ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲವು ರೈಲುಗಳ ಸಂಚಾರ ರದ್ದುಗೊಳಿಸಿದ ನೈಋತ್ಯ ರೈಲ್ವೆ

|
Google Oneindia Kannada News

ಬೆಂಗಳೂರು, ಮೇ 03 : ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಮೇ 4 ರಿಂದ 31ರ ತನಕ ಹಲವು ರೈಲುಗಳ ಸಂಚಾರ ರದ್ದುಗೊಂಡಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.

ಬೈಯಪ್ಪನಹಳ್ಳಿಯಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ, ನೈಋತ್ಯ ರೈಲ್ವೆಯ ಬೆಂಗಳೂರು ಡಿವಿಜನ್ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಸಮಯ ಮತ್ತೆ ಬದಲುಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಸಮಯ ಮತ್ತೆ ಬದಲು

South Western Railway cancelled various train service

ಮೇ 4 ರಿಂದ 31ರ ತನಕ ಬೆಂಗಳೂರು ಕಂಟೋನ್ಮೆಂಟ್-ವಿಜಯವಾಡ (56503/56504) ಪ್ಯಾಸೆಂಜರ್ ರೈಲು, ಬಾಣಸವಾಡಿ-ಹೊಸೂರು (06571/06572) ಪ್ಯಾಸೆಂಜರ್ ರೈಲು ಸೇವೆಯನ್ನು ರದ್ದು ಪಡಿಸಲಾಗಿದೆ.

ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್‌ ರೈಲಿಗೆ ಎಲ್‌ಎಚ್‌ಬಿ ಕೋಚ್‌ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್‌ ರೈಲಿಗೆ ಎಲ್‌ಎಚ್‌ಬಿ ಕೋಚ್‌

ಭಾಗಶಃ ರದ್ದುಗೊಂಡಿರುವ ರೈಲುಗಳು : ಮೇ 4ರ ನಂತರ ಬೆಂಗಳೂರು ನಗರ -ಆರಕ್ಕೋಣಂ (56262) ಪ್ಯಾಸೆಂಜರ್ ರೈಲು ಸೇವೆಯನ್ನು ಜೋಲಾರಪಟ್ಟೈ ಹಾಗೂ ಆರಕ್ಕೋಣಂ ನಡುವೆ ಭಾಗಶಃ ರದ್ದುಪಡಿಸಲಾಗಿದೆ. ರೈಲು ಬೆಂಗಳೂರಿನಿಂದ ಜೋಲಾರಪಟ್ಟೈ ತನಕ ಮಾತ್ರ ಸಂಚಾರ ನಡೆಸಲಿದೆ.

ಬಳ್ಳಾರಿ ಮತದಾರರಿಗೆ ಆಮಿಷ ಒಡ್ಡಬೇಡಿ, ರೈಲ್ವೆ ಬೇಡಿಕೆ ಈಡೇರಿಸಿಬಳ್ಳಾರಿ ಮತದಾರರಿಗೆ ಆಮಿಷ ಒಡ್ಡಬೇಡಿ, ರೈಲ್ವೆ ಬೇಡಿಕೆ ಈಡೇರಿಸಿ

ಮೇ 5 ರ ನಂತರ ಆರಕ್ಕೋಣಂ-ಬೆಂಗಳೂರು ನಗರ (56261) ಪ್ಯಾಸೆಂಜರ್‌ ರೈಲು ಸಂಚಾರವನ್ನು ಆರಕ್ಕೋಣಂ ಹಾಗೂ ಜೋಲಾರಪಟ್ಟೈ ಮಧ್ಯೆ ಭಾಗಶಃ ರದ್ದು ಮಾಡಲಾಗಿದೆ.

ಮೇ 8, 15, 22 ಹಾಗೂ 29ರಂದು ಸಂಬಲ್ಬುರ-ಬಾಣಸವಾಡಿ (08301) ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಕೃಷ್ಣರಾಜಪುರಂ-ಬಾಣಸವಾಡಿ ಮಧ್ಯೆ ರದ್ದು ಪಡಿಸಲಾಗಿದೆ. ಆದ್ದರಿಂದ, ರೈಲು ಕೃಷ್ಣರಾಜಪುರಂ ವರೆಗೆ ಮಾತ್ರ ಸಂಚಾರ ನಡೆಸಲಿದೆ.

English summary
South Western Railway cancelled various train service from May 1 to 31, 2019. Train cancelled due to Byappanahalli yard renovation work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X