ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್: ಎಫ್ಐಆರ್ ದಾಖಲಿಸದೇ ಎನ್‌ಸಿಅರ್ ದಾಖಲಿಸಿದ್ದು ಯಾಕೆ?
ಬೆಂಗಳೂರು, ಡಿ. 01: ಕುಳ್ಳ ದೇವರಾಜ್ ಮತ್ತು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಡುವಿನ "ಕೊಲೆ ಸ್ಕೆಚ್" ಸಂಭಾಷಣೆ ಪ್ರಕರಣ ಕ್ಷಣಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಕೊಲೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಶಾಸಕ ಎಸ್.ಅರ್. ವಿಶ್ವನಾಥ್ ನೀಡಿರುವ ದೂರು ಆಧರಿಸಿ ರಾಜಾನುಕುಂಟೆ ಪೊಲೀಸರು ಎನ್‌ಸಿಅರ್ ದಾಖಲಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇದೀಗ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಒಬ್ಬ ಶಾಸಕರಿಗೆ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ದೂರು ನೀಡಿದರೆ ಎನ್‌ಸಿಅರ್ ದಾಖಲು ಮಾಡುತ್ತಾರೆಯೆ? ರಾಜಾನುಕುಂಟೆ ಪೊಲೀಸರು ಎನ್‌ಸಿಅರ್ ದಾಖಲಿಸಿದ್ದು ಯಾಕೆ? ಎಫ್ಐಆರ್ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ. ಕೊಲೆಗೆ ಸ್ಕೆಚ್ ರೂಪಿಸಿದ ಬೆನ್ನಲ್ಲೇ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಸಿಂಗನಾಯಕನಹಳ್ಳಿ ಮನೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ನಿಜವಾಗಿಯೂ ರೌಡಿ ಶೀಟರ್ ಕುಳ್ಳ ದೇವರಾಜ್‌ಗೆ ಕೊಲೆಗೆ ಸ್ಕೆಚ್ ರೂಪಿಸುವ ಸುಪಾರಿ ನೀಡಿದನೇ? ಇಲ್ಲವೇ ಇದರ ಹಿಂದೆ ದೊಡ್ಡ ನಾಟಕವಿದೆಯೇ ಎಂಬ ಅನುಮಾನ ಎದ್ದಿದೆ. ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್ ಹಾಕಿದ ಬೆನ್ನಲ್ಲೇ ಅದೇ ವಿಚಾರ ಒಬ್ಬ ಪೊಲೀಸ್ ಅಧಿಕಾರಿಗೆ ತಿಳಿಯವುದು, ಆ ಪೊಲೀಸ್ ಅಧಿಕಾರಿ ಶಾಸಕರನ್ನು ಭೇಟಿ ಮಾಡಿ ಮಾಹಿತಿ ನೀಡಿರುವ ಈ ಬೆಳವಣಿಗೆ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಕಡಬಗೆರೆ ಸೀನಗೂ ಕೇಸಿನ ಬಿಸಿ: ಬಾಗಲೂರು ಕ್ರಾಸ್ ಬಳಿ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಮೇಲೆ ನಡೆದ ಮಾರಣಾಂತಿಕ ದಾಳಿ ಮತ್ತು ಕುಳ್ಳ ದೇವರಾಜ್‌ಗೆ ಲಿಂಕ್ ಇರುವ ಅನುಮಾನ ವ್ಯಕ್ತವಾಗಿದೆ. ಸೀನನ ಹತ್ಯೆ ಹಿಂದೆ ಕುಳ್ಳ ದೇವರಾಜ್ ಕೈವಾಡವಿದೆ ಎನ್ನಲಾಗಿದೆ. ಸೀನನ ಹತ್ಯೆ ಕೈವಾಡದ ಬಗ್ಗೆ ಮಾತನಾಡಿರುವ ಗೋಪಾಲಕೃಷ್ಣ, "ಸೀನನ ಹತ್ಯೆಯಲ್ಲಿ ನೀನು ಕರೆಕ್ಟ್ ಆಗಿ ಪ್ಲಾನ್ ಮಾಡಿದ್ದೆ ಎಂದು ಕುಳ್ಳ ದೇವರಾಜ್ ಜತೆಗಿನ ಸಂಭಾಷಣೆಯಲ್ಲಿ ಗೋಪಾಲಕೃಷ್ಣ ಮಾತನಾಡಿದ್ದಾನೆ. ಹೀಗಾಗಿ 2017ರಲ್ಲಿ ನಡೆದಿದ್ದ ಕಡಬಗೆರೆ ಸೀನನ ದಾಳಿ ಪ್ರಕರಣ ಇದೀಗ ಮರು ಜೀವ ಪಡೆದುಕೊಂಡಂತಾಗಿದೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಕುಳ್ಳ ದೇವರಾಜ್ ಬಳಿ ಪ್ರಸ್ತಾಪಿಸಿರುವ ಕಡಬಗೆರೆ ಸೀನನ ಪ್ರಕರಣ ಇದೀಗ ಜೀವ ಪಡೆದುಕೊಂಡಿದೆ. ಕಡಬಗೆರೆ ಸೀನನ ಮೇಲಿ ದಾಳಿ ಪ್ರಕರಣ ಕುರಿತು ಪೊಲೀಸರು ಮರು ತನಿಖೆ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಡಿಜಿಪಿ ಸ್ಪಷ್ಟನೆ: ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್ ಹಾಕಿರುವ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ರಾಜಾನುಕುಂಟೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಟಿಯಲ್ಲಿ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಹಂತದಲ್ಲಿ ಪ್ರಕರಣದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ದೂರಿನ ಅನ್ವಯ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

2017 ರಲ್ಲಿ ಯಶವಂತಪುರ ಎಪಿಎಂಸಿ ಯಾರ್ಡ್ ಅಧ್ಯಕ್ಷ ಕಡಬಗೆರೆ ಸೀನನ ಮೇಲೆ ಕೋಗಿಲು ಕ್ರಾಸ್ ಬಳಿ ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಡಬಗೆರೆ ಸೀನನ ಮೇಲಿನ ದಾಳಿ ಸಂಬಂಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕುಳ್ಳ ದೇವರಾಜ್ ಮತ್ತು ಗೋಪಾಲಕೃಷ್ಣ ನಡುವಿನ ಸಂಭಾಷಣೆಯಲ್ಲಿ ಈ ದಾಳಿ ಬಗ್ಗೆ ಮಾತುಕತೆ ನಡೆದಿದ್ದು, ಈ ಪ್ರಕರಣ ಕೂಡ ಹೊಸ ಸ್ವೂರೂಪ ಪಡೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆ.
-
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications