ಪಾರ್ಟಿಗೆಂದು ಹೊರಗೆ ಹೋದ ಯುವಕ ಹೆಣವಾಗಿ ಬಂದ
ಬೆಂಗಳೂರು, ಫೆಬ್ರವರಿ 16: ಪಾರ್ಟಿಗೆಂದು ಹೊರಗಡೆ ಹೋಗಿದ್ದ ಯುವಕ ಹೆಣವಾಗಿ ಮನೆಗೆ ಬಂದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಪಾರ್ಟಿ ಮುಗಿಸಿಕೊಂಡು ಮನೆಗೆ ಹೊರಟಿದ್ದ ಯುವಕನನ್ನು ಅಡ್ಡಗಟ್ಟಿದ ಕೆಲವು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ. ಮೊಹಮ್ಮದ್ ಯೂಸುಫ್ ಕೊಲೆಯಾದ ಯುವಕ.
ಆತ ಮೂಲತಃ ಶಿವಮೊಗ್ಗದವನಾಗಿದ್ದು ಬೆಂಗಳೂರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ , ಯೂಸುಫ್‌ಗೆ ಕಳ್ಳತನದ ಅಭ್ಯಾಸ ಇತ್ತು ಹಾಗಾಗಿ ಒಳ್ಳೆಯ ದಾರಿಗೆ ಆತನನ್ನು ಕರೆತರಲು ಪೋಷಕರು ಬೆಂಗಳೂರಲ್ಲಿ ಕೆಲಸಕ್ಕೆ ಸೇರಿಸಿದ್ದರು. ಇಲ್ಲಿ ಬಂದರೂ ಆತ ಕೈಚಳಕವೇನು ಬಿಟ್ಟಿರಲಿಲ್ಲ. ರಿಯಲ್ ಎಸ್ಟೇಟ್‌ನಲ್ಲಿ ಕೈಹಾಕಿ ಕೆಲವರ ವಿರೋಧ ಕಟ್ಟಿಕೊಂಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಯುಸೂಫ್ ಗುರುವಾರ ರಾತ್ರಿ ಪಾರ್ಟಿ ಮುಗಿಸಿಕೊಂಡು ಬಿಳೆಕಳ್ಳಿ ಬಳಿ ಮನೆಗೆ ಹೋಗುತ್ತಿದ್ದ. ಪ್ರತ್ಯೇಕ ಎರಡು ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.











Click it and Unblock the Notifications