ಸಿರ್ಸಿ ಸರ್ಕಲ್ ಕಾಮಗಾರಿ ವಿಳಂಬ, ಬಿಬಿಎಂಪಿಯಿಂದ ನೋಟಿಸ್
ಬೆಂಗಳೂರು, ಮೇ 13: ಮೈಸೂರು ರಸ್ತೆಯ ಸಿಸಿ ಸರ್ಕಲ್ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಪಾಲಿಕೆಯು ಏ.8 ಹಾಗೂ 23ರಂದು ಕಾರಣ ಕೇಳಿ ಶ್ರೀ ಸಾಯಿ ತ್ರಿಶಾ ಎಂಜಿನಿಯರಿಂಗ್ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಕಂಪನಿಯು ಈವರೆಗೆ ಉತ್ತರ ನೀಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ಡಿಸೆಂಬರ್ ಅಂತ್ಯದಲ್ಲಿ ಪುರಭವನ-ಮೈಸೂರು ಸರ್ತೆ ಕಡೆಗೆ ಕಾಮಗಾರಿ ಆರಂಭಿಸಲಾಗಿತ್ತು. ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆ ಒಂದು ತಿಂಗಳ ಅವಧಿಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು.

ಪೊಲೀಸರ ಅನುಮತಿ ನಿರಾಕರಣೆ
ಡಾಂಬರು ಹಾಕುವ ಮಾರ್ಗದಲ್ಲಿ ಸಂಚಾರ ಸ್ಥಗಿತಕ್ಕೆ ಪೊಲೀಸ್ ಇಲಾಖೆ ಒಪ್ಪಿಗೆ ನೀಡಿಲ್ಲ. ಇದರಿಂದ ಕಾಮಗಾರಿ ಅನಗತ್ಯವಾಗಿ ಕುಂಟುತ್ತಾ ಸಾಗಿದೆ. ಸದ್ಯ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಮಾಡಿರುವ ಕೆಲಸಕ್ಕೆ ಬಿಲ್ ಪಾವತಿ ಮಾಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

ತಿಂಗಳಲ್ಲಿ ಕಾಮಗಾರಿ ಪೂರ್ಣ ಎಂದ ಪಾಲಿಕೆ
ಬಾಕಿ ಇರುವ ಕಾಮಗಾರಿ ಆರಂಭಿಸಲು ನಮಗೆ ತೊಂದರೆ ಇಲ್ಲ, ಪೊಲೀಸರು ಅನುಮತಿ ನೀಡಿದಲ್ಲಿ ಶೀಘ್ರ ಕಾಮಗಾರಿ ಆರಂಭಿಸಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

1.5 ಕಿ.ಮೀ ವರೆಗೆ ಡಾಂಬರು
ಮೇಲ್ಸೇತುವೆಯ ರಾಯನ್ ವೃತ್ತ ದಿಂದ ಮೈಸೂರು ರಸ್ತೆಯ ಕಡೆಗೆ 1.5 ಕಿಮೀ ಡಾಂಬರು ಪದರ ತೆರವುಕಾರ್ಯ ಮುಗಿದಿದೆ. ಸಿರ್ಸಿ ಸರ್ಕಲ್ ಫ್ಲೈಓವರ್ ಮೇಲೆ ಗುಂಡಿಗಳು ಇರುವುದರಿಂದ ಮರುಡಾಂಬರೀಕರಣ ಮಾಡಲು ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಂಡಿದೆ ಹೀಗಾಗಿ ಸಿರ್ಸಿ ಸರ್ಕಲ್ ಮೇಲ್ಸೇತುವೆ ಮೇಲೆ ವಾಹನ ನಿರ್ಬಂಧಿಸಲಾಗಿದೆ.

ಕಾಮಗಾರಿ, ವೆಚ್ಚದ ಕುರಿತು ಮಾಹಿತಿ ಹೀಗಿದೆ
ಸುಮಾರು 2.65 ಕಿ.ಮೀ ಉದ್ದವಿರುವ ಮೇಲ್ಸೇತುವೆಯ ದುರಸ್ತಿಗೆ 4.30 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ನಾಗೇಶ್ ಮಾಯಣ್ಣ ಸಾಯಿ ತ್ರಿಷಾ ಇನ್‌ಫ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಈ ಅವಧಿಯಲ್ಲಿ ಪುರಭವನದಿಂದ ಮೈಸೂರು ರಸ್ತೆ ಮತ್ತು ಚಾಮರಾಜಪೇಟೆಯ ಕಡೆಗೆ ಸಾಗುವವರು ಪರ್ಯಾಯ ರಸ್ತೆಗಳಲ್ಲಿ ತೆರಳಬೇಕಾಗುತ್ತದೆ. ಒಂದು ಪದರ ಡಾಂಬರು ಕಿತ್ತು ಹಾಕಿ, 3 ಎಂಎಂ ದಪ್ಪದ ಡಾಂಬರು ಶೀಟ್ ಹೊದಿಸಲಾಗುತ್ತದೆ. ಬಳಿಕ 40 ಎಂಎಂ ದಪ್ಪದ ಬಿಟುಮಿನ್ ಹಾಕಲಾಗುವುದು ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದ್ದಾರೆ.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications