ಲಾಕ್ ಡೌನ್ ಬಳಿಕ ನಮ್ಮ ಮೆಟ್ರೋ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್ ಕಡ್ಡಾಯ

ಬೆಂಗಳೂರು, ಮೇ 01 : ಲಾಕ್ ಡೌನ್ ಪರಿಣಾಮ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ರೈಲುಗಳ ಸಂಚಾರ ಪುನಃ ಆರಂಭವಾದ ಬಳಿಕ ಪ್ರಯಾಣಿಕರಿಗೆ ಸ್ಮಾರ್ಟ್‌ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.

ಕೊರೊನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕಾಂಟ್ಯಾಕ್ಟ್‌ ಲೆಸ್ ಟ್ರಾವೆಲ್ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ನಿಗದಿತ ಕಾರ್ಯಾಚರಣೆ ವಿಧಿವಿಧಾನ (ಎಸ್‌ಓಪಿ) ತಯಾರು ಮಾಡಲಾಗುತ್ತಿದೆ.

ಎಸ್‌ಓಪಿಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ ಕಡ್ಡಾಯಗೊಳಿಸುವ ಕುರಿತು ಉಲ್ಲೇಖಿಸಲಾಗಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಹಲವಾರು ಜನರು ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಇದನ್ನು ಕಡ್ಡಾಯಗೊಳಿಸು ಚಿಂತನೆ ನಡೆದಿದೆ.

Smart Card May Made Mandatory To Travel In Metro

ಈ ಮೆಟ್ರೋ ಪ್ರಯಾಣಿಕರು ಟೋಕನ್ ಪಡೆಯಲು ಕ್ಯೂನಲ್ಲಿ ನಿಲ್ಲಬೇಕಿದೆ. ಆದರೆ, ಸ್ಮಾರ್ಟ್ ಕಾರ್ಡ್ ಜಾರಿಗೆ ಬಂದರೆ ಜನರು ಕ್ಯೂ ನಿಲ್ಲುವುದನ್ನು ತಡೆಯಬಹುದಾಗಿದೆ. ಕಾರ್ಡ್ ತೋರಿಸಿ ಗೇಟ್ ಮೂಲಕ ರೈಲು ಹತ್ತಲು ಸಾಗಬಹುದು.

ಎಸ್‌ಓಪಿಯಲ್ಲಿ ಎಲ್ಲಾ ಪ್ರಯಾಣಿಕರ ಮತ್ತು ಮೆಟ್ರೋ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್, ಮೆಟ್ರೋ ಸ್ಟೇಷಲ್ ಸ್ವಚ್ಛತೆ ಕಾಪಾಡುವುದು, ರೈಲು ಹತ್ತುವಾಗ ಸಾಮಾಜಿಕ ಅಂತ ಪಾಲನೆ, ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯ ಡೌನ್‌ ಲೋಡ್ ಮುಂತಾದ ಕ್ರಮಗಳನ್ನು ಪರಿಚಯಿಸಲಾಗಿದೆ.

ಮೆಟ್ರೋ ರೈಲಿನ ಸಂಚಾರದ ಮೂಲಕ ಕೋವಿಡ್ - 19 ಹರಡುವುದುನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ತೆಗದುಕೊಳ್ಳುವಂತೆ ಸೂಚನೆ ನೀಡಲಾಗುತ್ತದೆ. ಆದರೆ, ಮೇ 4ರ ಬಳಿಕ ಮೆಟ್ರೋ ಸಂಚಾರ ಆರಂಭವಾಗಲಿದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+