• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆಶಿಗಾಗಿ ಒಕ್ಕಲಿಗರ ಪ್ರತಿಭಟನೆ, 'ಉಗ್ರಹೋರಾಟ'ದ ಹಿಂದೆ ಏನೆಲ್ಲಾ ಲೆಕ್ಕಾಚಾರ!

|

"ಡಿಕೆಶಿಗೆ ಬಲ ಬೇಕಿತ್ತು

ಕಾಂಗ್ರೆಸ್ ಗೆ ನೆಲೆ ಬೇಕಿತ್ತು

ಜೆಡಿಎಸ್ ಗೆ ಕಾರಣ ಬೇಕಿತ್ತು

ಕರವೇ ಗೌಡರಿಗೆ ಅವಕಾಶ ಬೇಕಿತ್ತು

ಕೆಲವು ಸ್ವಾಮೀಜಿಗಳಿಗೆ ಪ್ರಚಾರ ಬೇಕಿತ್ತು

ಹಲವು ಅನುಯಾಯಿಗಳಿಗೆ ಬಿರ್ಯಾನಿ ಬೇಕಿತ್ತು

ಇದೆಲ್ಲದರ ಫಲ...

ಏ ಭುಜಂ ಬಾ ಒಂದು ಉಗ್ರ ಹೋರಾಟ ಉಂಟು..!"

ಸಾಮಾಜಿಕ ಜಾಲತಾಣಗಳಲ್ಲಿ ಈ ಚುಟುಕು ಸಾಲುಗಳು ಹರಿದಾಡುತ್ತಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ಬೆಂಬಲಿಸಿ ಕೆಲವು ಒಕ್ಕಲಿಗ ಸಮುದಾಯದವರು ಬುಧವಾರ ನಡೆಸಿದ ಉಗ್ರ ಹೋರಾಟದ ಹಿಂದಿದ್ದ ಕಾರಣವನ್ನು ವ್ಯಕ್ತಿಯೊಬ್ಬರು ಈ ರೀತಿ ವ್ಯಾಖ್ಯಾನಿಸಿದ್ದಾರೆ.

ನಂಜಾವಧೂತರಿಂದ ಬೋನಲ್ಲಿನ ಹುಲಿ- ಪುಣ್ಯಕೋಟಿ ಎರಡೂ ಹೋಲಿಕೆ ಡಿಕೆಶಿಗೆ

ಇದಿಷ್ಟೇ ಅಲ್ಲ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬರನ್ನು ಜಾತಿಯ ಆಧಾರದ ಮೇಲೆ ಬೆಂಬಲಿಸುವುದು, ಅವರ ರಕ್ಷಣೆಗಾಗಿ ಪ್ರತಿಭಟಿಸುವುದು ಎಷ್ಟು ಸರಿ? ಪ್ರಜಾಪ್ರಭುತ್ವ ಯಾವ ಮಟ್ಟಕ್ಕೆ ಇಳಿದಿದೆ ಎಂಬಿತ್ಯಾದಿ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ.

ಈ ಹೋರಾಟವನ್ನು ಸ್ವಾಭಿಮಾನಿ ಒಕ್ಕಲಿಗರು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ, ಜೊತೆಗೆ ಈ ಹೋರಾಟದ ಹಿಂದಿರುವುದು ರಾಜಕೀಯ ಹಿತಾಸಕ್ತಿಯಷ್ಟೇ ಎಂದಿದ್ದಾರೆ.

ವರ್ಚಸ್ವೀ ನಾಯಕ 'ಡಿಕೆಶಿ'ಯನ್ನು ಕೆಲವೇ ಜಿಲ್ಲೆಗಳಿಗೆ ಸೀಮಿತಗೊಳಿಸಿದ ಒಕ್ಕಲಿಗರ ಪ್ರತಿಭಟನೆ!

ಬಹುಕೋಟಿ ಅಕ್ರಮ ಹಣದ ಆರೋಪ ಹೊತ್ತಿರುವ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದು, ಈ ಕ್ರಮವನ್ನು ವಿರೋಧಿಸಿ ಬೆಂಗಳೂರಿನಲ್ಲಿ ಬುಧವಾರ ಒಕ್ಕಲಿಗರು ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಸಾಮಾಜಿಕ ಮಾಧ್ಯಮ ಪ್ರತಿಕ್ರಿಯಿಸಿದ್ದು ಹೇಗೆ? ಇಲ್ಲಿದೆ ನೋಡಿ...

ಇದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ!

ಇದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ!

ನಿಜವಾದ ಒಕ್ಕಲಿಗ ಸಮುದಾಯದ ಜನರು ಈ ಪ್ರತಿಭಟನೆಗೆ ತೆರಳಲಿಲ್ಲ. ಏಕೆಂದರೆ ಇದು ನಮ್ಮ ಸಮುದಾಯದ ಹೆಸರಿನಲ್ಲಿ ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ! ನಾವು ರಸ್ತೆಗೆ ಬಂದ್ರೆ ಬೆಂಗಳೂರಿನಲ್ಲಿ ಜಾಗವಿರೋಲ್ಲ. ನಿಮಗೆ ಒಕ್ಕಲಿಗ ಪ್ರತಿಭಟನೆ ನೋಡಬೇಕು ಅಂದ್ರೆ 1995 ಕ್ಕೆ ಹೋಗಿ ಎಂದಿದ್ದಾರೆ ಸುಲಿನ್ ಗೌಡ.

ಒಡೆದು ಆಳುವ ನೀತಿ

ಒಡೆದು ಆಳುವ ನೀತಿ

ಕಾಂಗ್ರೆಸ್ಸು ತನ್ನ ಒಡೆದು ಆಳುವ ನೀತಿಯನ್ನು ಮತ್ತೊಮ್ಮೆ ಪ್ರಯೋಗಿಸುತ್ತಿದೆ. ಒಕ್ಕಲಿಗ ಸಮುದಾಯ ನ್ಯಾಯಾಂಗ ಮತ್ತು ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋಗುವಂತೆ ಮಾಡುತ್ತಿದೆ. ಆದರೆ ಒಕ್ಕಲಿಗರು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ನಂಬಬೇಕು. ನೀವು ಒಡೆದು ಆಳುವ ನೀತಿಯನ್ನು ಬಿಡದೆ ಇದ್ದರೆ ನಿಮ್ಮ ಪಕ್ಷ ನೆಲಕಚ್ಚಲು ನಾವೆಲ್ಲ ಒಂದಾಗುತ್ತೇವೆ ಎಂದು ಸುದರ್ಶನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇಂದು ಒಕ್ಕಲಿಗರು, ಅಂದು ಲಿಂಗಾಯತರು: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

ನಿಮ್ಮನ್ನು ತಪ್ಪನ್ನು ಒಪ್ಪಿಕೊಳ್ಳಿ

ನಿಮ್ಮನ್ನು ತಪ್ಪನ್ನು ಒಪ್ಪಿಕೊಳ್ಳಿ

"ಡಿಕೆಶಿಯವರೇ, ನಾನೊಬ್ಬ ಒಕ್ಕಲಿಗನಾಗಿ ನಿಮ್ಮಲ್ಲಿ ಮನವಿ ಮಾಡುತ್ತೇನೆ, ನಿಮ್ಮ ತಪ್ಪುಗಳನ್ನು, ಭ್ರಷ್ಟಾಚಾರವನ್ನೂ ಒಪ್ಪಿಕೊಂಡುಬಿಡಿ. ಆಗ ನಮ್ಮ ಹೃದಯದಲ್ಲಿ ಸ್ಥಾನ ಪಡೆಯುತ್ತೀರಿ. ಭ್ರಷ್ಟ ಹಣ ಎಂದಿಗೂ ನಿಮ್ಮನ್ನು ಮಹನೀಯರನ್ನಾಗಿ ಮಾಡುವುದಿಲ್ಲ. ಶಿಕ್ಷೆಯನ್ನು ಒಪ್ಪಿಕೊಂಡು, ಸ್ವಚ್ಛ ಕೈಯಿಂದ ಆಚೆ ಬನ್ನಿ" ಎಂದಿದ್ದಾರೆ ಮಹೇಶ್ ಎಂಬುವವರು.

ಎಲ್ಲರೂ ಒಂದು!

ಎಲ್ಲರೂ ಒಂದು!

"ಪೇಜಾವರ, ಆರೆಸ್ಸೆಸ್ ಸಂಘಿ ಸ್ವಾಮೀಜಿಗಳು ಕೋಮು ವಿವಾದ ಸೃಷ್ಟಿಮಾಡ್ತಾರೆ. ಲಿಂಗಾಯತ ಸ್ವಾಮಿಗಳು ಅಶ್ಲೀಲ ಚಿತ್ರ ನೋಡ್ತಾರೆ, ಜೈಲುಪಾಲಾಗಿದ್ದ ಸಿಎಂ ಗಳಿಗೆ ಆಶೀರ್ವಾದ ಮಾಡ್ತಾರೆ. ಈಗ ಒಕ್ಕಲಿಗ ಸ್ವಾಮೀಜಿ ಭ್ರಷ್ಟ ಮಾಜಿ ಮಂತ್ರಿಗೆ ಬೆಂಬಲಿಸುತ್ತಿದ್ದಾರೆ. ಎಲ್ಲರೂ ಅಷ್ಟೇ" ಎಂದಿದ್ದಾರೆ ನೂತನ ಎಂಬುವವರು.

ಜಾತ್ಯತೀತ ಭಾರತ!

ಜಾತ್ಯತೀತ ಭಾರತ!

"ಒಕ್ಕಲಿಗರಿಗಾಗಿ ಒಕ್ಕಲಿಗ ಪ್ರತಿಭಟನೆ, ಮುಸ್ಲಿಮರಿಗಾಗಿ ಮುಸ್ಲಿಂ ಪ್ರತಿಭಟನೆ, ಕ್ರೈಸ್ತರಿಗಾಗಿ ಕ್ರೈಸ್ತ ಪ್ರತಿಭಟನೆ.. ಇದು ಜಾತ್ಯತೀತ ಭಾರತ! ನಾವು ಎಂದಿಗೂ ಒಬ್ಬರಿಗಾಗಿ ಒಬ್ಬರು ಜೊತೆಯಾಗಿ ನಿಲ್ಲುವುದಿಲ್ಲ. ಒಗ್ಗಟ್ಟಿನಲ್ಲಿ ಬಿರುಕು ಮೂಡಿಸಿಕೊಂಡವರು ನಾವು, ಇದು ಭಾರತದ ಜಾತ್ಯತೀತ ಪ್ರಜಾಪ್ರಭುತ್ವ" ಎಂದಿದ್ದಾರೆ ಶ್ರೀನಿವಾಸ್

English summary
Social Media Reactions On Vokkaliga Protest in Bengaluru, Twitter Reaction on Vokkaliga Protest for Congress leader DK Shivakumar in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X