ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಹೊರಟ ಎಸ್‌ಯುವಿ ಕಾರುಗಳು

|
Google Oneindia Kannada News

ಬೆಂಗಳೂರು, ಜೂನ್ 01 : ಲಾಕ್ ಡೌನ್ ಅವಧಿಯಲ್ಲಿ ಟ್ರ್ಯಾಕ್ಟರ್‌ಗಳನ್ನು ಸಾಗಣೆ ಮಾಡಿದ್ದ ನೈಋತ್ಯ ರೈಲ್ವೆ ಈಗ ಎಸ್‌ಯುವಿ ಕಾರುಗಳ ಸಾಗಣೆ ಆರಂಭಿಸಿದೆ. ಕಾರುಗಳನ್ನು ಹೊತ್ತ ರೈಲು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಆರಂಭಿಸಿದೆ.

ಮಾರುತಿ ಸುಝುಕಿ ಮತ್ತು ದಕ್ಷಿಣ ಕೋರಿಯಾದ ಕಿಯಾ ಕಾರು ತಯಾರಿಕಾ ಸಂಸ್ಥೆಗಳ ಜೊತೆ ನೈಋತ್ಯ ರೈಲ್ವೆ ಮಾತುಕತೆ ನಡೆಸಿತ್ತು. ಬೆಂಗಳೂರಿನಿಂದ 100 ಕಿಯಾ ಎಸ್‌ಯುವಿ ಕಾರುಗಳನ್ನು ಹೊತ್ತ ರೈಲು ಭಾನುವಾರ ಸಂಚಾರ ಆರಂಭಿಸಿತು.

ಕರ್ನಾಟಕದಿಂದ ರಾಜಸ್ಥಾನ, ಗುಜರಾತ್‌ಗೆ ರೈಲಲ್ಲಿ ಹೊರಟ ಟ್ರ್ಯಾಕ್ಟರ್‌ಕರ್ನಾಟಕದಿಂದ ರಾಜಸ್ಥಾನ, ಗುಜರಾತ್‌ಗೆ ರೈಲಲ್ಲಿ ಹೊರಟ ಟ್ರ್ಯಾಕ್ಟರ್‌

ರಸ್ತೆ ಮಾರ್ಗದಲ್ಲಿ ಕಾರುಗಳನ್ನು ಸಾಗಣೆ ಮಾಡಿದಷ್ಟು ವೆಚ್ಚದಲ್ಲಿಯೇ ರೈಲಿನಲ್ಲಿಯೂ ಸಾಗಣೆ ಮಾಡಬಹುದು. ಆದರೆ, ರೈಲುಗಳು ಬೇಗ ತಲುಪುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಪೆನುಕೊಂಡದಿಂದಲೂ 200 ಕಾರುಗಳನ್ನು ರೈಲುಗಳಲ್ಲಿ ಸಾಗಣೆ ಮಾಡಲಾಗಿದೆ.

ಕೊರೊನಾ ಪರಿಣಾಮ; ಪ್ರಯಾಣಿಕ ವಿಮಾನದಲ್ಲಿ ಸರಕು ಸಾಗಣೆ! ಕೊರೊನಾ ಪರಿಣಾಮ; ಪ್ರಯಾಣಿಕ ವಿಮಾನದಲ್ಲಿ ಸರಕು ಸಾಗಣೆ!

ಲಾಕ್ ಡೌನ್ ಅವಧಿಯಲ್ಲಿ ನೈಋತ್ಯ ರೈಲ್ವೆ ದೊಡ್ಡಬಳ್ಳಾಪುರದಿಂದ ರಾಜಸ್ಥಾನ ಮತ್ತು ಗುಜರಾತ್‌ಗೆ ಟ್ರ್ಯಾಕ್ಟರ್‌ಗಳನ್ನು ಸಾಗಣೆ ಮಾಡಿತ್ತು. ಒಂದು ವ್ಯಾಗನ್‌ನಲ್ಲಿ ಒಟ್ಟು 175 ಟ್ಯಾಕ್ಟರ್‌ಗಳನ್ನು ಸಾಗಿಸಲಾಗಿತ್ತು. ಈಗ ಕಾರುಗಳ ಸಾಗಣೆ ಆರಂಭವಾಗಿದೆ.

ಬೆಂಗಳೂರಿಗೆ ಸರಕು ಸಾಗಣೆ; ನೈಋತ್ಯ ರೈಲ್ವೆ ದಿಟ್ಟ ಹೆಜ್ಜೆ ಬೆಂಗಳೂರಿಗೆ ಸರಕು ಸಾಗಣೆ; ನೈಋತ್ಯ ರೈಲ್ವೆ ದಿಟ್ಟ ಹೆಜ್ಜೆ

ಕಾರುಗಳ ಸಾಗಣೆಗೆ ಎಷ್ಟು ವೆಚ್ಚ?

ಕಾರುಗಳ ಸಾಗಣೆಗೆ ಎಷ್ಟು ವೆಚ್ಚ?

ಬೆಂಗಳೂರಿನಿಂದ 100 ಕಿಯಾ ಎಸ್‌ಯುವಿ ಕಾರುಗಳನ್ನು ಹೊತ್ತ ರೈಲು ಭಾನುವಾರ ಸಂಚಾರ ನಡೆಸಿದೆ. ಕಾರುಗಳ ಸಾಗಾಟಕ್ಕೆ ಸುಮಾರು 19 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರತಿ ತಿಂಗಳು 10 rakes ಸಂಚಾರ

ಪ್ರತಿ ತಿಂಗಳು 10 rakes ಸಂಚಾರ

ರೈಲ್ವೆ ಇಲಾಖೆ ವಿವಿಧ ಕಾರು ತಯಾರಿಕಾ ಕಂಪನಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದೆ. ಪ್ರತ ತಿಂಗಳು 10 rakesಗಳ ಮೂಲಕ ಕಾರುಗಳನ್ನು ನಿಗದಿತ ಪ್ರದೇಶಗಳಿಗೆ ತಲುಪಿಸುವ ಗುರಿಯನ್ನು ಹೊಂದಲಾಗಿದೆ.

ಬಹುಬೇಗ ತಲುಪುತ್ತದೆ

ಬಹುಬೇಗ ತಲುಪುತ್ತದೆ

ಬೆಂಗಳೂರಿನಿಂದ ಹೊರಟ ಎಸ್‌ಯುವಿ ಕಾರುಗಳು 3 ರಿಂದ 4 ದಿನದಲ್ಲಿ ದೆಹಲಿ ತಲುಪಲಿವೆ. ರಸ್ತೆ ಮೂಲಕ ಸಾಗಣೆ ಮಾಡಿದರೆ ಕನಿಷ್ಠ ಒಂದು ವಾರ ಬೇಕಾಗುತ್ತದೆ ಎಂಬುದು ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ.

350 ಟ್ರ್ಯಾಕ್ಟರ್ ವಿಲೇವಾರಿ

350 ಟ್ರ್ಯಾಕ್ಟರ್ ವಿಲೇವಾರಿ

ಏಪ್ರಿಲ್‌ನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದಾಗ ನೈಋತ್ಯ ರೈಲ್ವೆ ದೊಡ್ಡಬಳ್ಳಾಪುರದಿಂದ ಗುಜರಾತ್‌ ಮತ್ತು ರಾಜಸ್ಥಾನಕ್ಕೆ ಟ್ರ್ಯಾಕ್ಟರ್‌ಗಳನ್ನು ಸಾಗಿಸಿತ್ತು. ಒಟ್ಟು 350 ಟ್ರ್ಯಾಕ್ಟರ್‌ಗಳನ್ನು 2 ಹಂತದಲ್ಲಿ ಕಳಿಸಲಾಗಿತ್ತು.

English summary
South Western Railways (SWR) transporting SUV car in the trains. KIA motors sent 100 SUV's to New Delhi from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X