವಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲೆ ಶ್ರೀಲತಾ, ಜೆಪಿ ನಗರದ ಕಾರ್ಪೋರೇಟರ್‌ ಚಂ‌ದ್ರಶೇಖರ್‌ ರಾಜು ನೇತೃತ್ವದಲ್ಲಿ ಐನೂರಕ್ಕೂ ಅಧಿಕ ವಿದ್ಯಾರ್ಥಿ‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.[ಅತ್ಯಾಚಾರ ಖಂಡಿಸಿ ಜು.31ರಂದು ಬೆಂಗಳೂರು ಬಂದ್]

ಬೆಳಗ್ಗೆ 10 ಗಂಟೆಗೆ ಜೆಪಿನಗರದ ಕಾಲೇಜ್‌ ಕ್ಯಾಂಪಸ್‌ನಿಂದ ಆರಂಭಗೊಂಡ ವಿದ್ಯಾರ್ಥಿ‌ಗಳ ಬೃಹತ್ ಪ್ರತಿಭಟನಾ ಮೆರವಣಿಗೆ ಜಯನಗರ 4ನೇ ಬ್ಲಾಕ್ ಮುಖ್ಯ ರಸ್ತೆ ಮೂಲಕ ಸೌಂತ್ ಎಂಡ್ ವೃತ್ತ ತಲುಪಿ ಪೊಲೀಸ್ ಉಪ ಆಯುಕ್ತರಿಗೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯ ಚಿತ್ರಗಳು ಇಲ್ಲಿವೆ.

ಪ್ರತಿಭಟನೆಯ ಮತ್ತಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಬಹುದು: ಗ್ಯಾಲರಿ

 ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಬೆಂಗಳೂರು ಮತ್ತು ರಾಜ್ಯದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಗರದ ವಾಸವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ‌ಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಐನೂರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ‌ಗಳು ಭಾಗಿ:

ಐನೂರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ‌ಗಳು ಭಾಗಿ:

ವಾಸವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ‌ ಶ್ರೀರಾಮುಲು, ಪ್ರಾಂಶುಪಾಲಾ ನಿರ್ದೇಶಕಿ ಪಾರ್ವತಿ, ವಾಸವಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲೆ ಶ್ರೀಲತಾ, ಜೆಪಿ ನಗರದ ಕಾರ್ಪೋರೇಟರ್‌ ಚಂ‌ದ್ರಶೇಖರ್‌ ರಾಜು ನೇತೃತ್ವದಲ್ಲಿ ಐನೂರಕ್ಕೂ ಅಧಿಕ ವಿದ್ಯಾರ್ಥಿ‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಬೃಹತ್ ಮೆರವಣಿಗೆ:

ಬೃಹತ್ ಮೆರವಣಿಗೆ:

ವಾಸವಿ ಕಾಲೇಜಿನಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಜಯನಗರ 4ನೇ ಬ್ಲಾಕ್ ಮುಖ್ಯ ರಸ್ತೆ ಮೂಲಕ ಸೌಂತ್ ಎಂಡ್ ವೃತ್ತ ತಲುಪಿತು.

ಕಾಮುಕರನ್ನು ಗಲ್ಲಿಗೇರಿಸಿ:

ಕಾಮುಕರನ್ನು ಗಲ್ಲಿಗೇರಿಸಿ:

ಲೈಂಗಿಕ ಕಿರುಕುಳ ನೀಡುತ್ತಿರುವ ಕಾಮುಕರನ್ನು ಗಲ್ಲಿಗೇರಿಸಿ ಎಂದು ವಿದ್ಯಾರ್ಥಿ‌ಗಳು ಆಗ್ರಹಿಸಿದರು.

ಮನವಿ ಸಲ್ಲಿಕೆ:

ಮನವಿ ಸಲ್ಲಿಕೆ:

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಆಗ್ರಹಿಸಿ ವಾಸವಿ ವಿದ್ಯಾ ಸಂಸ್ಥೆಯ ಅಧಿಕಾರಿಗಳು ಪೊಲೀಸ್ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು. ಪೊಲೀಸ್ ಉಪ ಆಯುಕ್ತರ ಪರವಾಗಿ ಪಿಎಸ್‌ಐ ರೇಣುಕಾ ಪ್ರಸಾದ್‌ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+