ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಮಹಿಳಾ ಪ್ರಯಾಣಿಕರ ದೂರು ಆಲಿಸಲು ಬರಲಿದೆ ಪಿಂಕ್‌ ಸ್ಕ್ವಾಡ್‌

By Nayana
|
Google Oneindia Kannada News

ಬೆಂಗಳೂರು, ಜು.26: ಬಿಎಂಟಿಸಿಯ ಮಹಿಳಾ ಪ್ರಯಾಣಿಕರ ದೂರುಗಳನ್ನು ಆಲಿಸಲು ಶೀಘ್ರವೇ ಪಿಂಕ್‌ ಸಾರಥಿಯು ಬೆಂಗಳೂರು ರಸ್ತೆಗಿಳಿಯಲಿದೆ.

ನಿರ್ಭಯಾ ನಿಧಿಯಲ್ಲಿ ಒಟ್ಟು 4.3 ಕೋಟಿ ವೆಚ್ಚದಲ್ಲಿ ಒಟ್ಟು 25 ವಾಹನವನ್ನು ಸಿದ್ಧಗೊಳಿಸಲಾಗುತ್ತಿದೆ. ಈ ವಾಹನದಲ್ಲಿ ಇಬ್ಬರು ಮಹಿಳಾ ಪೊಲೀಸ್‌ ಸೇರಿದಂತೆ ಟ್ರಾಫಿಕ್‌ ಪೊಲೀಸ್‌ ಮತ್ತೊಬ್ಬ ಚಾಲಕರಿರುತ್ತಾರೆ. ಮಹಿಳಾ ಸಿಬ್ಬಂದಿಗಳ ತಂಡ ಈ ಪಿಂಕ್‌ ಸಾರಥಿಯಲ್ಲಿ ಗಸ್ತು ತಿರುಗುತ್ತಿರುತ್ತಾರೆ.

ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌

ಮಹಿಳೆಯರಿಗೆ ಮೀಸಲಿಟ್ಟಿರುವ ಆಸನದಲ್ಲಿ ಕುಳಿತು ಪ್ರಯಾಣಿಸುವ ಪುರುಷರು, ಬಸ್‌ನಲ್ಲಿ ಮಹಿಳೆಗೆ ಕಿರುಕುಳ, ಬಸ್‌ ನಿಲ್ದಾಣಗಳಲ್ಲಿ ಸರಿಯಾಗಿ ಬಸ್‌ ನಿಲುಗಡೆ ಮಾಡದಿರುವುದು, ನಿರ್ವಾಹಕರಿಂದ ಅಸಭ್ಯ ವರ್ತನೆ ಹೀಗೆ ಹೀಗೆ ಹಲವು ದೂರುಗಳನ್ನು ನೀಡಬಹುದಾಗಿದೆ. ಈ ವಾಹನಗಳು ಟ್ರ್ಯಾಕಿಂಗ್‌ ಡಿವೈಸ್‌ಗಳನ್ನು ಹೊಂದಿರುತ್ತವೆ.

Soon, BMTC’s pink patrol squads will address women’s complaints

ಅದರ ಜತೆಗೆ ಬಿಎಂಟಿಸಿಯು ಮಹಿಳೆಯರಿಗಾಗಿ 26.5 ಕೋಟಿ ವೆಚ್ಚದಲ್ಲಿ ವಿಶೇಷ ಅಪ್ಲಿಕೇಷನ್‌ ಅಭಿವೃದ್ಧಿ ಮಾಡುತ್ತಿದೆ, ಇದೀಗ ಮಹಿಳೆಯರ ದೂರುಗಳನ್ನು ಆಲಿಸಲು 25 ಸಾರಥಿ ವಾಹನಗಳಿವೆ. ಬಿಎಂಟಿಸಿಯು ಮಹಿಳೆಯರಿಗಾಗಿ ಮೀಸಲಿರಿಸಿದ ಆಸನದಲ್ಲಿ ಪುರುಷರು ಬಂದು ಕುಳಿತುಕೊಳ್ಳುವುದರಿಂದ ಆಸನಗಳಿಗೆ ಗುಲಾಬಿ ಬಣ್ಣವನ್ನು ಬಳಿಯಲು ಚಿಂತನೆ ನಡೆಸಿತ್ತು.

ಹಾಗೆಯೇ ಮಹಿಳೆಯರಿಗಾಗಿ ಪಿಂಕ್‌ ಬಸ್‌ಗಳನ್ನು ಕೂಡ ಬಿಡಲಾಗಿತ್ತು ಆದರೆ ಹೆಚ್ಚು ಮಹಿಳೆಯರು ಆಸಕ್ತಿ ತೀರದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಯಿತು. ಮೊಬೈಲ್‌ ಅಪ್ಲಿಕೇಷನ್‌ ಮೂಲಕ ದೂರು ನೀಡಬಹುದಾಗಿದೆ.

ನಿರ್ಭಯಾ ನಿಧಿಯಲ್ಲಿ ಕೇಂದ್ರವು 56.06 ಕೋಟಿಯನ್ನು ನೀಡುತ್ತಿದೆ. ಅದರಲ್ಲಿ ಮಹಿಳೆರಿಗೆ ತರಬೇತಿ ನೀಡಲು 7.5 ಕೋಟಿ ರೂ ವೆಚ್ಚ ಮಾಡಲಾಗುತ್ತದೆ. ಒಂದು ಸಾವಿರ ಬಸ್‌ಗಳಲ್ಲಿ 6.8 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ.

English summary
The Bangalore Metropolitan Transport Corporation (BMTC) will soon roll out 25 new Pink Sarathi Road Patrol Squads under Nirbhaya Fund.Officials said each vehicle will have an all-women crew, including two traffic inspectors and a drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X