ಸೋಲಾರ್ ಹಗರಣ: ಬೆಂಗಳೂರು ಕೋರ್ಟಿನಿಂದ ಚಾಂಡಿಗೆ ಶುಭ ಸುದ್ದಿ

ಬೆಂಗಳೂರು, ಅಕ್ಟೋಬರ್ 08 : ಕೇರಳದ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ನ್ಯಾಯಾಲಯದಿಂದ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಶುಭ ಸುದ್ದಿ ಸಿಕ್ಕಿದೆ. ಹಿರಿಯ ಕಾಂಗ್ರೆಸ್ ನಾಯಕ ಚಾಂಡಿ ಅವರನ್ನು ಪ್ರಕರಣದಿಂಡ ಆರೋಪ ಮುಕ್ತಗೊಳಿಸಲಾಗಿದೆ.

ಬೆಂಗಳೂರಿನ ಕೋರಮಂಗಲ ನಿವಾಸಿ ಉದ್ಯಮಿ ಎಂ.ಕೆ.ಕುರುವಿಲ್ಲಾಗೆ ಕೋಟ್ಯಂತರ ರುಪಾಯಿ ವಂಚಿಸಿದ ಪ್ರಕರಣದಲ್ಲಿ ಚಾಂಡಿ ಅವರು ಐದನೇ ಆರೋಪಿಯಾಗಿದ್ದರು.

Solar Scam Case : Kerala Former CM Oommen Chandy acquitted

ಏನಿದು ಪ್ರಕರಣ: ಉದ್ಯಮಿ ಎಂ.ಕೆ.ಕುರುವಿಲ್ಲಾ ಎಂಬುವರಿಂದ ಸೋಲಾರ್ ಘಟಕ ಸ್ಥಾಪನೆಗಾಗಿ 1.36 ಕೋಟಿ ರೂ. ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು. ಆದರೆ ವ್ಯವಹಾರದಲ್ಲಿ ವ್ಯತ್ಯಯ ಉಂಟಾದ ಕಾರಣ ಹಣ ವಾಪಸ್ ನೀಡುವಂತೆ ಕುರುವಿಲ್ಲಾ ಅವರು ಕೋರ್ಟ್ ಮೊರೆ ಹೋಗಿದ್ದರು

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಚಾಂಡಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಘೋಷಿಸಿ 1.65 ಕೋಟಿ ರೂ. ಜೊತೆಗೆ ಶೇ.12ರಷ್ಟು ಬಡ್ಡಿ ಸೇರಿಸಿ ಹಿಂತಿರುಗಿಸಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಚಾಂಡಿ ಅವರು ಆದೇಶ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 2015ರಿಂದ ಈ ಪ್ರಕರಣದ ವಿಚಾರಣೆ ನಡೆದಿತ್ತು.

ಪ್ರಕರಣದ ಪ್ರಮುಖ ಆರೋಪಿ ಆಂಡ್ರೂಸ್ ಮೂಲಕ ಸೋಲಾರ್ ಘಟಕ ಸ್ಥಾಪನೆಗೆ ಪ್ಯಾನಲ್ ಗುತ್ತಿಗೆ ಡೀಲ್ ಕುದುರಿಸಿದ್ದರು. ನಂತರ ಸರಿತಾ ಮೂಲಕ ಚಾಂಡಿ ಕಚೇರಿಯ ಸಂಪರ್ಕ ಸಿಕ್ಕಿತ್ತು. ಚಾಂಡಿ ಖಾತೆಗೆ ಹಣ ಸಂದಾಯವಾಗಿತ್ತು.

2013ರಿಂದ ಸೋಲಾರ್ ಹಗರಣದ ತನಿಖೆಯನ್ನು ಜಸ್ಟೀಸ್ ಶಿವರಾಜನ್ ಅವರು ತನಿಖೆ ನಡೆಸಿ ವರದಿಯನ್ನು ಸಿಎಂ ಪಿಣರಾಯಿ ವಿಜಯನ್ ಗೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+