• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಪರ್ಶ್‌ ಲಕ್ಕಿ ಡ್ರಾ: ವಿಜೇತರಿಗೆ ಭರಪೂರ ಬಹುಮಾನ

|

ಬೆಂಗಳೂರು, ಫೆಬ್ರವರಿ 07: ಪ್ರಖ್ಯಾತ ಆಹಾರ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟ ಸಂಸ್ಥೆ ಸ್ಪರ್ಶ್‌, ತನ್ನ ಅಧಿಕೃತ ಮಾರಾಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಿದ್ದ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ವಿಜೇತರಾದ ಡೀಲರ್‌ಗಳಿಗೆ ಬಹುಮಾನ ವಿತರಿಸಿ ಅಭಿನಂಧಿಸಿತು.

ಮಹಾಲಕ್ಷ್ಮಿ ಲೇಔಟ್‌ನ ಕ್ಲಬ್‌ನಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ, ರಾಯಲ್‌ ಎನ್‌ಫೀಲ್ಡ್‌ ಬುಲೆಟ್, ಟಿವಿಎಸ್ ಜ್ಯುಪಿಟರ್ ಬೈಕ್, ಸ್ಯಾಮ್‌ಸಂಗ್ ರೆಫ್ರಿಜಿರೇಟರ್, ವಾಷಿಂಗ್ ಮಷಿನ್ ಸೇರಿ ಇನ್ನೂ ಹಲವು ಭಾರಿ ಬಹುಮಾನಗಳನ್ನು ಗೆದ್ದ ಡೀಲರ್‌ಗಳಿಗೆ ಸ್ಪರ್ಶ್‌ ನೀಡಿತು.

ವಿತೇರಿಗೆ ಬಹುಮಾನವನ್ನು ಸ್ಪರ್ಶ್‌ ಫುಡ್ ಪ್ರೈವೇಟ್ ಲಿಮಿಟೆಡ್‌ನ ಸಿಇಓ ದೀಕ್ಷಾ ಕುಮಾರ್, ಸ್ಪರ್ಶ್‌ ಫುಡ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾದ ಶಿವಕುಮಾರಯ್ಯ ವಿತರಿಸಿದರು.

ಸಮಾರಂಭದಲ್ಲಿ ಮಾತನಾಡಿದ ಸ್ಪರ್ಶ್‌ ಫುಡ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾದ ಶಿವಕುಮಾರಯ್ಯ, 'ನಮ್ಮ ಸ್ಪರ್ಶ್‌ ಸಂಸ್ಥೆಯು ಕಳೆದ 13 ವರ್ಷಗಳಿಂದಲೂ ಗ್ರಾಹಕರಿಗೆ ಸ್ವಾದಿಷ್ಟ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸುತ್ತಿದೆ. 250 ಬಗೆಯ ಉತ್ಪನ್ನಗಳು ನಮ್ಮ ಬಳಿ ಇವೆ. ಗ್ರಾಹಕರ ಪ್ರೀತಿ ನಂಬಿಕೆಯಿಂದ ಸಂಸ್ಥೆಯು ಉತ್ತಮವಾಗಿ ಬೆಳವಣಿಗೆ ಹೊಂದಿದೆ' ಎಂದರು.

'ನಮ್ಮ ಅಧಿಕೃತ ಡೀಲರ್‌ಗಳಿಗೆ ಸಂಸ್ಥೆಯ ವತಿಯಿಂದ ಕೊಡುಗೆ ಕೊಡಬೇಕೆಂದು ಈ ಲಕ್ಕಿ ಡ್ರಾ ಸ್ಪರ್ಧೆ ಆಯೋಜಿಸಲಾಗಿತ್ತು. ನಾಲ್ಕು ವಲಯದಿಂದ 40 ಡೀಲರ್‌ಗಳು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಬಹುಮಾನ ವಿತರಿಸುತ್ತಿರುವುದು ಸಂತಸ ತಂದಿದೆ' ಎಂದರು.

ಬಹುಮಾನ ವಿಜೇತರ ಪಟ್ಟಿ

ಬೆಂಗಳೂರು ವಲಯ: ಪ್ರಥಮ ಬಹುಮಾನ ರಾಯನ್ ಎನ್‌ಫೀಲ್ಡ್‌ ಬುಲೆಟ್- ಶ್ರೀರಾಂ ಎಂಟರ್ಪೈಸಸ್, ಸುಂಕದಕಟ್ಟೆ. ಟಿವಿಎಸ್ ಜ್ಯುಪಿಟರ್- ಚರಣ್‌ರಾಜ್ ಏಜೆನ್ಸಿ ಜಯನಗರ, ರೆಫ್ರಿಜಿರೇಟರ್‌- ವೃದ್ಧಿ ಎಂಟರ್ಪೈಸಸ್ ಎಪಿಎಂಸಿ ಯಾರ್ಡ್‌, ವಾಷಿಂಗ್ ಮಷಿನ್-ಸನ್ನಿಧಿ ಎಂಟರ್ಪೈಸಸ್ ನೆಲಮಂಗಲ.

ಹುಬ್ಬಳ್ಳಿ ವಲಯ: ಪ್ರಥಮ ಬಹುಮಾನ ರಾಯನ್ ಎನ್‌ಫೀಲ್ಡ್‌ ಬುಲೆಟ್- ಪವನ್ ಎಂಟರ್ಪೈಸಸ್ ಬಾಗಲಕೋಟೆ, ಟಿವಿಎಸ್ ಜ್ಯುಪಿಟರ್- ಆರ್‌ಸಿ ಎಂಟರ್ಪೈಸಸ್ ಹಿರೆಕೆರೂರು, ರೆಫ್ರಿಜಿರೇಟರ್‌- ಪವನ್ ಟ್ರೇಡರ್ಸ್ ಹೊಸಪೇಟೆ, ವಾಷಿಂಗ್ ಮಷಿನ್-ಪವನ್ ಟ್ರೇಡರ್ಸ್ ಹೊಸಪೇಟೆ.

ಹಾಸನ ವಲಯ: ಪ್ರಥಮ ಬಹುಮಾನ ರಾಯನ್ ಎನ್‌ಫೀಲ್ಡ್‌ ಬುಲೆಟ್- ರಮಣ ಟ್ರೇಡರ್ಸ್ ಹಾಸನ, ಟಿವಿಎಸ್ ಜ್ಯುಪಿಟರ್- ಶೆಟ್ಟಿ ಎಂಟರ್ಪೈಸಸ್ ತೀರ್ಥಳ್ಳಿ, ರೆಫ್ರಿಜಿರೇಟರ್‌- ಸಿಂಗಂಧೂರೇಶ್ವರಿ ಎಂಟರ್ಪೈಸಸ್ ದಾವಣಗೆರೆ, ವಾಷಿಂಗ್ ಮಷಿನ್-ಆಂಜನೇಯ ಟ್ರೇಡರ್ಸ್ ಅಜ್ಜಂಪುರ.

ಮೈಸೂರು ವಲಯ: ಪ್ರಥಮ ಬಹುಮಾನ ರಾಯನ್ ಎನ್‌ಫೀಲ್ಡ್‌ ಬುಲೆಟ್- ಶ್ರೀಪಾರ್ವತಿ ಮಲ್ಲಿಕಾರ್ಜುನ ಸ್ಟೋರ್ ಹಲಗೂರು, ಟಿವಿಎಸ್ ಜ್ಯುಪಿಟರ್- ನಂದಿ ಎಂಟರ್ಪೈಸಸ್ ಚನ್ನಪಟ್ಟಣ, ರೆಫ್ರಿಜಿರೇಟರ್‌- ನಂದಿ ಎಂಟರ್ಪೈಸಸ್ ಚನ್ನಪಟ್ಟಣ, ವಾಷಿಂಗ್ ಮಷಿನ್- ನಂದಿ ಎಂಟರ್ಪೈಸಸ್ ಚನ್ನಪಟ್ಟಣ.

ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಗಳಲ್ಲಿಯೂ ಬಹುಮಾನ ವಿತರಣೆ ಕಾರ್ಯಕ್ರಮ ಮಾಡಲಾಗಿದೆ.

English summary
Karnataka's leading food product brand, Sparsh Foods had conducted a lucky draw to encourage its dealers and salespersons. In a glittering functions, the bumper prizes were given out to the winners from four different zones in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X