ಆಫ್ ಬೀಟ್ : ಪ್ರತಿಭೆ ಅನಾವರಣ, ಹಲವರಿಗೆ ಆಶಾಕಿರಣ

ಬೆಂಗಳೂರು, ಮಾ.11: ಎಸ್ ಎಂಟಿಎ ಭಾರತ ವಿಭಾಗ 'ಆಫ್ ಬೀಟ್' ಹೆಸರಿನಲ್ಲಿ ಒಂದು ವಿಶಿಷ್ಟ ಸಂಗೀತ ಹಬ್ಬವನ್ನು ಮಾ.15, ಭಾನುವಾರ ಸಂಜೆ 6.15ರಿಂದ ಚೌಡಯ್ಯ ಸ್ಮಾರಕ ಭವನದಲ್ಲಿ ಆಚರಿಸುತ್ತಿದೆ.

ಹಿಂದಿ ಚಿತ್ರರಂಗದಲ್ಲಿ ಅಷ್ಟಾಗಿ ಬೆಳಕಿಗೆ ಬಾರದ ಪ್ರತಿಭಾವಂತ ಸಂಗೀತ ಸಂಯೋಜಕರ ಗೀತೆಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಆಫ್ ಬೀಟ್ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ನಿಧಿಯನ್ನು ವಿಕಲ ಚೇತನರಿಗೆ ನೀಡಲಾಗುತ್ತದೆ.

ಒಂದೇ ಕಾರ್ಯಕ್ರಮದ ಮೂಲಕ ಎರಡು ಮಹತ್ಕಾರ್ಯ ಸಾಧಿಸಲು ಯೋಜಿಸಲಾಗಿದೆ. ಬೆಳಕಿಗೆ ಬಾರದ ಪ್ರತಿಭೆಗಳ ಅನಾವರಣ ಹಾಗೂ ವಿಕಲಚೇತನರಿಗೆ ಆಶಾಕಿರಣವಾಗಲಿದೆ.

SMTA Musical event Offbeat at Chowdiah Memorial Hall, Bengaluru

ಈ ವಿಶಿಷ್ಟ ಕಾರ್ಯಕ್ರಮದಲ್ಲಿ ರಿತಿಶಾ ಪದ್ಮನಾಭ, ಮನೋಜ್ ವಶಿಷ್ಠ, ಸಿಂಚನ್ ದೀಕ್ಷಿತ್, ಸಮನ್ವಿತಾ ಶರ್ಮ, ಗೋವಿಂದ್ ಕರ್ನೂಲ್ ಹಾಗೂ ಅನಿಕೇತ್ ಪ್ರಭು ಮುಂತಾದ ಗಾಯಕ, ಗಾಯಕಿಯರು ತಮ್ಮ ಗಾನಸುಧೆ ಹರಿಸಲಿದ್ದಾರೆ.

ಎಸ್ ಎಂಟಿಎ ಬಗ್ಗೆ: ಸರ್ಫೇಸ್ ಮೌಂಟ್ ಟೆಕ್ನಾಲಜಿ ಅಸೋಸಿಯೇಷನ್ (ಎಸ್ ಎಂಟಿಎ) ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಕೌಶಲ್ಯ ಅಭಿವೃದ್ಧಿ, ಪ್ರಾಯೋಗಿಕ ಚಟುವಟಿಕೆಗಳು, ಎಲೆಕ್ಟ್ರಾನಿಕ್ ಅಸೆಂಬ್ಲಿಂಗ್ ತಂತ್ರಜ್ಞಾನ ಕ್ಷೇತ್ರದ ಉತ್ತಮ ಸ್ಥಾನ ಹೊಂದಿದೆ. ಮೈಕ್ರೋಸಿಸ್ಟಮ್ಸ್, ಉನ್ನತ ತಂತ್ರಜ್ಞಾನ ಹಾಗೂ ಸಂಬಂಧಿತ ವ್ಯವಹಾರಿಕ ಚಟುವಟಿಕೆಗಳಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಈ ಸಂಸ್ಥೆಯ ಭಾರತ ವಿಭಾಗ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ.

ಟಿಕೆಟ್ ದರ 350 ರು, 550 ರು ಹಾಗೂ 950 ರು
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845824725
ಟಿಕೆಟ್ ಬುಕ್ ಮಾಡಲು : www.bookurevent.com. ಗೆ ಭೇಟಿ ಕೊಡಿ

ಒನ್ ಇಂಡಿಯಾ ಸುದ್ದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+