ಪ್ರಭಾವಿ ಖಾತೆಗೆ ಬಿಎಸ್‌ವೈ ಬಳಿ ಬೇಡಿಕೆ ಇಟ್ಟ ಸೋಮಶೇಖರ್
ಬೆಂಗಳೂರು, ಫೆಬ್ರವರಿ 07: ಹತ್ತು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾಯಿತು. ಈಗ ಖಾತೆಗಾಗಿ ಲಾಭಿ ಪ್ರಾರಂಭವಾಗಿದೆ.
ಎಸ್.ಟಿ.ಸೋಮಶೇಖರ್ ಅವರು ಪ್ರಭಾವಿ ಖಾತೆಯನ್ನು ಪಡೆಯಲು ಪ್ರಯತ್ನ ಆರಂಭಿಸಿದ್ದು, ಲಾಭದಾಯಕ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ.
'ಬೆಂಗಳೂರಿಗನಾದ ನನಗೆ ಬೆಂಗಳೂರು ನಗರಾಭಿವೃದ್ಧಿ' ಖಾತೆ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಸೋಮಶೇಖರ್ ಹೇಳಿದ್ದು, ಖಾತೆಗಾಗಿ ಯಡಿಯೂರಪ್ಪ ಅವರ ಬಳಿ ಲಾಭಿ ಆರಂಭಿಸಿದ್ದಾರೆ.

ಸೋಮಶೇಖರ್ ಮಾತ್ರವೇ ಅಲ್ಲದೆ ನಗರಾಭಿವೃದ್ಧಿ ಖಾತೆ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಗೋಪಾಲಯ್ಯ, ಬೈರತಿ ಬಸವರಾಜು ಸಹ ಅದೇ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಆರ್.ಅಶೋಕ್, ವಿ.ಸೋಮಣ್ಣ ಸಹ ಅದೇ ಖಾತೆ ಪಡೆಯಲು ಯತ್ನ ನಡೆಸಿದ್ದರು. ಆದರೆ ಸಫಲವಾಗಲಿಲ್ಲ.
ಬೆಂಗಳೂರು ನಗರಾಭಿವೃದ್ಧಿ ಖಾತೆ ಪ್ರಸ್ತುತ ಸಿಎಂ ಯಡಿಯೂರಪ್ಪ ಬಳಿಯೇ ಇದೆ. ಮೂಲಗಳ ಪ್ರಕಾರ ಹಣಕಾಸು ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಡಿಯೂ ರಪ್ಪ ಅವರು ಯಾರಿಗೂ ನೀಡುವುದಿಲ್ಲ ಎನ್ನಲಾಗಿದೆ.
ಮೂಲಗಳ ಪ್ರಕಾರ ಸೋಮಶೇಖರ್ ಅವರಿಗೆ ಸಹಕಾರ ಖಾತೆ ನೀಡಲಾಗುತ್ತದೆ ಎನ್ನಲಾಗಿದೆ. ಸೋಮವಾರದ ಒಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ನಡೆಯಲಿದೆ.












Click it and Unblock the Notifications