ಉಪನಗರ ರೈಲು: ಬಿಎಂಆರ್‌ಸಿಎಲ್ ಜೊತೆ ಚರ್ಚೆಗೆ ಸಿಎಂ ಸೂಚನೆ
ಬೆಂಗಳೂರು, ಜನವರಿ 4: ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹಾಗೂ ಬಿಎಂಆರ್‌ಸಿಎಲ್ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರೈಲ್ವೆ ಯೋಜನೆಯ ಕಾರ್ಯ ಸಾಧ್ಯತಾ ಅಧ್ಯಯನ ವರದಿಯ ಪ್ರಾತ್ಯಕ್ಷಿಕೆ ವೀಕ್ಷಿಸಿದ ಅವರು, ಉಪನಗರ ರೈಲ್ವೆ ಹಾಗೂ ಮೆಟ್ರೋ ರೈಲು ಮಾರ್ಗ ಒಂದೇ ವ್ಯಾಪ್ತಿಗೆ ಬರುವ ಪ್ರದೇಶಗಳ ತಾಂತ್ರಿಕ ಅಂಶಗಳ ಕುರಿತು ಸಭೆ ನಡೆಸುವಂತೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಕಾರ್ಯ ಸಾಧ್ಯತಾ ವರದಿ ಕುರಿತಂತೆ ವಿಸ್ತೃತವಾಗಿ ಚರ್ಚಿಸಲಾಯಿತು.

ಉಪನಗರಗಳಾದ ತುಮಕೂರು, ಮಂಡ್ಯ, ರಾಜಾನುಕುಂಟೆ, ಹೊಸೂರು, ವೈಟ್‌ಫೀಲ್ಡ್ ವರೆಗೂ ವಿಸ್ತರಿಸಲು ಅವಕಾಶವಿರುವ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲಾಯಿತು.
ಚರ್ಚೆಯ ಬಳಿಕ ರಾಜ್ಯ ಸರ್ಕಾರದಿಂದ ಜ.6ರೊಳಗೆ ಡಿಪಿಆರ್‌ಗೆ ಅನುಮೋದನೆ ಸಿಗುವ ಭರವಸೆ ದೊರೆತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್ ಇದ್ದರು.












Click it and Unblock the Notifications