Breaking: ದೊಡ್ಡಬಳ್ಳಾಪುರ- ಕನ್ನಡ ನಾಡನ್ನು ಹೊಗಳಿ ರಾಹಲ್ ತೆಗಳಿದ ಸ್ಮೃತಿ ಇರಾನಿ
ದೊಡ್ಡಬಳ್ಳಾಪುರ, ಸೆಪ್ಟೆಂಬರ್ 10: ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಬಂದಿರುವುದು ಸಂತಸ ತಂದಿದೆ ಎಂದು ಹೇಳುತ್ತಾ ಕನ್ನಡ ನಾಡನ್ನು ಹಾಡಿ ಹೊಗಳಿದ್ದಾರೆ.
ಕರ್ನಾಟಕದಲ್ಲಿ ಕಮಲ ಮತ್ತೊಮ್ಮೆ ಅರಳಲಿದೆ. ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ಯುವ ರಾಜಕುಮಾರನ ನೇತೃತ್ವದಲ್ಲಿ ನೆಲಕ್ಕೆ ಅಪ್ಪಳಿಸಲಿದೆ. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಬಂದ ಮೇಲೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಯಾವುದೇ ಭೇದ ಭಾವವನ್ನು ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರವಾಗಿ ಬಿಜೆಪಿ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ರಸ್ತೆ ನಿರ್ಮಾಣಕ್ಕೆ ಎಷ್ಟು ಹಣ ನೀಡಿತ್ತು. ಬಿಜೆಪಿ 9000 ಕೋಟಿ ಹಣವನ್ನು ನೀಡಿದೆ. ಹೊಸ ಯೋಜನೆಗಳು ಕರ್ನಾಟಕದಲ್ಲಿ ಪ್ರಾರಂಭವಾಗುತ್ತಿವೆ ಎಂದರೆ ಅದಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣವಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ರಸ್ತೆಯ ವಿವಿಧ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದಾರೆ. ಬಸವರಾಜ ಬೊಮ್ಮಾಯಿರವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನವನ್ನು ಮೊದಲ ರಾಜ್ಯವಾಗಿ ಮಾಡುತ್ತಿದೆ ಎಂದರು.
ಕರ್ನಾಟಕ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಮೃತ ಯೋಜನೆಯಡಿ ರೈತರಿಗೂ ಅನುಕೂಲ ಮಾಡಲಾಗಿದೆ. ಸಿಲ್ಕ್ ಸೆಕ್ಟರ್ ನಲ್ಲಿ ಕರ್ನಾಟಕ ಉತ್ತಮ ಕಾರ್ಯ ಮಾಡುತ್ತಿದೆ. ಆತ್ಮನಿರ್ಭರವಾಗುವತ್ತ ಹೆಜ್ಜೆಯಿಟ್ಟಿದೆ.
ರಾಹುಲ್ ಗಾಂಧಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಮೋದಿಯವರು ಸರ್ದಾರ್ ಪಟೇಲರ ಪ್ರತಿಮೆ ಸ್ಥಾಪಿಸಿ ಜೋಡಣೆ ಮಾಡಿದ್ದಾರೆ. ರಾಹುಲ್ ಗಾಂಧಿ ಈ ಪ್ರತಿಮೆಯನ್ನು ನೋಡಬೇಕು. ಮೋದಿಯವರು ರಾಜ್ ಪಥ್ ಅನ್ನು ಕರ್ತವ್ಯ ಪಥವನ್ನಾಗಿಸಿದರು. ಬೋಸ್ ರ ಪ್ರತಿಮೆಯನ್ನು ಸ್ಥಾಪಿಸಿದರು. ಈ ಬಗ್ಗೆ ಗಾಂಧಿ ಕುಟುಂಬ ಏನು ಹೇಳುತ್ತೆ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ಸ್ಮೃತಿ ಇರಾನಿ ತಮ್ಮ ಭಾಷಣದುದ್ದಕ್ಕೂ ಗಾಂಧಿ ಪರಿವಾರ ಮತ್ತು ರಾಹುಲ್ ಗಾಂಧಿಯವರ ವಿರುದ್ದ ಹರಿಹಾಯ್ದರು.
ಗಾಂಧಿ ಕುಟುಂಬ ದೇಶಕ್ಕಾಗಿ ಏನನ್ನೂ ಮಾಡಿಲ್ಲ. ಕೋವಿಡ್‌ನಿಂದ ಜನ ಸಂಕಷ್ಟದಲ್ಲಿ ಇದ್ದಾಗ ಜನರಿಗೆ ಉಚಿತವಾಗಿ ಅಕ್ಕಿ ನೀಡಿದ್ದು ನರೇಂದ್ರ ಮೋದಿ ಸರ್ಕಾರ. ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದಾಗ ಕಾಂಗ್ರೆಸ್ ತನ್ನ ಚಮಚಾಗಳಿಂದ ಅದನ್ನು ಟೀಕಿಸುವ ಕೆಲಸ ಮಾಡಿತು ಎಂದು ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications