Darshan Thoogudeepa: ನಟ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿ.!
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ನಡುವೆಯೇ ಇದೀಗ ಬಂದಿರುವ ಎಫ್‌ಎಸ್‌ಎಲ್ ವರದಿಯಲ್ಲಿ ದರ್ಶನ್ ವಿರುದ್ಧದ ಮಹತ್ವದ ಸಾಕ್ಷ್ಯವೊಂದು ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಇನ್ನು ಈಗಾಗಲೇ ಈ ಹಿಂದೆ ನಟ ದರ್ಶನ್ ಬಟ್ಟೆಗಳನ್ನು ಹೈದರಾಬಾದ್ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಇದರಲ್ಲಿ ದರ್ಶನ್ ವಿರುದ್ಧ ಮಹತ್ವದ ಸಾಕ್ಷಿ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ನಟ ದರ್ಶನ್‌ಗೆ ಮತ್ತಷ್ಟು ಢವಢವ ಶುರುವಾದಂತಾಗಿದೆ.

ನಟ ದರ್ಶನ್ ಮನೆಯಲ್ಲಿ ಪೊಲೀಸರು ಬಟ್ಟೆಗಳನ್ನು ವಶಪಡಿಸಿಕೊಂಡು ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಇದೀಗ ಆ ಬಟ್ಟೆ ಮೇಲೆ ಇರುವ ರಕ್ತದ ಕೆಲೆ ರೇಣುಕಾಸ್ವಾಮಿಯವರದ್ದೇ ಎನ್ನುವುದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢವಾಗಿದೆ ಎಂದು ತಿಳಿದುಬಂದಿದೆ. ಇದರಿಂದ ದರ್ಶನ್‌ಗೆ ಮತ್ತಷ್ಟು ಕಂಟಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಅಂದು ದರ್ಶನ್ ಪ್ಯಾಂಟ್, ಕಪ್ಪು ಟೀಶರ್ಟ್ ಧರಿಸಿದ್ದರು ಎಂದು ತಿಳಿದುಬಂದಿದೆ.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ನಟ ದರ್ಶನ್ & ಗ್ಯಾಗ್ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆಸಿಕೊಂಡು ಹಲ್ಲೆ ಮಾಡುವುದಲ್ಲದೆ, ಭೀಕರವಾಗಿ ಹತ್ಯೆ ಮಾಡಿದ್ದರು ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖವಾಗಿದೆ. ಶೆಡ್‌ನಲ್ಲಿ ರಕ್ತ ಕಿತ್ತು ಬರುವ ಹಾಗೆ ರೇಣುಕಾಸ್ವಾಮಿಗೆ ಹೊಡೆದು ಕೊಲೆ ಮಾಡಿ ಶವವನ್ನು ಕಾಲುವೆ ಬಳಿ ಬಿಸಾಡಿ ಹೋಗಿದ್ದರು ಎಂದು ತಿಳಿದುಬಂದಿತ್ತು.
ಬಳಿಕ ಎಸಿಪಿ ಚಂದನ್ ಅವರ ನೇತೃತ್ವದ ತಂಡ ಜಾಣತನದಿಂದ ತನಿಖೆ ಮುಂದುವರೆಸಿ ಒಬ್ಬೊಬ್ಬರೇ ಆರೋಪಿಗಳನ್ನು ಬಂಧಿಸಿದ್ದು, ಬಳಿಕ ನಟ ದರ್ಶನ್, ಪವಿತ್ರಾಗೌಡಳನ್ನು ವಶಕ್ಕೆ ಪಡೆಯಿತು. ಆಗಿನಿಂದಲೂ ತನಿಖೆ ಚುರುಕುಗೊಳಿಸಿದ ಪೊಲೀಸ್ ಪಡೆ ಯಾವುದೇ ಒತ್ತಡಗಳಿಗೆ ಕ್ಯಾರೆ ಅನ್ನದೇ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಅಲ್ಲದೆ, ನಟ ದರ್ಶನ್ ಮನೆಗೆ ಭೇಟಿ ನೀಡಿ ಅವರ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದರು. ನಂತರ ಆ ಬಟ್ಟೆಗಳನ್ನು ಎಫ್‌ಎಸ್‌ಎಲ್ ವರದಿ ಕಳುಹಿಸಿತ್ತು. ಇದೀಗ ಎಫ್‌ಎಸ್‌ಎಲ್ ವರದಿ ಬಂದಿದ್ದು, ದರ್ಶನ್ ಬಟ್ಟೆಗಳ ಮೇಲೆ ಇರುವ ರಕ್ತದ ಕಲೆ ರೇಣುಕಾಸ್ವಾಮಿಯವರದ್ದೇ ಎಂದು ದೃಢವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.











Click it and Unblock the Notifications