Get Updates
Get notified of breaking news, exclusive insights, and must-see stories!

ಸಿಐಡಿ ಪ್ರಶ್ನೆಗಳಿಗೆ ಅಲೋಕ್ ಕುಮಾರ್ ಉತ್ತರವೇನು?

ಬೆಂಗಳೂರು, ಮೇ.24: ಸುಮಾರು ಆರೇಳು ವರ್ಷಗಳಿಂದ ಹುದುಗಿ ಹೋಗಿದ್ದ ಲಾಟರಿ ದಂಧೆ ತನಿಖೆ ಮತ್ತೆ ಚಿಗುರೊಡೆದುಕೊಂಡಿದೆ.ಆರು ತಿಂಗಳ ಹಿಂದೆ ಪಾರಿ ರಾಜನ್ ಮನೆಗೆ ಅಲೋಕ್ ಕುಮಾರ್ ತೆರಳಿದ್ದರು ಎಂಬುದು ಭಾನುವಾರ ನಡೆದ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ಇರುವ ಸಿಐಡಿ ಕಚೇರಿಯಲ್ಲಿ ಸುಮಾರು 25ಕ್ಕೂ ಅಧಿಕ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಕಾರ್ಯ ಬೆಳಗ್ಗಿನಿಂದ ಜಾರಿಯಲ್ಲಿದೆ. ಅಮಾನತುಗೊಂಡಿರುವ ಬೆಂಗಳೂರು ಕಾನೂನು ಸುವ್ಯವಸ್ಥೆ ವಿಭಾಗ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಅವರನ್ನು ಇಂದು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟರು.

2007ರಲ್ಲೇ ಒಂದಂಕಿ ಲಾಟರಿ ನಿಷೇಧ ಮತ್ತೆ ಚಾಲನೆ ಸಿಕ್ಕಿದ್ದು ಯಾವಾಗ? ಆರು ತಿಂಗಳ ಹಿಂದೆ ಕೋಲಾರ, ಬಂಗಾರಪೇಟೆಯಲ್ಲಿ ಪಾರಿ ರಾಜನ್ ಜೊತೆ ನೀವು ಇದ್ದಿದ್ದು ನಿಜವೇ? ಪಾರಿ ರಾಜನ್ ನಿಮ್ಮ ಕುಟುಂಬದ ಸ್ನೇಹಿತನೇ? ಎಂಬ ಪ್ರಶ್ನೆಗಳನ್ನು ಸಿಐಡಿ ತಂಡ ಕೇಳಿದೆ. ಅನೇಕ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ. [ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು]

Alok Kumar -Pari Rajan Nexus

ಪಾರಿ ರಾಜನ್ ನೀಡಿರುವ ಹೇಳಿಕೆ: ಪಾರಿರಾಜನ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ದಂಧೆಗೆ ಸಹಕರಿಸಿದ ಅಧಿಕಾರಿಗಳ ಹೆಸರು ಹಾಗೂ ಲಾಭದ ಕುರಿತು ವಿವರಿಸಿದ್ದಾನೆ. ಪಾರಿರಾಜನ್​ನ ಜತೆ ಅಧಿಕಾರಿಗಳಿಗೆ ಯಾವ ರೀತಿ ಸಂಬಂಧ ಮತ್ತು ಲಾಟರಿ ದಂಧೆಯಲ್ಲಿ ಅವರು ನಿರ್ವಹಿಸಿದ ಪಾತ್ರ ಬಗ್ಗೆ ವಿಚಾರಣೆ ವೇಳೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಸಿಐಡಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. [ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲರೀ!]

ಕಾಲ್ ಡೀಟೈಲ್ ರೆಕಾರ್ಡ್ (ಸಿಡಿಆರ್) ಪಾರಿ ರಾಜನ್ ಈ ಕೆಳಕಂಡ ಅಧಿಕಾರಿಗಳಿಗೆ ಕರೆ ಮಾಡಿದ್ದಾನೆ.
* ಆರಕ್ಕೂ ಅಧಿಕ ಅಧಿಕಾರಿಗಳಿಗೆ ಕರೆ ಮಾಡಿದ್ದಲ್ಲದೆ, ನಿರಂತರವಾಗಿ ಉನ್ನತ ಅಧಿಕಾರಿಗಳ ಕಚೇರಿಯಲ್ಲಿ ಪಾರಿ ಕಾಣಿಸಿಕೊಳ್ಳುತ್ತಿದ್ದ.
* ಎಡಿಜಿಪಿ ಶ್ರೇಣಿಯ ಅಧಿಕಾರಿಗಳು ಈಗ ಪಾರಿ ರಾಜನ್ ಹಾಗೂ ಐಪಿಎಸ್ ಅಧಿಕಾರಿಗಳ ನಂಟಿನ ಕಥೆಯ ಗಂಟು ಬಿಚ್ಚುತ್ತಿದ್ದಾರೆ.
* ಧರಣೇಶ್, ಲಾಟರಿ ನಿಯಂತ್ರಣ ದಳ,ಎಸ್ ಪಿ
* ಅಲೋಕ್ ಕುಮಾರ್, ಐಜಿಪಿ, ಹೆಚ್ಚುವತಿ ಆಯುಕ್ತ (ಪಶ್ಚಿಮ), ಬೆಂಗಳೂರು
* ಬೆಂಗಳೂರಿನಲ್ಲಿರುವ ಎಡಿಜಿಪಿ ಶ್ರೇಣಿ ಅಧಿಕಾರಿ.
* ಬೆಂಗಳೂರಿನಲ್ಲಿರುವ ಐಜಿಪಿ ಶ್ರೇಣಿ ಅಧಿಕಾರಿ.
* ಮಾಜಿ ಪೊಲೀಸ್ ಆಯುಕ್ತ(ಬೆಂಗಳೂರು) ನಿವೃತ್ತ ಎಡಿಜಿಪಿ ಶ್ರೇಣಿ ಅಧಿಕಾರಿ.
* ನಿವೃತ್ತ ಡಿಜಿ ಹಾಗೂ ಐಜಿಪಿ ಶ್ರೇಣಿ ಅಧಿಕಾರಿ, ಮಾಜಿ ಪೊಲೀಸ್ ಆಯುಕ್ತ(ಬೆಂಗಳೂರು)

ಅಕ್ರಮ ಲಾಟರಿ ಕಿಂಗ್‌ಪಿನ್ ಪಾರಿರಾಜನ್ ಜತೆಗಿನ ಸಂಬಂಧ, ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ, ಪಾರಿರಾಜನ್ ಅವರನ್ನು ಯಾರು ಪರಿಚಯ ಮಾಡಿಕೊಟ್ಟರು ಎಂಬಿತ್ಯಾದಿ ವಿಷಯಗಳ ಬಗ್ಗೆ ವಿಚಾರಣೆ ನಡೆಸಲಾಗಿದೆ. ಅಲೋಕ್‌ಕುಮಾರ್ ಹಾಗೂ ಧರಣೇಶ್ ವಿಚಾರಣೆ ಭಾನುವಾರ ನಡೆಸಲಾಗಿದೆ. ಇನ್ನಷ್ಟು ಅಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಸಿಐಡಿ ತನಿಖಾ ತಂಡ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+