ಸೋಲಾರ್ ಬೆಳಕಲ್ಲಿ ಝಗಮಗಿಸಲಿದೆ ವಿಧಾನಸೌಧ!

ಬೆಂಗಳೂರು, ಅ.5 : ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಇನ್ನು ಮುಂದೆ ರಾತ್ರಿ ಹೊತ್ತಿನಲ್ಲಿ ಝಗಮಗಿಸಲಿದೆ. ಇದಕ್ಕಾಗಿ ಸೌರಶಕ್ತಿ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತ ಪ್ರಸ್ತಾವನೆ ಸಿದ್ದವಾಗಿದ್ದು, ಅಂತಿಮ ಮುದ್ರೆ ಬೀಳಬೇಕಾಗಿದೆ.

ವಿಧಾನಸೌಧಕ್ಕೆ ಸೋಲಾರ್ ದೀಪಗಳನ್ನು ಅಳವಡಿಸಿ ರಾತ್ರಿ ವೇಳೆ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು 5ರಿಂದ 6 ಕಂಪನಿಗಳು ಆಸಕ್ತಿ ತೋರಿಸಿವೆ. ಈ ಕುರಿತ ಪ್ರಸ್ತಾವನೆ ರಚಿಸಿ ಸರ್ಕಾರಕ್ಕೆ ಸಲ್ಲಿಸಿವೆ.

Vidhana Soudha

ಈ ಕುರಿತ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದರೆ, ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲಾಗುತ್ತದೆ. ವಾರದಲ್ಲಿ ಮೂರು ಅಥವ ನಾಲ್ಕು ದಿನ ಸಾರ್ವಜನಿಕರು ಸೋಲಾರ್ ದೀಪದ ಬೆಳಕಿನಲ್ಲಿ ವಿಧಾನಸೌಧ ನೋಡಬಹುದು ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ.

ಈ ಹಿಂದೆ ರಾತ್ರಿ ವೇಳೆ ವಿಧಾನಸೌಧವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಅದನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ನಂತರ ವಿದ್ಯುತ್ ಸಮಸ್ಯೆ ಜತೆಗೆ ವಿದ್ಯುತ್ ಬಿಲ್ ವಿಪರೀತ ಎಂಬ ಕಾರಣಕ್ಕೆ ಈ ಯೋಜನೆ ಸ್ಥಗಿತಗೊಂಡಿತ್ತು.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ವಿಧಾನಸೌಧಕ್ಕೆ ಮತ್ತೆ ಬೆಳಕಿನ ವ್ಯವಸ್ಥೆ ಮಾಡಲು ಮುಂದಾಗಿತ್ತು. ಆದರೆ, ನಂತರ ಆ ಯೋಜನೆ ಕೈ ಬಿಡಲಾಯಿತು. ಸದ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಈ ಯೋಜನೆ ಆರಂಭಿಸಲು ಸಜ್ಜಾಗಿದೆ.

ಕಾಂಗ್ರೆಸ್ ಸರ್ಕಾರ ಸೋಲಾರ್ ದೀಪಗಳಿಂದ ವಿಧಾನಸೌಧವನ್ನು ಅಲಂಕರಿಸುವ ಯೋಜನೆ ತಯಾರಿಸಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದ್ದು, ಒಪ್ಪಿಗೆ ಸಿಕ್ಕಿದ ತಕ್ಷಣ ಟೆಂಡರ್ ಕರೆದು, ಕಾಮಗಾರಿ ಆರಂಭಿಸಲಾಗುತ್ತದೆ.

ವಿಧಾನಸೌಧ ಕುರಿತು ಕನ್ನಡ ಪುಸ್ತಕ : ವಿಧಾನಸೌಧದ ಸಮಗ್ರ ಮಾಹಿತಿ ಒಳಗೊಂಡ ಕನ್ನಡ ಪುಸ್ತಕ ಹೊರತರಲು ಸರ್ಕಾರ ಚಿಂತನೆ ನಡೆಸಿದೆ. ಸಿ.ಎಂ. ರಾಮಚಂದ್ರ ಅವರು ಬರೆದ ಇಂಗ್ಲಿಶ್ ನಲ್ಲಿ ಈ ಕುರಿತ ಪುಸ್ತಕ ಬರೆದಿದ್ದಾರೆ. ಅದರ ಭಾಷಾನುವಾದ ಕಾರ್ಯವೂ ಪ್ರಗತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+