ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಹತ್ಯೆ ಪ್ರಕರಣ: ಸುಳ್ಯದಲ್ಲಿ ಮತ್ತೊಬ್ಬ ಆರೋಪಿಯ ಬಂಧನ

By Manjunatha
|
Google Oneindia Kannada News

ಬೆಂಗಳೂರು, ಜುಲೈ 20: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡವು ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಒಟ್ಟು 8 ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಂಪಂಜೆ ನಿವಾಸಿಯಾಗಿರುವ ಮೋಹನ ನಾಯಕ್ ಎಂಬುವನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದು, ಗೌರಿ ಹತ್ಯೆಯ ಪ್ರಮುಖ ಆರೋಪಿ ಪರುಶುರಾಮ ವಾಘ್ಮೋರೆಗೆ ಈತ ಸಹಾಯ ಮಾಡಿದ್ದ ಎನ್ನಲಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ

ಗೌರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿರುವ ಪರಶುರಾಮ್‌ ವಾಘ್ಮೋರೆಗೆ ಸುಂಕದಕಟ್ಟೆಯಲ್ಲಿ ಮನೆಯನ್ನು ಈತನೇ ಕೊಡಿಸಿದ್ದ ಅಲ್ಲದೆ ಆತನಿಗೆ ಬೈಕ್ ಮತ್ತು ಕಾರು ವ್ಯವಸ್ಥೆಯನ್ನು ಈತನೇ ಮಾಡಿದ್ದ ಎಂದು ಎಸ್‌ಐಟಿ ಆರೋಪ ಮಾಡಿದೆ.

SIT arrest one another acused in Gauri Lankesh murder case

ಮೋಹನ್ ನಾಯಕ್‌ನನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಅನುಮತಿಯಂತೆ 14 ದಿನಗಳ ಕಾಲ ಎಸ್‌ಐಟಿಯ ವಶಕ್ಕೆ ಪಡೆಯಲಾಗಿದೆ.

ಗೌರಿ ಹತ್ಯೆ ಆರೋಪಿಯಿಂದ ಮತ್ತೊಂದು ಸ್ಫೋಟಕ ಮಾಹಿತಿ ಹೊರಕ್ಕೆ ಗೌರಿ ಹತ್ಯೆ ಆರೋಪಿಯಿಂದ ಮತ್ತೊಂದು ಸ್ಫೋಟಕ ಮಾಹಿತಿ ಹೊರಕ್ಕೆ

ಮೋಹನ್ ನಾಯಕ್ ಸೇರಿದಂತೆ ಒಟ್ಟು 14 ಮಂದಿಯನ್ನು ಎಸ್‌ಐಟಿ ಪೊಲೀಸರು ಗೌರಿ ಹತ್ಯೆ ಪ್ರಕರಣದಲ್ಲಿ ಈವರೆಗೆ ಬಂಧಿಸಿದ್ದು ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ಹೊಸ ಚಾರ್ಜ್‌ ಶೀಟ್‌ ಅನ್ನು ಕೆಲವು ದಿನಗಳಲ್ಲಿ ಮತ್ತೆ ಸಲ್ಲಿಸಲಿದ್ದಾರೆ.

English summary
SIT arrersts Mohan Nayak resident of Sulya in murder case of Gauri Lankesh. SIT alleged that Mohan helped main accused of Gauri Lankesh murder case Parashuram Vagmore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X