ಸ್ಪೀಕರ್ ರಮೇಶ್‌ ಕುಮಾರ್‌ಗೆ ರಾಜಭವನ ಪ್ರವೇಶ ನೀಡದ ಅಧಿಕಾರಿಗಳು

ಬೆಂಗಳೂರು, ಜೂನ್ 6: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಬಂದಿದ್ದ ಸ್ಪೀಕರ್ ನ್ನು ಪೊಲೀಸರು ರಾಜ್ಯಭವನ ಪ್ರವೇಶಕ್ಕೆ ಅವಕಾಶ ನೀಡದೆ ತೀವ್ರ ಅವಮಾನ ಎಸಗಿದ್ದಾರೆ.

ಈ ಕುರಿತು ಸ್ವತಃ ಸ್ಪೀಕರ್ ರಮೇಶ್‌ ಕುಮಾರ್ ಎಚ್‌ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ನಾನು ರಾಜ ಭವನಕ್ಕೆ ಆಹ್ವಾನ ನೀಡಿದ ನಿಮಿತ್ತ ಬಂದಿದ್ದೆ ಆದರೆ ರಾಜಭವನದ ಒಳಗೆ ಅವಕಾಶ ನೀಡದೆ ಪೊಲೀಸರು ಮತ್ತು ಅಲ್ಲಿನ ಅಧಿಕಾರಿಗಳು ದುರಹಂಕಾರವನ್ನು ಮೆರೆದಿದ್ದಾರೆ.

ಇಂತಹ ದುರಹಂಕಾರ ವ್ಯವಸ್ಥೆಗೆ ಸರ್ಕಾರ ಕಡಿವಾಣ ಹಾಕದೆ ಹೋದರೆ ಸಾಂವಿಧಾನಿಕ ಹುದ್ದೆಯಲ್ಲಿರುವ ತಮಗೆ ಹಾಗೂ ಸರ್ಕಾರಕ್ಕೆ ಅವಮಾನವಾದಂತೆ ಎಂದು ಬರೆದಿದ್ದಾರೆ.

Speaker Ramesh Kumar insulted in Raj Bhavan

ಸರ್ಕಾರದ ಈ ಅಕ್ಷಮ್ಯ ಅಪರಾಧವನ್ನು ಮನ್ನಿಸುವುದಿಲ್ಲ ಎಂದು ಪತ್ರದಲ್ಲಿ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಹಾಗೂ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದಲ್ಲಿ ಇಂದು ನಡೆದಿದೆ. ಈ ವೇಳೆ ಸ್ಪೀಕರ್ ರಮೇಶ್‌ ಕುಮಾರ್ ಅವರಿಗೆ ರಾಜಭವನದ ಒಳಗೆ ಪ್ರವೇಶವನ್ನು ಪೊಲೀಸರು ನಿರಾಕರಿಸಿದ್ದಾರೆ.

Speaker Ramesh Kumar insulted in Raj Bhavan

ರಾಜಭವನದ ಒಳಗೂ ಹೊರಗೂ ತುಂಬಿದ್ದಂತಹ ವಾಹನಗಳು ಯಾವುದು, ಯಾರು ಇಬರಿಗೆ ಅನುಮತಿ ನೀಡಿದ್ದಾರೆ ಹಾಗೂ ಸಾರ್ವಜನಿಕ ಜೀವನದಲ್ಲಿ ಇದವರ ಸ್ಥಾನಮಾನ ಏನು ಎಂದು ನಾನು ತಿಳಿದುಕೊಳ್ಳಬೇಕು ಎಂದು ಪತ್ರದಲ್ಲಿ ಪ್ರಶಸ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+