ಬೆಂಗಳೂರಿನ ಸಂತ ಫ್ರಾನ್ಸಿಸ್ ಚರ್ಚ್‌ನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ
ಬೆಂಗಳೂರು, ಜನವರಿ 21: ರಾತ್ರೋ ರಾತ್ರಿ ಚರ್ಚಿಗೆ ನುಗ್ಗಿ ದುಷ್ಕರ್ಮಿಗಳು ದಾಂಧಲೆ ನಡೆಸಿರುವ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ.
ಕೆಂಗೇರಿಯ ಸಂತ ಫ್ರಾನ್ಸಿಸ್ ಚರ್ಚ್‌ನಲ್ಲಿ ರಾತ್ರಿ ದುಷ್ಕರ್ಮಿಗಳು ನುಗ್ಗಿ, ಕಿಟಗಿ ಗಾಜುಗಳು, ಬಾಗಿಲುಗಳನ್ನು ಒಡೆದಿದ್ದಾರೆ. ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಈ ದುಷ್ಕರ್ಮಿಗಳು ಯಾರು, ಯಾಕಾಗಿ ಈ ರೀತಿಯ ಕೃತ್ಯ ಎಸಗಿದ್ದಾರೆ ಎನ್ನುವ ಮಾಹಿತಿ ಹೊರಬೀಳಬೇಕಿದೆ.ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications