ಬೆಂಗಳೂರಲ್ಲಿ ಇಬ್ಬರು ಬಾಲಕರ ಮೇಲೆ ಬೀದಿನಾಯಿಗಳ ದಾಳಿ

ಬೆಂಗಳೂರು, ಸೆಪ್ಟೆಂಬರ್ 6: ವಾರದ ಹಿಂದಷ್ಟೇ ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದ ಬೀದು ನಾಯಿಗಳು ಗುರುವಾರ ಮತ್ತೊಮ್ಮೆ ನಗರದಲ್ಲಿ ಅಟ್ಟಹಾಸ ಮೆರೆದಿದೆ.

ರಾಜಾಜಿನಗರ ಸಮೀಪವಿರುವ ಗುಬ್ಬಣ್ಣ ಲೇಔಟ್‌ ಬಳಿ ಇಬ್ಬರು ಬಾಲಕರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ, ಆಕಾಶ್ ಮತ್ತು ಸಾಯಿಸಿರಿ ದಾಳಿಗೆ ಒಳಗಾದವರು. ಈ ಇಬ್ಬರು ಬಾಲಕರು ರಾಜಾಜಿನಗರದ ಸೇಂಟ್‌ ಮೀರಾ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗಾಯಗೊಂಡ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾರದ ಹಿಂದೆ ನಾಲ್ಕು ವರ್ಷದ ಬಾಲಕ ಅರುಣನ ಮೇಲೆ ಹತ್ತಕ್ಕಿಂತ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ್ದವು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

Stray dogs attack on two students in Bengaluru

ಅಂದು ಬಿಬಿಎಂಪಿ ಎಚ್ಚೆತ್ತುಕೊಂಡು ಬಾಲಕನನ್ನು ಕಚ್ಚಿದ್ದ ಬೀದಿನಾಯಿಗಳನ್ನು ಮಾತ್ರ ಹುಡುಕಿ ಬಂಧಿಸಿಟ್ಟಿದ್ದರು. ಆದರೆ ಏರಿಯಾಗೆ ಮಾತ್ರ ಸೀಮಿತವಾಯಿತೇ, ಉಳಿದೆಲ್ಲಾ ಪ್ರದೇಶಗಳಲ್ಲೂ ಬೀದಿನಾಯಿಗಳ ಕಾಟ ವಿಪರೀತವಾಗಿದೆ ಎನ್ನುವ ಮಾತು ಪೋಷಕರ ವಲಯದಿಂದ ಕೇಳಿಬಂದಿತ್ತು. ಇದೀಗ ಮತ್ತೊಂದು ಘಟನೆ ನಡೆದಿರುವುದು ಪೋಷಕರನ್ನು ಆತಂಕಕ್ಕೀಡುಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+