ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ಲೈಸನ್ಸ್ ರಾಜ್ ವಿರುದ್ಧ ಸಿಡಿದೆದ್ದ ಬೀಡಿ-ಸಿಗರೇಟು ಮಾರಾಟಗಾರರು

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಅಡಿಯಲ್ಲಿ 50,000ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಫೆಡರೇಷನ್ ಆಫ್ ರೀಟೇಲರ್ ಅಸೋಸಿಯೇಷನ್ ಆಫ್ ಇಂಡಿಯಾ(ಎಫ್‍ಆರ್‍ಎಐ)ನ ಕರ್ನಾಟಕ ಚಾಪ್ಟರ್ ಪ್ರತಿನಿಧಿಸುತ್ತಿದ್ದು 'ಕರ್ನಾಟಕ ಮುನಿಸಿಪಾಲಿಟಿಗಳ(ಸಿಗರೇಟುಗಳು ಮತ್ತಿತರೆ ತಂಬಾಕು ಉತ್ಪನ್ನಗಳ ಮಾರಾಟ ನಡೆಸುವ ಸ್ಥಳಗಳ ನಿಯಂತ್ರಣಗಳು ಮತ್ತು ತನಿಖೆ) ಮಾದರಿ ಬೈಲಾಗಳು, 2020' ರ ಅನುಷ್ಠಾನವನ್ನು ಬಲವಾಗಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ನೊಂದ ಚಿಲ್ಲರೆ ವ್ಯಾಪಾರಿಗಳು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಮತ್ತಿತರೆ ನಗರಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿ ಈ ಕಾನೂನಿನ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದ್ದು ಇದರಿಂದ ಅವರ ಕುಟುಂಬಗಳು ಬದುಕಲು ಸಾಧ್ಯವಿಲ್ಲ ಎಂದರು. ಬೆಂಗಳೂರಿನಲ್ಲಿ ಇಂದು ದೊಡ್ಡ ಪ್ರಮಾಣದ ಅಂಗಡಿ ಮಾಲೀಕರು ಒಗ್ಗೂಡಿ ಈ ಕಠೋರ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಚಿಲ್ಲರೆ ಬೀಡಿ-ಸಿಗರೇಟು ವ್ಯಾಪಾರಿಗಳ ಸಂಘವು ಕೋವಿಡ್ ಲಾಕ್‍ಡೌನ್‍ಗಳು ಮತ್ತಿತರೆ ನಿರ್ಬಂಧಗಳಿಂದ ಕಳೆದ ಕೆಲ ವರ್ಷಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಹಿನ್ನಡೆ ಅನುಭವಿಸಿದ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವಿನಾಶಕಾರಿಯಾಗಿದೆ ಎಂದು ಬಲವಾಗಿ ನಂಬುತ್ತದೆ. ಇದು ಅತಿಯಾದ ತಂಬಾಕು ಕಾನೂನುಗಳು ಕೂಡಾ ಅವುಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರಿಗಳಿಂದ ಶೋಷಣೆಗಳು ಹಾಗೂ ಭ್ರಷ್ಟಾಚಾರವನ್ನು ಹೆಚ್ಚಿಸುತ್ತವೆ ಎಂದು ಹೇಳಿದೆ.

ವಿಶ್ವದ ಅತಿದೊಡ್ಡ ತಂಬಾಕು ದಾಸ್ಯದ ದೇಶಗಳ ಪಟ್ಟಿ: ಭಾರತಕ್ಕೆ 2ನೇ ಸ್ಥಾನವಿಶ್ವದ ಅತಿದೊಡ್ಡ ತಂಬಾಕು ದಾಸ್ಯದ ದೇಶಗಳ ಪಟ್ಟಿ: ಭಾರತಕ್ಕೆ 2ನೇ ಸ್ಥಾನ

ಈ ಸಂಘವು ಕರ್ನಾಟಕ ರಾಜ್ಯದಾದ್ಯಂತ 2 ಲಕ್ಷಕ್ಕೂ ಹೆಚ್ಚು ಕಿರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಸಂಸ್ಥೆಯಾಗಿದೆ. ಇದು 10 ಲಕ್ಷಕ್ಕೂ ಹೆಚ್ಚು ಬಡವರಲ್ಲಿ ಬಡ ಚಿಲ್ಲರೆ ವ್ಯಾಪಾರಿಗಳ ಹಾಗೂ ಅವರ ಕುಟುಂಬಗಳ ಜೀವನೋಪಾಯ ಮತ್ತು ಅವರ ಜೀವನಗಳು ಮತ್ತು ಜೀವನೋಪಾಯಗಳ ಕುರಿತಂತೆ ಸಮಸ್ಯೆಗಳೂ ಹೆಚ್ಚಾಗುತ್ತಿರುವುದನ್ನು ಕೂಡಾ ಪ್ರತಿನಿಧಿಸುತ್ತದೆ.

ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಅಧ್ಯಕ್ಷ ಬಿ.ಎನ್.ಮುರಳಿ

ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಅಧ್ಯಕ್ಷ ಬಿ.ಎನ್.ಮುರಳಿ

ಪ್ರಸ್ತಾವಿತ ಬೈಲಾಗಳ ಸುತ್ತಲೂ ಹರಡಿರುವ ಕಾಳಜಿಗಳ ಕುರಿತಂತೆ ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಅಧ್ಯಕ್ಷ ಬಿ.ಎನ್.ಮುರಳಿ ಕೃಷ್ಣ, "ಜಾಹೀರಾತು ಮತ್ತು ವ್ಯಾಪಾರ ಹಾಗೂ ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ನಿಷೇಧ ಕಾಯ್ದೆ. 2003, ಅನ್ವಯ ನಮ್ಮ ಸದಸ್ಯರು ಈಗಾಗಲೇ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದು ಅವರ ಅನಕ್ಷರತೆ ಹಾಗೂ ಅಜ್ಞಾನದ ಲಾಭ ಪಡೆಯುತ್ತಾರೆ. ಬೈಲಾದ ಕರಡಿನ ಪ್ರಕಾರ ತಂಬಾಕು ಉತ್ಪನ್ನ ಮಾರಾಟಗಾರರು ಲೈಸೆನ್ಸ್ ಪಡೆಯಬೇಕು ಮತ್ತು ಪ್ರತಿವರ್ಷ ಲೈಸನ್ಸ್ ನವೀಕರಣ ಮಾಡಿಕೊಳ್ಳಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಲೈಸನ್ಸ್ ಪ್ರದರ್ಶಿಸುವುದು ಮತ್ತು ಸಲಹಾ ಪುಸ್ತಕ ಇರಿಸುವುದು ಹಲವು ಜವಾಬ್ದಾರಿಗಳಿದ್ದರೂ ಇದರೊಂದಿಗೆ ಇವುಗಳೊಂದಿಗೆ ನಿಯಂತ್ರಣಕ್ಕೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಹೆಚ್ಚಿನ ದಂಡ ವಿಧಿಸಲಾಗುತ್ತದೆ"

ಸಂಘವು ಅಂತಹ ಕ್ರಮಗಳು ಲಕ್ಷಾಂತರ ಮಂದಿ ಬಡ ಹಾಗೂ ಬಹುತೇಕ ಅನಕ್ಷರಸ್ಥ ಸಣ್ಣ ವ್ಯಾಪಾರಿಗಳಿಗೆ ಅಧಿಕಾರಿಗಳಿಂದ ಅಪಾರ ಶೋಷಣೆಗೆ ಅವಕಾಶ ಕಲ್ಪಿಸುತ್ತದೆ ಎಂದು ನಂಬುತ್ತದೆ. ಇದು ಕೋವಿಡ್ ಸಾಂಕ್ರಾಮಿಕದ ನಂತರ ವ್ಯಾಪಾರ ನಡೆಸುವ ವೆಚ್ಚ ಅಪಾರ ಹೆಚ್ಚಾಗಿದೆ ಮತ್ತು ಹೊಸ ದಾಳಿಯು ಅವರ ಕುಟುಂಬಗಳಿಗೆ ಸಂಪೂರ್ಣ ವಿನಾಶಕಾರಿಯಾಗಿದೆ.

ಮುಖ್ಯಮಂತ್ರಿಗಳ ಧ್ಯೇಯಕ್ಕೆ ಸಂಪೂರ್ಣ ವಿರುದ್ಧ

ಮುಖ್ಯಮಂತ್ರಿಗಳ ಧ್ಯೇಯಕ್ಕೆ ಸಂಪೂರ್ಣ ವಿರುದ್ಧ

ಮುರಳಿ ಕೃಷ್ಣ ಅವರು, ಇತರೆ ಕಾನೂನುಗಳ ಹಿಂದಿನ ಅನುಭವಗಳನ್ನು ಆಧರಿಸಿ ಸಣ್ಣ ವ್ಯಾಪಾರಿಗಳಿಗೆ ಲೈಸೆನ್ಸ್ ಪಡೆಯುವುದು ಬಹಳ ಸವಾಲಿನದಾಗಿದೆ. ಅವರಲ್ಲಿ ಪಾವತಿಸಲು ಹಣವೂ ಇಲ್ಲ, ಅನುಮತಿ ಪಡೆಯಲು ಅಗತ್ಯವಾದ ಕಾಗದಪತ್ರಗಳನ್ನು ಸಿದ್ಧಪಡಿಸುವ ಶಿಕ್ಷಣವೂ ಅವರಿಗೆ ಇಲ್ಲ.

"ಹೆಚ್ಚು ಕಾನೂನುಗಳು ಎಂದರೆ ನಮ್ಮ ಸದಸ್ಯರನ್ನು ಶೋಷಣೆ ಮಾಡಲು ಅಧಿಕಾರಿಗಳಿಗೆ ಹೆಚ್ಚು ಅವಕಾಶಗಳನ್ನು ನೀಡಿದಂತಾಗುತ್ತದೆ. ನಮ್ಮ ಮಾನ್ಯ ಪ್ರಧಾನ ಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ವ್ಯಾಪಾರ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಸುಲಭವಾಗಿ ಉದ್ಯಮ ನಡೆಸುವ' ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ' ನೈಜ ಸ್ಫೂರ್ತಿಯನ್ನು ತರುತ್ತಿದ್ದಾರೆ. ಆದಾಗ್ಯೂ, ನಗರಾಭಿವೃದ್ಧಿ ಇಲಾಖೆಯ ಮಾದರಿ ಬೈಲಾಗಳ ಮೂಲಕ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್ ಕಡ್ಡಾಯಗೊಳಿಸುವ ಪ್ರಸ್ತಾವನೆಯು ಹಾಗೂ ಅದರಲ್ಲಿನ ಕ್ರೂರ ಕಲಂಗಳು ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಧ್ಯೇಯಕ್ಕೆ ಸಂಪೂರ್ಣ ವಿರುದ್ಧವಾಗಿವೆ" ಎಂದರು.

ಕರಡು ಮಾದರಿ ಬೈಲಾಗಳು ಲೈಸನ್ಸ್ ಪಡೆದ ಅಂಗಡಿಯಲ್ಲಿ ಯಾವುದೇ ಕೆಟ್ಟ ಘಟನೆ' ನಡೆದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಈ ಸಮಸ್ಯೆ ಪರಿಹಾರವಾಗುವವರೆಗೆ ಯಾರೂ ಅಂಗಡಿಯ ಆವರಣ ಪ್ರವೇಶಿಸುವಂತಿಲ್ಲ. ಕೆಟ್ಟ ಘಟನೆ'ಯನ್ನು ವ್ಯಾಖ್ಯಾನಿಸದೇ ಇರುವುದರಿಂದ ಇದರ ಉದ್ದೇಶ ಸಣ್ಣ ವ್ಯಾಪಾರಿಗಳಿಗೆ ಕಿರುಕುಳ ನೀಡುವುದೇ ಹೊರತಾಗಿ ಬೇರೇನೂ ಇಲ್ಲ. ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಸದಸ್ಯರು ಸಮಾಜದ ಅತ್ಯಂತ ಕೆಳ ಆರ್ಥಿಕ ಸ್ಥಿತಿಯಲ್ಲಿದ್ದಾರೆ. ಅವರಿಗೆ ಲೈಸನ್ಸ್ ಮತ್ತು ನವೀಕರಣಗಳಿಗೆ ಹೆಚ್ಚುವರಿ ಖರ್ಚು ಮಾಡಲು ಅಸಾಧ್ಯವಾಗಿದೆ.

ಲಕ್ಷಾಂತರ ಮಂದಿ ವ್ಯಾಪಾರಿಗಳಿಗೆ ಆದಾಯ ನಷ್ಟ

ಲಕ್ಷಾಂತರ ಮಂದಿ ವ್ಯಾಪಾರಿಗಳಿಗೆ ಆದಾಯ ನಷ್ಟ

ಈ ಸಂಘಟನೆಯು ಲಕ್ಷಾಂತರ ಮಂದಿ ವ್ಯಾಪಾರಿಗಳಿಗೆ ಆದಾಯ ನಷ್ಟ ಉಂಟು ಮಾಡುವ ಅಂತಹ ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಮುನ್ನ ರಾಜ್ಯ ಸರ್ಕಾರವು ಪರ್ಯಾಯ ಜೀವನೋಪಾಯಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿತು. ತನ್ನ ಸದಸ್ಯರು ಬಿಸ್ಕತ್ತುಗಳು, ತಂಪು ಪಾನೀಯಗಳು, ಖನಿಜಯುಕ್ತ ನೀರು, ಬೀಡಿ, ಸಿಗರೇಟುಗಳು ಇತ್ಯಾದಿ ಉತ್ಪನ್ನಗಳ ಮಾರಾಟದಿಂದ ಜೀವನ ನಡೆಸುತ್ತಾರೆ. "ಲಾಕ್‍ಡೌನ್ ಪೂರ್ವದಲ್ಲಿ ಪ್ರತಿ ತಿಂಗಳಿಗೆ 6,000ರೂ.ಗಳಿಂದ 12,000 ರೂ.ಗಳವರೆಗೆ ಇದ್ದು ಅದು ಇಡೀ ಕುಟುಂಬಕ್ಕೆ ಎರಡು ಹೊತ್ತು ಊಟಕ್ಕೂ ಸಾಲದಾಗಿತ್ತು. ಅವರಲ್ಲಿ ಬಹಳಷ್ಟು ಮಂದಿ ಸರ್ಕಾರದ ಮೇಲೆ ಉದ್ಯೋಗಕ್ಕೆ ಆಧಾರಪಡದೆ ಅಂಗಡಿ ನಡೆಸಲು ಸಾಲ ಪಡೆದು ನಡೆಸುತ್ತಾರೆ. ಈಗ ಎಲ್ಲವೂ ಮುಕ್ತವಾಗಿದ್ದರೂ ಪ್ರಸ್ತಾವಿಸಿದ ಅಂತಹ ಕಠಿಣ ಕಾನೂನುಗಳು ಅವರ ವ್ಯಾಪಾರಗಳಿಗೆ ಹಾನಿಯುಂಟು ಮಾಡುತ್ತವೆ.

ಕೋವಿಡ್ ಲಾಕ್‍ಡೌನ್‍ನ ಅಪಾರ ಆರ್ಥಿಕ ಸಂಕಷ್ಟ ಅನುಭವಿಸಿದ ನಂತರ ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘವು ಕರ್ನಾಟಕದ ನಗರಾಭಿವೃದ್ಧಿ ಸಚಿವಾಲಯವು ಬಡ ಚಿಲ್ಲರೆ ವ್ಯಾಪಾರಿಗಳಿಗೆ ಬೆಂಬಲಿಸುವುದರ ಬದಲಿಗೆ ಮಾರಣಾಂತಿಕವಾದ ಕಾನೂನು ಜಾರಿಗೊಳಿಸುವ ಮೂಲಕ ಅವರ ಶೋಷಣೆ ಹಲವು ಪಟ್ಟು ಹೆಚ್ಚಿಸುವ ಮತ್ತು ವ್ಯಾಪಾರ ನಡೆಸುವ ವೆಚ್ಚ ಹೆಚ್ಚುವಂತೆ ಮಾಡುತ್ತಿರುವುದು ಆಘಾತ ತಂದಿದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್ ಪಡೆಯುವ ಪ್ರಸ್ತಾವಿತ ಕಾನೂನನ್ನು ತಂಬಾಕು ವಿರೋಧಿಸುವ ಎನ್‍ಜಿಒಗಳ ಒತ್ತಡದಿಂದ ತರಲಾಗುತ್ತಿದ್ದು ಪಟ್ಟಭದ್ರ ಹಿತಾಸಕ್ತಿಗಳು ತಂಬಾಕು ಚಿಲ್ಲರೆ ವ್ಯಾಪಾರವನ್ನು ವಿದೇಶಿ ಕಂಪನಿಗಳು/ಸೂಪರ್‍ಮಾರ್ಕೆಟ್‍ಗಳು/ಮಾಲ್‍ಗಳಿಗೆ ವರ್ಗಾಯಿಸುವ ಮೂಲಕ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೆ ಕುತ್ತು ತರುತ್ತಿವೆ.

ಅತ್ಯಂತ ಕಠಿಣ ತಂಬಾಕು ನಿರೋಧಕ ಕಾನೂನು

ಅತ್ಯಂತ ಕಠಿಣ ತಂಬಾಕು ನಿರೋಧಕ ಕಾನೂನು

ಭಾರತ ಈಗಾಗಲೇ ವಿಶ್ವದಲ್ಲಿಯೇ ಅತ್ಯಂತ ಕಠಿಣ ತಂಬಾಕು ನಿರೋಧಕ ಕಾನೂನು ಹೊಂದಿದ್ದು ಅದರಲ್ಲಿ ಶೇ.85ರಷ್ಟು ಪ್ಯಾಕೆಟ್‍ಗಳ ಮೇಲೆ ಗ್ರಾಫಿಕ್ ಹೆಲ್ತ್ ವಾರ್ನಿಂಗ್‍ಗಳು, ಅಪ್ರಾಪ್ತರಿಗೆ ಮಾರಾಟ ಮಾಡದೇ ಇರುವುದು, ಶಿಕ್ಷಣ ಸಂಸ್ಥೆಗಳ 100 ಅಡಿಗಳ ಒಳಗಡೆ ಮಾರಾಟ ಮಾಡದೇ ಇರುವುದು ಇತ್ಯಾದಿ ನಿಯಮಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘವು ಈ ಕಾನೂನುಗಳು ಪ್ರಸ್ತುತ 2003 ಕಾನೂನಿನ ಅಡಿ ತಂಬಾಕು ನಿಯಂತ್ರಣ/ವ್ಯಾಪಾರಗಳು ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ತಕ್ಕುದಾಗಿವೆ. ಆದ್ದರಿಂದ ತಂಬಾಕು ಉತ್ಪನ್ನಗಳ ವ್ಯಾಪಾರಕ್ಕೆ ಯಾವುದೇ ಹೊಸ ಲೈಸನ್ಸಿಂಗ್ ನಿಯಮದ ಅಗತ್ಯವೇ ಇಲ್ಲ.

ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳನ್ನು ಕೋರುವುದೇನೆಂದರೆ ನಗರಾಭಿವೃದ್ಧಿ ಇಲಾಖೆಯ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್ ಪಡೆಯುವ ಕರ್ನಾಟಕ ಮುನಿಸಿಪಾಲಿಟಿಗಳು (ಸಿಗರೇಟುಗಳು ಮತ್ತಿತರೆ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಗಳು ಮತ್ತು ತನಿಖೆ) ಮಾದರಿ ಬೈಲಾಗಳು, 2020 ಅನುಷ್ಠಾನ ಮಾಡಬಾರದು ಹಾಗೂ ಬದಲಿಗೆ ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾದ ಆದಾಯ ನಷ್ಟದಿಂದ ಹೊರಬರಲು ನೆರವಾಗಿ ಎಂದು ವಿನಯಪೂರ್ವಕವಾಗಿ ಕೋರುತ್ತೇವೆ.

(ಮಾಹಿತಿ ಕೃಪೆ:ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘ)

English summary
Small Shopkeepers, Beedi/ cigarette workers, in Karnataka Unite to Oppose Government’s Bid to Introduce License Raj in State Through Draconian Bye-Laws
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X