ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆಳತಿಯನ್ನು ನೋಡಿಕೊಳ್ಳಲು ಈ ಅಜ್ಜನಿಗೆ ಆಟೋ ಸಂಪಾದನೆ ಸಾಕಂತೆ

|
Google Oneindia Kannada News

ಬೆಂಗಳೂರು ಮಾರ್ಚ್ 30: ಇವರೊಬ್ಬ ಆಟೋ ಚಾಲಕ. ನಗುಮುಖದ ಈ ಅಜ್ಜನಿಗೆ 74 ವರ್ಷ. ಈ ಇಳಿ ವಯಸ್ಸಿನಲ್ಲಿ ಆಟೋ ಚಾಲಕರಾಗಿರುವ ಇವರು ಇಂಗ್ಲಿಷನ್ನು ಸ್ಪಷ್ಟವಾಗಿ ಕೇಳುಗರ ಹುಬ್ಬೇರಿಸುವಂತೆ ಮಾತನಾಡುತ್ತಾರೆ. ಇವರ ಇಂಗ್ಲಿಷ್ ಮಾತನಾಡುವ ಶೈಲಿಗೆ ಕೇಳುಗರು ಮರುಳಾಗಿದ್ದಾರೆ.

ಬೆಂಗಳೂರು ಮೂಲದ ವೃತ್ತಿಪರ ನಿಕಿತಾ ಅಯ್ಯರ್ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಅಜ್ಜನ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಆಟೋ ಚಾಲಕನೊಂದಿಗೆ 45 ನಿಮಿಷ ಮಾತನಾಡಿದ ನಿಕಿತಾ ತಮ್ಮ ಹಾಗೂ ಅಜ್ಜನ ನಡುವಿನ ಸಂಭಾಷಣೆಯ ಬಗ್ಗೆ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಈ ನುಗುಮುಖದ ಅಜ್ಜ ವೃತ್ತಿಯಲ್ಲಿ ಇಗ್ಲೀಷ್ ಉಪನ್ಯಾಸಕ. ಹಾಗಾದ್ರೆ ಈ ಅಜ್ಜ ಆಟೋ ಓಡಿಸಿಕೊಂಡಿರಲು ಕಾರಣವೇನು. ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುವ ಅಜ್ಜನ ಹಿನ್ನೆಲೆ ಏನು ತಿಳಿಯೋಣ.

CRPF ಶಿಬಿರದಲ್ಲಿ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾದ ಬುರ್ಖಾಧಾರಿ ಮಹಿಳೆCRPF ಶಿಬಿರದಲ್ಲಿ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾದ ಬುರ್ಖಾಧಾರಿ ಮಹಿಳೆ

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಶ್ರೀಮತಿ ಅಯ್ಯರ್ ಈ ಅಜ್ಜನ ಬಗ್ಗೆ ಬರೆದಿದ್ದಾರೆ. "ಈ ಬೆಳಗ್ಗೆ ನಾನು ಕೆಲಸಕ್ಕೆ ಹೋಗುವಾಗ ಹೆದ್ದಾರಿಯ ಮಧ್ಯದಲ್ಲಿ ಉಬರ್ ಆಟೋಗಾಗಿ ಕಾಯುತ್ತಿದೆ. ನನ್ನ ಮುಖದಲ್ಲಿ ತಡವಾಗುವ ಆತಂಕವಿತ್ತು. ಈ ಆತಂಕ ಆಟೋ ರಿಕ್ಷಾವನ್ನು ಓಡಿಸುತ್ತಿದ್ದ ವೃದ್ಧನೊಬ್ಬನನ್ನು ನಿಲ್ಲಿಸಿ. ನಾನು ಎಲ್ಲಿಗೆ ಹೋಗಬೇಕೆಂದು ನನ್ನನ್ನು ಕೇಳುವಂತೆ ಮಾಡಿತು" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Story of 74 year Old Patabi Raman Bangalore auto driver who was once an English lecturer

ಆಟೋ ಚಾಲಕ ಇಂಗ್ಲಿಷ್‌ನಲ್ಲಿ ಉತ್ತರ ನೀಡುತ್ತಿದ್ದಂತೆ ಮೊದಮೊದಲು ಸಂದೇಹಗೊಂಡ ಆಕೆ, ನಗರದ ಇನ್ನೊಂದು ತುದಿಯಲ್ಲಿರುವ ತನ್ನ ಕಛೇರಿಯನ್ನು ತಲುಪಬೇಕೆಂದು ಆಟೋ ಡ್ರೈವರ್‌ಗೆ ಹೇಳಿದಳು. ಡ್ರೈವರ್ ಇಂಗ್ಲಿಷಿನಲ್ಲಿ ಉತ್ತರಿಸಿದ್ದು ಅವಳಿಗೆ ಅಚ್ಚರಿ ಮೂಡಿಸಿದೆ.

"ದಯವಿಟ್ಟು ಬನ್ನಿ ಮೇಡಂ, ನಿಮಗೆ ಎಷ್ಟಾಗುತ್ತೋ ಅಷ್ಟನ್ನೇ ಪಾವತಿಸಬಹುದು ಎಂದು ಅಜ್ಜ ಇಂಗ್ಲಿಷ್‌ನಲ್ಲಿ ಹೇಳಿದರು" ಎಂದು ಶ್ರೀಮತಿ ಅಯ್ಯರ್ ಬರೆದಿದ್ದಾರೆ. "ಚಾಲಕನ ವರ್ತನೆಯಿಂದ ವಿಸ್ಮಯಗೊಂಡ ನಾನು ಸರಿ ಎಂದು ಹೇಳಿದೆ ಮತ್ತು ನಂತರದ 45 ನಿಮಿಷಗಳು ನಾವು ಅವರೊಂದಿಗೆ ಮಾತನಾಡಿದ್ದು ಸಂತೋಷ ತಂದಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ನಿಕಿತಾ ಅಯ್ಯರ್ ತನ್ನ ಕುತೂಹಲವನ್ನು ತಡೆಯಲಾರದೆ ಚಾಲಕನನ್ನು "ಇಷ್ಟು ಒಳ್ಳೆಯ ಇಂಗ್ಲಿಷ್ ನ್ನು ನೀವು ಹೇಗೆ ಮಾತನಾಡಲು ಕಲಿತಿದ್ದೀರಿ" ಎಂದು ಕೇಳಿದಾಗ, ಆ ವ್ಯಕ್ತಿ ತಾನು ಮುಂಬೈ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿದ್ದೆ. ಜೊತೆಗೆ ನಾನು ಎಂಎ ಮತ್ತು ಎಂಎಡ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಶ್ರೀಮತಿ ಅಯ್ಯರ್ ಅವರು "ಹಾಗಾದರೆ ನೀವು ಆಟೋವನ್ನು ಏಕೆ ಓಡಿಸುತ್ತೀರಿ?" ಎಂದು ಕೇಳಿದರು.

ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ ಆಟೋ ಚಾಲಕ ತನ್ನ ಜೀವನದ ಬಗ್ಗೆ ತೆರೆದಿಟ್ಟನು. ಅವರು ತಮ್ಮ ಹೆಸರು ಪತಾಬಿ ರಾಮನ್ ಎಂದು ಹೇಳಿಕೊಂಡಿದ್ದಾರೆ. ಅವರು 14 ವರ್ಷಗಳಿಂದ ಆಟೋ ಓಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಕಾಲೇಜು ಉಪನ್ಯಾಸಕರಾಗಿ ತಮ್ಮ ಹುದ್ದೆಯಿಂದ ನಿವೃತ್ತರಾದಾಗಿನಿಂದ ಕರ್ನಾಟಕದಲ್ಲಿ ಯಾವುದೇ ಉದ್ಯೋಗ ಸಿಗದ ಕಾರಣ ಮುಂಬೈನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ರಾಮನ್ ಅವರು ಅಯ್ಯರ್ ಅವರ ಮುಂದೆ ಹೇಳಿಕೊಂಡಿದ್ದಾರೆ.

ಅವರು ಕರ್ನಾಟಕದಲ್ಲಿ ಕೆಲಸ ಹುಡುಕುವ ವೇಳೆ "ನಿಮ್ಮ ಜಾತಿ ಯಾವುದು?" ಎಂದು ಕೇಳಿದರು. ನಾನು ನನ್ನ ಹೆಸರನ್ನು ಪತಾಬಿ ರಾಮನ್ ಎಂದು ಹೇಳಿದಾಗ ಅವರು, 'ನಾವು ನಿಮಗೆ ತಿಳಿಸುತ್ತೇವೆ' ಎಂದು ಹೇಳಿದರು ಎಂದು ಪತಾಬಿ ಅವರು ಅಯ್ಯರ್ ಮುಂದೆ ಹೇಳಿಕೊಂಡಿರುವುದನ್ನು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಕರ್ನಾಟಕದ ಕಾಲೇಜುಗಳಿಂದ ಅವರು ಪಡೆದ ಈ ಪ್ರತಿಕ್ರಿಯೆಯಿಂದ ಬೇಸರಗೊಂಡ ಪತಾಬಿ ಅವರು ಮಹಾರಾಷ್ಟ್ರದ ಮುಂಬೈಗೆ ತೆರಳಿದರು. ಅಲ್ಲಿ ಅವರು ಪ್ರತಿಷ್ಠಿತ ಕಾಲೇಜಿನಲ್ಲಿ ಉದ್ಯೋಗವನ್ನು ಪಡೆದರು. 20 ವರ್ಷಗಳ ಕಾಲ ಪೊವೈನಲ್ಲಿರುವ ಆ ಕಾಲೇಜಿನಲ್ಲಿ ಕೆಲಸ ಮಾಡಿ 60 ನೇ ವಯಸ್ಸಿನಲ್ಲಿ ನಿವೃತ್ತರಾದರು. ಬಳಿಕ ಕರ್ನಾಟಕದ ಬೆಂಗಳೂರಿಗೆ ಮರಳಿದರು.

ಇಲ್ಲಿ "ಶಿಕ್ಷಕರಿಗೆ ಸರಿಯಾಗಿ ಸಂಬಳವಿಲ್ಲ. ಇಲ್ಲಿ ಕೇವಲ 10-15,000 ರೂಪಾಯಿ ಸಂಬಳವಿದೆ. ನಂದು ಖಾಸಗಿ ಸಂಸ್ಥೆಯಾಗಿದ್ದರಿಂದ ನನಗೆ ಪಿಂಚಣಿಯೂ ಇಲ್ಲ. ರಿಕ್ಷಾ ಓಡಿಸುವ ಮೂಲಕ ನಾನು ದಿನಕ್ಕೆ ಕನಿಷ್ಠ 700-1500/- ಪಡೆಯುತ್ತೇನೆ. ನನಗೆ ಮತ್ತು ನನ್ನ ಗೆಳತಿಗೆ ಈ ಹಣ ಸಾಕು"ಎಂದು ಅವರು ನಗುತ್ತಾ ಶ್ರೀಮತಿ ಅಯ್ಯರ್‌ಗೆ ಹೇಳಿದರು.

ಗೆಳತಿ ಎಂದು ಹೇಳುತ್ತಿದ್ದಂತೆ ಅಯ್ಯರ್ ನಗಲು ಆರಂಭಿಸಿದರು. ಆಗ ಪತಾಬಿ ತಮ್ಮ ಹೆಂಡತಿಯನ್ನು ಗೆಳತಿ ಎಂದು ಕರೆಯುವುದಾಗಿ ಹೇಳಿದರು. ಯಾಕೆಂದರೆ ನಾವು ಅವರನ್ನು ಯಾವಾಗಲೂ ಸಮಾನವಾಗಿ ಪರಿಗಣಿಸಬೇಕು ಎಂದರು. "ಕೆಲವರು ಹೆಂಡತಿಯನ್ನು ಸೇವೆ ಸಲ್ಲಿಸುವ ಗುಲಾಮರು ಎಂದು ಭಾವಿಸುತ್ತಾರೆ. ಆದರೆ ಅವಳು ನನಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ವಾಸ್ತವವಾಗಿ ಅವಳು ಕೆಲವೊಮ್ಮೆ ನನಗಿಂತ ಶ್ರೇಷ್ಠಳು" ಎನ್ನುತ್ತಾರೆ ಪತಾಬಿ.

ಆಟೋ ಡ್ರೈವರ್ ತನಗೆ ಮತ್ತು ಅವನ ಹೆಂಡತಿಗೆ ಒಬ್ಬ ಮಗನಿದ್ದಾನೆ ಮತ್ತು ಅವರು ತಮ್ಮ ಬಾಡಿಗೆಯನ್ನು ಪಾವತಿಸಲು ಸಹಾಯ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅದನ್ನು ಮೀರಿ ನಾವು ನಮ್ಮ ಮಕ್ಕಳ ಮೇಲೆ ಅವಲಂಬಿತರಾಗಿಲ್ಲ, ಅವರು ತಮ್ಮ ಜೀವನವನ್ನು ನಡೆಸುತ್ತಾರೆ ಮತ್ತು ನಾವು ನಮ್ಮ ಸಂಪಾದನೆಯಲ್ಲಿ ಸಂತೋಷದಿಂದ ಬದುಕುತ್ತೇವೆ ಎಂದು ಅವರು ಹೇಳಿದರು.

ನಿಕಿತಾ ಅಯ್ಯರ್ ಅವರು ತಮ್ಮ ಪೋಸ್ಟ್ ಅನ್ನು ಪ್ರಶಂಸಿಸುವ ಕೆಲವು ಪದಗಳೊಂದಿಗೆ ಮುಕ್ತಾಯಗೊಳಿಸಿದ್ದಾರೆ. "ಜೀವನದ ಬಗ್ಗೆ ಒಂದು ದೂರಿಲ್ಲ. ಒಂದು ವಿಷಾದವಿಲ್ಲ. ಈ ವೀರರಿಂದ ಕಲಿಯುವುದು ತುಂಬಾ ಇದೆ" ಎಂದು ಅವರು ಬರೆದಿದ್ದಾರೆ. ಅವರ ಲಿಂಕ್ಡ್‌ಇನ್ ಪೋಸ್ಟ್‌ಗೆ ನೂರಾರು ಕಾಮೆಂಟ್ ಗಳು ಬಂದಿವೆ.

ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಪೋಸ್ಟ್ 72,000 ಕ್ಕೂ ಹೆಚ್ಚು 'ಲೈಕ್'ಗಳು ಮತ್ತು 2,300 ಕ್ಕೂ ಹೆಚ್ಚು 'ಷೇರ್'ಗಳೊಂದಿಗೆ ವೈರಲ್ ಆಗಿದೆ. "ಸ್ಫೂರ್ತಿದಾಯಕ ಕಥೆ," ಎಂದು ಒಬ್ಬ ವ್ಯಕ್ತಿ ಕಾಮೆಂಟ್‌ಗಳ ವಿಭಾಗದಲ್ಲಿ ಬರೆದಿದ್ದಾರೆ. "ನಾನು ಈ ವ್ಯಕ್ತಿಯನ್ನು ಮತ್ತು ಅವನ ಧೈರ್ಯವನ್ನು ಮೆಚ್ಚುತ್ತೇನೆ, ಆದರೆ ಅವನು ಎದುರಿಸಿದ ತಾರತಮ್ಯದಿಂದ ಸಹಿಸುವುದಿಲ್ಲ" ಎಂದು ಮತ್ತೊಬ್ಬರು ಬರೆದಿದ್ದಾರೆ.

Recommended Video

ಬೆಳೆ ಪರಿಹಾರ ಕೇಳಲು ಬಂದ ಅನ್ನದಾತರ ಮೇಲೆ ಲಾಠಿ ಚಾರ್ಜ್ ಮಾಡಿದ AAP ಸರ್ಕಾರ | Oneindia Kannada

English summary
Here is the Story of 74 year Old Patabi Raman auto driver in Bengaluru who was once an English lecturer. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X