• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ಶಾಸಕರು ಹೇಗೆ ಇರಬೇಕು, ಹೇಗೆ ಇರಬಾರದು ಎಂದು ಬೋಧಿಸಿದ ಸ್ಪೀಕರ್

|

ಬೆಂಗಳೂರು, ನವೆಂಬರ್ 15: ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ಹೇಗಿರಬೇಕು ಹಾಗೂ ಹೇಗಿರಬಾರದು ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

ಎಷ್ಟೋ ಮಂದಿ ಶಾಸಕರಾಗಲು ಕಷ್ಟಪಡುತ್ತಿರುತ್ತಾರೆ ಆದರೂ ಆ ಅವಕಾಶ ಸೊರೆತಿರುವುದಿಲ್ಲ ಆದರೆ ಯಾರಿಗೂ ಸಿಗದ ಅವಕಾಶ ನಿಮಗೆ ಸಿಕ್ಕಿದೆ ಸದನಕ್ಕೆ ಎಂದೂ ಗೈರಾಗದೆ ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ಪರಮೇಶ್ವರ್‌ ನಡುವೆ ಮಹತ್ವದ ಮಾತುಕತೆ

ಇತ್ತೀಚೆಗಷ್ಟೇ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸೇರಿ ಐದು ಕ್ಷೇತ್ರಗಳಿಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ, ಈ ಶಾಸಕರಿಗೆ ಕರ್ನಾಟಕ ವಿಧಾನಮಂಡಲ ತರಬೇತಿ ಸಂಸ್ಥೆಯು ವಿಕಾಸಸೌಧದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಶಿಬಿರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಚಾಲನೆ ನೀಡಿದರು.

ವಿಧಾನಸೌಧಕ್ಕೆ ಸಿದ್ದರಾಮಯ್ಯ ಹಠಾತ್ ಭೇಟಿಯ ರಾಜರಹಸ್ಯವೇನು?

ಇಲ್ಲಿ ಯಾರಿಗೂ ತರಬೇತಿ ನೀಡುವ ಅಗತ್ಯವಿಲ್ಲ, ಯಾರೂ ಕೂಡ ಸದನ ಕಲಾಪಕ್ಕೆ ಗೈರಾಗಬೇಡಿ, ನಿಮ್ಮ ವಿಷಯದ ಚರ್ಚೆ ಇಲ್ಲದಿದ್ದರೂ ಸದನಕ್ಕೆ ಹಾಜರಾಗಬೇಕು ಎಂದು ಹೇಳಿದರು.ಹಾಗೆಯೇ ಸದನಕ್ಕೆ ಹಾಜರಾಗುವಾಗ ನಿಮ್ಮ ಉಡುಗೆ ಚೆನ್ನಾಗಿರಲಿ, ಸದನದ ಅಜೆಂಡಾ ಬಗ್ಗೆ ನೋಡಿಕೊಳ್ಳಿ ಎಂದರು. ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.

English summary
Speaker Ramesh Kumar has said that new MLAs should know what to do and should not as a public representative in side and out side of the legislative house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X